ಜನುಮದಿನ | ನಟ ರಮೇಶ್‌ ಅರವಿಂದ್‌ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ

ತೊಂಬತ್ತರ ದಶಕದ ನಂತರ ಫ್ಯಾಮಿಲಿ ಹೀರೋ ಆಗಿ ಮಿಂಚಿದ ನಟ ರಮೇಶ್ ಅರವಿಂದ್‌. ಅವರ ರೊಮ್ಯಾಂಟಿಕ್‌ ಸಿನಿಮಾಗಳು ಸಾಲಾಗಿ ಯಶಸ್ಸು ಕಂಡಿದ್ದವು. ಇಂದು ರಮೇಶ್ 54ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳ ಗೆಲುವಿನ ಹಾದಿಯನ್ನು ಶ್ರೀಮಂತಗೊಳಿಸಿದ ನಟರಲ್ಲಿ ರಮೇಶ್ ಅರವಿಂದ್ ಪ್ರಮುಖರು. ತೊಂಬತ್ತರ ದಶಕದ ಆಕ್ಷನ್ ಸಿನಿಮಾಗಳ ಮಧ್ಯೆ ರಮೇಶ್ ತಮ್ಮದೇ ಒಂದು ದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡರು. ಈ ಬಳಗದಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು ಎನ್ನುವುದು ವಿಶೇಷ. 1995ರಿಂದ 1998ರ ಅವಧಿಯಲ್ಲಿ ತೆರೆಕಂಡ ಅವರ ಹತ್ತು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸಾಲಾಗಿ ಯಶಸ್ಸು ಕಂಡಿದ್ದವು. ತೆರೆ ಮೇಲೆ ಮಾತ್ರವಲ್ಲದೆ ತೆರೆಯಾಚೆಗೂ ಆಕರ್ಷಕ ವ್ಯಕ್ತಿತ್ವ, ಹೃದಯವಂತಿಕೆಯಿಂದ ಇಷ್ಟವಾಗುತ್ತಾರೆ. ಕಿರುತೆರೆಯ ಜನಪ್ರಿಯ ನಿರೂಪಕರೂ ಹೌದು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ರಮೇಶ್‌ ಅಭಿನಯಿಸಿದ್ದಾರೆ. ಅವರ ನೂರನೇ ಕನ್ನಡ ಚಿತ್ರವಾಗಿ ‘ಪುಷ್ಪಕ ವಿಮಾನ’ ಕಳೆದ ವರ್ಷ ತೆರೆಕಂಡಿತ್ತು. ‘ರಾಮ ಶಾಮ ಭಾಮ’ ಚಿತ್ರದೊಂದಿಗೆ ನಿರ್ದೇಶಕರಾದ ಅವರು ಏಳು ಚಿತ್ರಗಳ ನಿರ್ದೇಶಕರೂ ಹೌದು. ಪ್ರಸ್ತುತ ಅವರು ‘ಬಟರ್‌ಫ್ಲೈ’ ಕನ್ನಡ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ರಮೇಶ್ ಸಿನಿಮಾಗಳ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ.

ಸಿನಿಮಾ: ಸುಂದರ ಸ್ವಪ್ನಗಳು (1986) | ಸಂಗೀತ: ವಿಜಯ ಭಾಸ್ಕರ್‌

ಸಿನಿಮಾ: ಬೆಳ್ಳಿ ಮೋಡಗಳು (1992) | ಸಂಗೀತ: ಉಪೇಂದ್ರ ಕುಮಾರ್‌

ಸಿನಿಮಾ: ಶ್ರೀಗಂಧ (1995) | ಸಂಗೀತ: ಹಂಸಲೇಖ

ಸಿನಿಮಾ: ನಮ್ಮೂರ ಮಂದಾರ ಹೂವೇ (1997) | ಸಂಗೀತ: ಇಳಯರಾಜ

ಸಿನಿಮಾ: ಅಮೃತವರ್ಷಿಣಿ (1997) | ಸಂಗೀತ: ದೇವ

ಸಿನಿಮಾ: ಹೂಮಳೆ (1998) | ಸಂಗೀತ: ಇಳಯರಾಜ

ಸಿನಿಮಾ: ಚಂದ್ರಮುಖಿ ಪ್ರಾಣಸಖಿ (1999) | ಸಂಗೀತ: ಕೆ ಕಲ್ಯಾಣ್‌

ಸಿನಿಮಾ: ಆಪ್ತಮಿತ್ರ (2004) | ಸಂಗೀತ: ಗುರುಕಿರಣ್‌

ಸಿನಿಮಾ: ರಾಮ ಶಾಮ ಭಾಮ (2005) | ಸಂಗೀತ: ಗುರುಕಿರಣ್‌

ಸಿನಿಮಾ: ಪುಷ್ಪಕ ವಿಮಾನ (2017) | ಸಂಗೀತ: ಚರಣ್ ರಾಜ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More