ಟೀಸರ್‌ | ವಿನಯ್ ರಾಜಕುಮಾರ್‌ ಅಭಿನಯದ ‘ಅನಂತು ವರ್ಸಸ್ ನುಸ್ರತ್’‌ 

ವಿನಯ್ ರಾಜಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರತ್‌’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಸುಧೀರ್ ಶಾನ್‌ಭೋಗ್‌ ಚಿತ್ರದ ಕತೆ ಬಿಟ್ಟುಕೊಟ್ಟಿಲ್ಲ. ಹೆಣ್ಣು ನೋಡುವ ಸನ್ನಿವೇಶಗಳೊಂದಿಗೆ ಟೀಸರ್‌ನಲ್ಲಿ ನಾಯಕ-ನಾಯಕಿ ಪಾತ್ರಗಳನ್ನು ಪರಿಚಯಿಸಿದ್ದಾರೆ.

‘ಸಿದ್ದಾರ್ಥ’ ಚಿತ್ರದೊಂದಿಗೆ ಮೇರು ನಟ ರಾಜಕುಮಾರ್ ಕುಟುಂಬದ ಮೂರನೇ ತಲೆಮಾರಿನ ವಿನಯ್ ಬೆಳ್ಳಿತೆರೆ ಪ್ರವೇಶಿಸಿದ್ದರು. ಚೊಚ್ಚಲ ಸಿನಿಮಾ ಅವರ ಕೈಹಿಡಿಯಲಿಲ್ಲ. ಇದಾದ ನಂತರ ತೆರೆಕಂಡ ‘ರನ್ ಆಂಟೋನಿ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಇದೀಗ ಅವರ ಮೂರನೇ ಸಿನಿಮಾ ‘ಅನಂತು ವರ್ಸಸ್‌ ನುಸ್ರತ್‌’ ತೆರೆಗೆ ಸಿದ್ಧವಾಗಿದೆ. ಸುಧೀರ್ ಶಾನ್‌ಭೋಗ್ ನಿರ್ದೇಶನದ ಚಿತ್ರದ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಇದೀಗ ಟೀಸರ್ ಬಿಡುಗಡೆಯಾಗಿದ್ದು, ಇಲ್ಲಿ ನಾಯಕ ವಿನಯ್ ಮತ್ತು ನಾಯಕಿ ಲತಾ ಹೆಗ್ಡೆ ಪಾತ್ರಗಳ ಪರಿಚಯವಿದೆ.

ಇದನ್ನೂ ಓದಿ : ತಾತನ ಹಾಡಿಗೆ ಹೆಜ್ಜೆ ಹಾಕೋದು ಹೆಮ್ಮೆಯ ಸಂಗತಿ ಎಂದ ವಿನಯ್‌ ರಾಜ್‌

“ಇದೊಂದು ಕೋರ್ಟ್‌ ಡ್ರಾಮಾ. ಜೊತೆಗೊಂದು ವಿಶಿಷ್ಟ ಪ್ರೇಮಕತೆ ಇರುತ್ತದೆ” ಎಂದಷ್ಟೇ ಹೇಳುವ ನಿರ್ದೇಶಕ ಸುಧೀರ್‌ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡುವುದಿಲ್ಲ. ಟೀಸರ್‌ನಲ್ಲಿ ಹೆಣ್ಣು ನೋಡುವ ಸನ್ನಿವೇಶಗಳು, ಸ್ನೇಹಿತನೊಂದಿಗಿನ ನಾಯಕನ ಮಾತು, ನಾಯಕಿ ಭೇಟಿಯ ದೃಶ್ಯಗಳಿವೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಚಿತ್ರ ಈ ವಾರ ಗಣೇಶ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿತ್ತು. ಚಿತ್ರೀಕರಣ ವಿಳಂಬವಾದ್ದರಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಸುನಾದ್ ಗೌತಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ‘ಚಲಿಸುವ ಮೋಡಗಳು’ ಚಿತ್ರದಲ್ಲಿ ರಾಜಕುಮಾರ್ ಮತ್ತು ಅಂಬಿಕಾ ಜೋಡಿಯ ಮೇಲೆ ಚಿತ್ರಿತವಾಗಿದ್ದ ‘ಮೈ ಲಾರ್ಡ್‌’ ಹಾಡು ಇಲ್ಲಿ ಮತ್ತೆ ಬಳಕೆಯಾಗುತ್ತಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More