ವಿಡಿಯೋ | ಮಗನೊಂದಿಗೆ ‘ಡಕ್‌ಟೇಲ್ಸ್‌’ ಶೀರ್ಷಿಕೆ ಗೀತೆ ಹಾಡಿದ ಗಾಯಕ ಶಾನ್

ಜನಪ್ರಿಯ ‘ಡಕ್‌ಟೇಲ್ಸ್‌’ ಸರಣಿ 1987ರಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬಂದಿತ್ತು. 90ರ ದಶಕದಲ್ಲಿ ಹಿಂದಿ ಭಾಷೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈಗ, ಡಿಸ್ನಿ ಇಂಡಿಯಾ ಚಾನೆಲ್ ಸರಣಿಯನ್ನು ಮತ್ತೆ ಪ್ರಸಾರ ಮಾಡುತ್ತಿದೆ. ಶಾನ್‌ ಸರಣಿಯ ನೂತನ ಥೀಮ್ ಸಾಂಗ್ ಹಾಡಿದ್ದಾರೆ

ತೊಂಬತ್ತರ ದಶಕದ ನಾಸ್ಟಾಲ್ಜಿಯಾಗಳಲ್ಲಿ ಡಿಸ್ನಿ ಕಾರ್ಟೂನ್‌ಗಳು ಸ್ಥಾನ ಪಡೆದಿವೆ. ಇದೀಗ ಡಿಸ್ನಿ ಇಂಡಿಯಾ ಚಾನೆಲ್‌, ಅಂಕಲ್ ಸ್ಕ್ರ್ಯೂಜ್‌ ಮತ್ತು ಅವನ ಕುಟುಂಬದ ಸಾಹಸಗಳ ಸರಣಿಗಳನ್ನು ಮತ್ತೆ ತರುತ್ತಿದೆ. ‘ಡಕ್‌ಟೇಲ್ಸ್‌’ನ ರೀಬೂಟ್‌ ಥೀಮ್‌ ಸಾಂಗ್‌ಗೆ ಗಾಯಕ ಶಾನ್ ಮತ್ತು ಅವರ ಹದಿಮೂರು ವರ್ಷದ ಪುತ್ರ ಶುಭ್‌ ದನಿಯಾಗಿದ್ದಾರೆ. ಬ್ಲಾಕ್‌ಬಸ್ಟರ್‌ ಕಾರ್ಟೂನ್ ಸರಣಿಯ ಥೀಮ್ ಸಾಂಗ್‌ ಡಿಸ್ನಿ ಇಂಡಿಯಾದ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಬಿಡುಗಡೆಯಾಗಿದೆ.

ಡಕ್‌ಟೇಲ್ಸ್‌ನ ಎಲ್ಲ ಪಾತ್ರಗಳನ್ನು ನಾವಿಲ್ಲಿ ನೋಡಬಹುದು. ಶಾನ್‌ ಅವರ ಆಕರ್ಷಕ ಧ್ವನಿ ಶೀರ್ಷಿಕೆ ಗೀತೆಗೆ ಹೊಸ ಮೆರುಗು ನೀಡಿದೆ. “ ಡಿಸ್ನಿ ಕತೆಗಳಲ್ಲಿ ಡಕ್‌ಟೇಲ್ಸ್‌ ಸರಣಿಗೆ ವಿಶೇಷ ಸ್ಥಾನವಿದೆ. ವಿಶೇಷವಾಗಿ ಭಾರತದಲ್ಲಿ ಡಕ್‌ಟೇಲ್ಸ್‌ಗೆ ದೊಡ್ಡ ಜನಪ್ರಿಯತೆ ಸಿಕ್ಕಿತ್ತು. ಈಗಿನ ಜನರೇಷನ್‌ ಮಕ್ಕಳಿಗೆ ಡಕ್‌ಟೇಲ್ಸ್‌ನ ಸಾಹಸ, ತಮಾಷೆಗಳು ಮನರಂಜನೆ ಜೊತೆ ಹುಮ್ಮಸ್ಸು ನೀಡಲಿವೆ,” ಎಂದು ಡಿಸ್ನಿ ಇಂಡಿಯಾ ಹೇಳಿಕೊಂಡಿದೆ.

ಇದನ್ನೂ ಓದಿ : ಟೀಸರ್‌ | ಅಮೇಜಾನ್‌ನಲ್ಲಿ ‘ಹಿಯರ್‌ ಮಿ ಲವ್‌ ಮಿ’ ಡೇಟಿಂಗ್ ರಿಯಾಲಿಟಿ ಶೋ

ಅಮೆರಿಕದ ವಾಲ್ಟ್‌ ಡಿಸ್ನಿ ಟೆಲಿವಿಷನ್ ಅನಿಮೇಷನ್‌ ನಿರ್ಮಾಣದ ಸರಣಿ ಈ ‘ಡಕ್‌ಟೇಲ್ಸ್‌.’ 1987ರ ಸೆಪ್ಟೆಂಬರ್‌ನಲ್ಲಿ ಇದು ಮೊದಲ ಬಾರಿ ಪ್ರಸಾರವಾಗಿತ್ತು. ಜಗತ್ತಿನ ವಿವಿಧ ಭಾಷೆಗಳಲ್ಲಿ ಡಬ್‌ ಆಗಿದ್ದ ಸರಣಿ ಹಿಂದಿಯಲ್ಲೂ ಮೂಡಿಬಂದಿತ್ತು. ಮೂಲ ಶೀರ್ಷಿಕೆ ಗೀತೆಯನ್ನು ಚೇತನ್‌ ಶಸಿತಾಲ್ ಹಾಡಿದ್ದರು. ಚೇತನ್‌ ಶಸಿತಾಲ್‌, ಜಾವೆದ್ ಜಾಫರಿ ಮತ್ತಿತರರು ಹಿಂದಿ ಡಬ್ಬಿಂಗ್‌ ಅವತರಣಿಕೆಯ ತಂಡದಲ್ಲಿದ್ದರು. ಇದೀಗ ‘ಡಕ್‌ಟೇಲ್ಸ್‌’ ಮತ್ತೊಮ್ಮೆ ಡಿಸ್ನಿ ಇಂಡಿಯಾ ಚಾನೆಲ್‌ನಲ್ಲಿ ಅ.1ರಿಂದ ಮೂಡಿಬರಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More