ಜನುಮದಿನ | ಆಶಾ ಬೋಸ್ಲೆ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ಭಾರತೀಯ ಚಿತ್ರರಂಗದ ಮೇರು ಹಿನ್ನೆಲೆ ಗಾಯಕಿ ಆಶಾ ಬೋಸ್ಲೆ ಇಂದು 85ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಅಕ್ಕ, ಗಾಯಕಿ ಲತಾ ಮಂಗೇಶ್ಕರ್‌ಗೆ ತೀವ್ರ ಪೈಪೋಟಿ ಒಡ್ಡಿದ ಗಾಯಕಿ. ಇವರ ನೂರಾರು ಜನಪ್ರಿಯ ಹಾಡುಗಳ ಪೈಕಿ ಆಯ್ದ ಹತ್ತು ಹಾಡಿನ ವಿಡಿಯೋ ಇಲ್ಲಿದೆ

ಆಶಾ ಬೋಂಸ್ಲೆ ಹಿನ್ನೆಲೆ ಗಾಯನ ಆರಂಭಿಸಿದ್ದು 1943ರಲ್ಲಿ. ಸುಮಾರು ಆರು ದಶಕಗಳಿಗಿಂತ ಹೆಚ್ಚು ಕಾಲ ಇಪ್ಪತ್ತು ಭಾಷೆಗಳ ಹನ್ನೊಂದು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಆಶಾ ದನಿಯಾಗಿದ್ದಾರೆ. ಮೇರುಗಾಯಕಿ ಲತಾ ಮಂಗೇಶ್ಕರ್ ಕಿರಿಯ ಸಹೋದರಿ ಆಶಾ, ಒಂದು ಕಾಲದಲ್ಲಿ ಅಕ್ಕನಿಗೆ ಪೈಪೋಟಿ ನೀಡಿದವರು. ಸಿನಿಮಾ ಸಂಗೀತ, ಪಾಪ್‌, ಗಜಲ್, ಭಜನ್‌, ಭಾರತೀಯ ಶಾಸ್ತ್ರೀಯ ಸಂಗೀತ, ಖವ್ವಾಲಿ, ಜಾನಪದ... ಹೀಗೆ ಎಲ್ಲ ಪ್ರಕಾರಗಳಲ್ಲೂ ಅವರು ಹಾಡಿದ್ದಾರೆ. ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ (2000), ಪದ್ಮವಿಭೂಷಣ (2008) ಗೌರವ ಸಂದಿವೆ. ಶ್ರೇಷ್ಠ ಹಿನ್ನೆಲೆ ಗಾಯನಕ್ಕೆ ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಆಶಾ, ಏಳು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಶಾ ಬೋಂಸ್ಲೆ ಅವರ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ.

ಸಿನಿಮಾ: ಯಾದೋ ಕಿ ಬಾರಾತ್‌ (1973) | ಸಂಗೀತ: ಆರ್‌ ಡಿ ಬರ್ಮನ್‌

ಸಿನಿಮಾ: ಹರೆ ರಾಮ ಹರೆ ಕೃಷ್ಣ (1971) | ಸಂಗೀತ: ಆರ್‌ ಡಿ ಬರ್ಮನ್‌

ಸಿನಿಮಾ: ರಬ್‌ ರಾಖಾ | ಸಂಗೀತ: ನಿತಿನ್ ಶಂಕರ್‌

ಸಿನಿಮಾ: ಕಾರವಾನ್‌ | ಸಂಗೀತ: ಆರ್‌ ಡಿ ಬರ್ಮನ್‌

ಸಿನಿಮಾ: ನಮಕ್‌ ಹಲಾಲ್‌ (1982) | ಸಂಗೀತ: ಬಪ್ಪಿ ಲಹರಿ

ಇದನ್ನೂ ಓದಿ : ಸ್ಮರಣೆ | ಗಾಯಕ ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

ಸಿನಿಮಾ: ಉಮ್ರಾವೋ ಜಾನ್‌ (1981) | ಸಂಗೀತ: ಖಯ್ಯಾಮ್‌

ಸಿನಿಮಾ: ಶಿಕಾರ್‌ (1968) | ಸಂಗೀತ: ಶಂಕರ್ ಜೈಕಿಶನ್‌

ಸಿನಿಮಾ: ತಕ್ಷಕ್‌ (1999) | ಸಂಗೀತ: ಎ ಆರ್ ರೆಹಮಾನ್‌

ಸಿನಿಮಾ: ಜ್ಯೂವೆಲ್ ಥೀಫ್‌ (1967) | ಸಂಗೀತ: ಎಸ್ ಡಿ ಬರ್ಮನ್‌

ಸಿನಿಮಾ: ಮೇರೆ ಜೀವನ್ ಸಾಥಿ (1972) | ಸಂಗೀತ: ಆರ್‌ ಡಿ ಬರ್ಮನ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More