ನಟಿ ಸ್ವರ ಭಾಸ್ಕರ್‌ ದೂರು; ನಿರ್ದೇಶಕ ಅಗ್ನಿಹೋತ್ರಿ ಟ್ವಿಟರ್‌ ಅಕೌಂಟ್ ಬ್ಲಾಕ್ 

ಕ್ರೈಸ್ತ ಸನ್ಯಾಸಿನಿ ಬಗ್ಗೆ ಕೇರಳ ಶಾಸಕರೊಬ್ಬರು ಹಗುರವಾಗಿ ಮಾತನಾಡಿದ್ದರು. ಇದನ್ನು ಖಂಡಿಸಿದ್ದ ಬಾಲಿವುಡ್‌ ನಟಿ ಸ್ವರ ಭಾಸ್ಕರ್‌ ಟ್ವೀಟ್‌ಗೆ ಚಿತ್ರನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು. ಇದೀಗ, ಸ್ವರ ಭಾಸ್ಕರ್ ದೂರಿನ ಮೇರೆಗೆ ಅಗ್ನಿಹೋತ್ರಿ ಟ್ವಿಟರ್ ಅಕೌಂಟ್ ಬ್ಲಾಕ್ ಆಗಿದೆ

ಚರ್ಚ್‌ ಬಿಷಪ್‌ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪಿಸಿ, ಬಂಧನಕ್ಕೆ ಒತ್ತಾಯಿಸಿದ್ದರು. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಅಲ್ಲಿನ ಶಾಸಕ ಪಿ ಸಿ ಜಾರ್ಜ್‌ ಕ್ರೈಸ್ತ ಸನ್ಯಾಸಿನಿ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬಾಲಿವುಡ್ ನಟಿ ಸ್ವರ ಭಾಸ್ಕರ್ ಇದನ್ನು ಖಂಡಿಸಿ, “ಇದು ಅತ್ಯಂತ ಹೇಯ. ಈ ವಿಚಾರದಲ್ಲಿ ಇದು ಕೀಳುಮಟ್ಟದ ಹೇಳಿಕೆ,” ಎಂದು ಟ್ವೀಟ್ ಮಾಡಿದ್ದರು.

ಬಾಲಿವುಡ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದಕ್ಕೆ ಪ್ರತಿಕ್ರಿಯಿಸಿ, #Metoo ಪ್ರಸ್ತಾಪಿಸಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ವರ ಭಾಸ್ಕರ್‌, “ಅತ್ಯಾಚಾರ ಆರೋಪ ಮಾಡಿದ ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಹಗುರವಾಗಿ ಮಾತನಾಡುವುದು ಕ್ಷುಲ್ಲಕ. ಈ ಬಗ್ಗೆ ಪರಿಜ್ಞಾನ ಇರಬೇಕು,” ಎಂದು ಪ್ರತಿಕ್ರಿಯಿಸಿದ್ದರು. ಜೊತೆಗೆ, ಇದೊಂದು ಆಕ್ಷೇಪಾರ್ಹ ಟ್ವೀಟ್‌ ಎಂದು ಮೈಕ್ರೋಬ್ಲಾಗಿಂಗ್‌ ಸೈಟ್‌ಗೆ ಮೆಸೇಜ್ ಮೂಲಕ ದೂರು ದಾಖಲಿಸಿದ್ದರು. ಇದಾಗಿ ಕೆಲ ಗಂಟೆಗಳಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಡಿಲಿಟ್ ಮಾಡಿದ್ದರು.

ಇದನ್ನೂ ಓದಿ : ಟ್ರೈಲರ್‌ | ‘ನೋಟಾ’ದಲ್ಲಿ ರಾಜಕಾರಣಿಯಾದ ವಿಜಯ್‌ ದೇವರಕೊಂಡ

ಸ್ವರ ಭಾಸ್ಕರ್ ದೂರು ಆಧರಿಸಿ ಮೈಕ್ರೋಬ್ಲಾಗಿಂಗ್‌ ಸೈಟ್‌, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಟ್ವಿಟರ್ ಅಕೌಂಟ್‌ ಬ್ಲಾಕ್ ಮಾಡಿದೆ. ತಮ್ಮ ದೂರಿಗೆ ಸ್ಪಂದಿಸಿದ ಟ್ವಿಟರ್‌ ಸೈಟ್‌ಗೆ ಸ್ವರ ಧನ್ಯವಾದ ಹೇಳಿದ್ದಾರೆ. ನಂತರ ಅವರು ಟ್ವೀಟ್‌ ಮಾಡಿ, “ವಿವೇಕ್ ತಮ್ಮ ಟ್ವೀಟ್‌ ಡಿಲೀಟ್ ಮಾಡುವಂತೆ ಮಾಡಿದ ಸೈಟ್‌ಗೆ ಧನ್ಯವಾದ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಬರೆಯುವವರನ್ನು ಯಾರೂ ಬೆಂಬಲಿಸಕೂಡದು. ನನ್ನ ಕಳಕಳಿಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ,” ಎಂದಿದ್ದಾರೆ. ವಿವೇಕ್ ಅಗ್ನಿಹೊತ್ರಿ ಅವರು ಟ್ವೀಟ್ ಡಿಲೀಟ್ ಮಾಡಿದ ನಂತರ ಅವರಿಗೆ ಮತ್ತೆ ಖಾತೆಯನ್ನು ಬಳಸಲು ಟ್ವಿಟರ್ ಅವಕಾಶ ಕಲ್ಪಿಸಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More