ವಿಡಿಯೋ | ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ತಾರೆಯರೊಂದಿಗೆ ಮಾತುಕತೆ 

ಅಭಿಷೇಕ್ ಬಚ್ಚನ್‌, ವಿಕ್ಕಿ ಕೌಶಾಲ್ ಮತ್ತು ತಾಪಸಿ ಪನ್ನು ಅಭಿನಯದ ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ತಾರೆಯರು ತಮ್ಮ ಸಿನಿಮಾ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ

ಅನುರಾಗ್ ಕಶ್ಯಪ್ ನಿರ್ದೇಶನದ ತ್ರಿಕೋನ ಪ್ರೇಮಕಥೆ ‘ಮನ್‌ಮರ್ಝಿಯಾ’ ಇದೇ ತಿಂಗಳ 14ರಂದು ತೆರೆಕಾಣಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್, ತ್ರಿಕೋನ ಪ್ರೇಮ ಕತೆಯ ಸುಳಿವು ನೀಡಿತ್ತು. ಕರಾರುಗಳಿಲ್ಲದೆ ಪ್ರೀತಿಸುವ ಇಬ್ಬರು ಪ್ರೇಮಿಗಳು, ಜವಾಬ್ದಾರಿಗಳ ಗೋಜಿಗೆ ಬೀಳದೆ ಬರಿ ಪ್ರೀತಿಗೆ ಸೀಮಿತವಾಗಿ ಉಳಿದು ಬಿಡುವ ಇನಿಯ, ಈ ಎಲ್ಲ ಬೆಳವಣಿಗೆಯ ನಡುವೆಯೇ ಬಾಳಸಂಗಾತಿಯನ್ನು ಹುಡುಕಿ ಭಾರತಕ್ಕೆ ಬರುವ ರೂಬಿ, ರೂಮಿಯನ್ನು ನೋಡುತ್ತಲೇ ಮದುವೆಗೆ ಸಜ್ಜಾಗುತ್ತಾನೆ.

ಇತ್ತ ಬೇಜವಾಬ್ದಾರಿ ಪ್ರಿಯತಮ, ಅತ್ತ ನೀನೇ ಬೇಕೆನ್ನುವ ರೂಬಿ, ಇಬ್ಬರ ಪ್ರೀತಿ ನಡುವಣ ನಾಯಕಿ ಗೊಂದಲಕ್ಕೀಡಾಗುತ್ತಾಳೆ. ಮುಂದೆ ತಾನು ಯಾರನ್ನು ಬಾಳಸಂಗಾತಿಯಾಗಿ ಆಯ್ದುಕೊಳ್ಳುತ್ತಾಳೆ ಎನ್ನುವುದು ಕತೆಯ ಜೀವಾಳ. ಸೆಪ್ಟೆಂಬರ್‌ 14ರಂದು ಚಿತ್ರ ತೆರೆಕಾಣುತ್ತಿದೆ. ಚಿತ್ರತಂಡ ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದೆ, ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಚಿತ್ರದ ತಾರೆಯರು ಭಾಗಿಯಾಗಿದ್ದರು.

ಇದನ್ನೂ ಓದಿ : ವೈರಲ್ ಆಯ್ತು ಅಳಿಯ ಅಹಿಲ್‌ ಜೊತೆಗಿನ ಸಲ್ಮಾನ್ ಖಾನ್‌ ಆರ್ಟ್‌ ವಿಡಿಯೋ 

‘ಮನ್‌ಮರ್ಝಿಯಾ’ ಚಿತ್ರದ ಮೂಲಕ ಅಭಿಷೇಕ್‌ ಬಚ್ಚನ್ ಎರಡು ವರ್ಷಗಳ ನಂತರ ಬೆಳ್ಳಿತೆರೆಗೆ ವಾಪಸಾಗಿದ್ದಾರೆ. ಉತ್ತಮ ಪಾತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ತಾಪ್ಸಿ ಪನ್ನು, ಇದೀಗ ಬಾಲಿವುಡ್‌ನ ಬೇಡಿಕೆಯ ತಾರೆ. ಪ್ರಯೋಗಶೀಲ ಪಾತ್ರಗಳಲ್ಲಿ ನಟಿಸುತ್ತಿರುವ ಅವರು, ಅನುರಾಗ್‌ ಕಶ್ಯಪ್‌ ನಿರ್ದೇಶನದ ‘ಮನ್‌ಮರ್ಝಿಯಾ’ ಚಿತ್ರದ ಬಗ್ಗೆ ಅಪಾರ ಭರವಸೆಯಿಂದ ಮಾತನಾಡುತ್ತಾರೆ. ಆನಂದ್ ಎಲ್ ರಾಯ್‌ ನಿರ್ಮಾಣದ ಈ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More