ವೈರಲ್ ಆಯ್ತು ಅಳಿಯ ಅಹಿಲ್‌ ಜೊತೆಗಿನ ಸಲ್ಮಾನ್ ಖಾನ್‌ ಆರ್ಟ್‌ ವಿಡಿಯೋ 

ಬಾಲಿವುಡ್ ನಟ ಸಲ್ಮಾನ್‌ ಖಾನ್‌ಗೆ ಪೇಂಟಿಂಗ್ ಬಲು ಇಷ್ಟ. ಅವರು ತಮ್ಮ ಅಳಿಯ ಪುಟಾಣಿ ಅಹಿಲ್‌ಗೆ ಪೇಂಟಿಂಗ್‌ ಕಲಿಸುವ, ಅವನಿಗಾಗಿ ನೆಲದಲ್ಲಿ ತೆವಳುವ ವಿಡಿಯೋ ಇದೀಗ ವೈರಲ್ ಆಗಿದೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ

ಸಲ್ಮಾನ್ ಖಾನ್‌ ತಮಾಷೆ ವಿಡಿಯೋಗಳು ಆಗಿಂದಾಗ್ಗೆ ಸೊಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಈ ಬಾರಿ ಸಲ್ಲೂ ಸಹೋದರಿ ಅರ್ಪಿತಾ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅರ್ಪಿತಾ ಪುತ್ರ ಅಹಿಲ್ ಜೊತೆಗಿನ ಸಲ್ಲೂ ಆಟದ ಈ ವಿಡಿಯೋ ವೈರಲ್ ಆಗಿದೆ. ಸಲ್ಮಾನ್‌ಗೆ ಪೇಂಟಿಂಗ್ ತುಂಬಾ ಇಷ್ಟ. ವಿಡಿಯೋದಲ್ಲಿ ಅಹಿಲ್‌ಗೆ ಪೇಂಟಿಂಗ್ ಕಲಿಸುವ, ನೆಲದಲ್ಲಿ ತೆವಳುತ್ತ ಪುಟಾಣಿಯನ್ನು ನಗಿಸುವ ಸಲ್ಮಾನ್‌ರನ್ನು ನೋಡಬಹುದು.

ಅಹಿಲ್ ಜೊತೆಗಿನ ಸಲ್ಮಾನ್ ವಿಡಿಯೋಗಳು ಈ ಹಿಂದೆಯೂ ಬಂದಿದ್ದವು. ಸಲ್ಮಾನ್‌ ಅಭಿನಯದ ‘ಸುಲ್ತಾನ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಮೊದಲ ಬಾರಿಗೆ ಇಬ್ಬರ ವಿಡಿಯೋ ಹೊರಬಿದ್ದಿತ್ತು. ಪುಟಾಣಿ ಅಹಿಲ್‌ ಜೊತೆ ಕುಸ್ತಿ ಮಾಡುವ ಈ ಮುದ್ದಾದ ವಿಡಿಯೋ ಲಕ್ಷಾಂತರ ಜನರ ಪ್ರೀತಿಗೆ ಪಾತ್ರವಾಗಿತ್ತು. ಸದ್ಯ ಸಲ್ಮಾನ್ ಖಾನ್‌ ತಮ್ಮ ಸಹೋದರಿ ಅರ್ಪಿತಾ ಪತಿ ಆಯುಶ್ ಶರ್ಮಾ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಉಮೇದಿನಲ್ಲಿದ್ದಾರೆ. ಸಲ್ಮಾನ್ ನಿರ್ಮಾಣದಲ್ಲಿ ತಯಾರಾಗಿರುವ ‘ಲವ್‌ ರಾತ್ರಿ’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ.

ಇದನ್ನೂ ಓದಿ : ನಟಿ ಸ್ವರ ಭಾಸ್ಕರ್‌ ದೂರು; ನಿರ್ದೇಶಕ ಅಗ್ನಿಹೋತ್ರಿ ಟ್ವಿಟರ್‌ ಅಕೌಂಟ್ ಬ್ಲಾಕ್ 

ಇನ್ನು, ಸಲ್ಮಾನ್ ತಮ್ಮ‌ ‘ಭಾರತ್‌’ ಸಿನಿಮಾ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಅಲಿ ಅಬ್ಬಾಸ್ ಜಾಫರ್‌ ನಿರ್ದೇಶನದ ಈ ಚಿತ್ರದ ಮೊದಲ ಶೆಡ್ಯೂಲ್‌ ಪೂರ್ಣಗೊಂಡಿದೆ. ಕತ್ರಿನಾ ಕೈಫ್ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಸಲ್ಮಾನ್ ನಿರೂಪಿಸುತ್ತಿದ್ದ ಶೋ ‘ದಸ್ ಕಾ ದಮ್‌’ ಮೊನ್ನೆಯಷ್ಟೇ ಮುಕ್ತಾಯವಾಗಿದೆ. ಬಿಗ್‌ಬಾಸ್‌ ಹನ್ನೆರಡನೇ ಸೀಸನ್ ಸೆಪ್ಟೆಂಬರ್‌ 16ರಂದು ಆರಂಭವಾಗುತ್ತಿದ್ದು, ಸಲ್ಲೂ ಶೋ ನಿರೂಪಿಸುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More