ಟೀಸರ್‌ | ಅಮೇಜಾನ್‌ನಲ್ಲಿ ‘ಹಿಯರ್‌ ಮಿ ಲವ್‌ ಮಿ’ ಡೇಟಿಂಗ್ ರಿಯಾಲಿಟಿ ಶೋ

ಡೇಟಿಂಗ್ ರಿಯಾಲಿಟಿ ಶೋ ‘ಹಿಯರ್ ಮಿ ಲವ್‌ ಮಿ’ ಅಮೇಜಾನ್ ವಿಡಿಯೋದಲ್ಲಿ ಸೆಪ್ಟೆಂಬರ್‌ 28ರಿಂದ ಸ್ಟ್ರೀಮ್ ಆಗಲಿದೆ. ಇಟಲಿಯಲ್ಲಿ ಮೊದಲ ಬಾರಿಗೆ ಮೂಡಿಬಂದ ‘ವರ್ಚ್ಯುಯಲ್‌ ಡೇಟ್‌’ ಕಾನ್ಸೆಪ್ಟ್‌ನ ಶೋ ಇದು. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಈ ಶೋ ನಿರೂಪಿಸಲಿದ್ದಾರೆ ಏಂಬುದು ವಿಶೇಷ

ಡೇಟಿಂಗ್ ರಿಯಾಲಿಟಿ ಶೋ ಸುದ್ದಿಯೊಂದಿಗೆ ಅಮೇಜಾನ್‌ ಪ್ರೈಂ ವಿಡಿಯೋ ಕುತೂಹಲ ಮೂಡಿಸಿತ್ತು. ಇದೀಗ ‘ಹಿಯರ್ ಮಿ ಲವ್‌ ಮಿ’ ಟೀಸರ್ ಹೊರಬಿದ್ದಿದ್ದು, ಸೆ.28ರಂದು ಶೋ ಸ್ಟ್ರೀಮ್ ಆಗಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರೂಪಿಸಲಿರುವ ಶೋನ ಎಲ್ಲ ಸರಣಿಗಳು ಅದೇ ದಿನ ಸಿಗಲಿವೆ. ಸ್ಟ್ರೀಮಿಂಗ್ ಮೀಡಿಯಾದಲ್ಲಿ ಇದು ನಟಿ ಶಿಲ್ಪಾ ಶೆಟ್ಟಿಗೆ ಮೊದಲ ಶೋ. ಮೂಲ ಇಟಲಿ ಶೋ ಆದ ಇದು ಇಸ್ರೇಲ್‌, ಅಮೆರಿಕಾದಲ್ಲೂ ಅಳವಡಿಸಲ್ಪಟ್ಟಿದೆ.

ಇದನ್ನೂ ಓದಿ : ವಿಡಿಯೋ | ರಜನಿ ಅಭಿನಯದ ‘2.0’ ಸಿನಿಮಾ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ

‘ಇಂಡಿಯನ್‌ ಐಡಲ್‌’, ‘ಎಕ್ಸ್‌-ಫ್ಯಾಕ್ಟರ್‌ ಇಂಡಿಯಾ’, ‘ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌’ ನಿರ್ಮಿಸಿದ್ದ ಫ್ರೀಮ್ಯಾಂಟ್ಲ್‌ ಮೀಡಿಯಾ ಸಂಸ್ಥೆಯೇ ಡೇಟಿಂಗ್ ರಿಯಾಲಿಟಿ ಶೋ ನಿರ್ಮಿಸುತ್ತಿದೆ. ‘ಹಿಯರ್ ಮಿ ಲವ್‌ ಮಿ’ ಬ್ಲೈಂಡ್‌ ಡೇಟಿಂಗ್‌ ಕಾನ್ಸೆಪ್ಟ್‌ನಲ್ಲಿದೆ. 21ರಿಂದ 32ರವರೆಗಿನ ಯುವತಿಯರು ದಿನಕ್ಕೆ ಮೂವರು ಯುವಕರೊಂದಿಗೆ ‘ವರ್ಚ್ಯುಯಲ್‌ ಡೇಟ್‌’ ಮಾಡುತ್ತಾರೆ. ನಿರೂಪಕಿ ಶಿಲ್ಪಾ ಶೆಟ್ಟಿ ಸ್ಪರ್ಧೆಯಲ್ಲಿರುವ ಯುವತಿಯರಿಗೆ ಯುವಕರ ಆಯ್ಕೆಯ ಕುರಿತಾಗಿ ಟಿಪ್ಸ್‌ ನೀಡುತ್ತಾರೆ. ನಟಿ ಶಿಲ್ಪಾ ಶೆಟ್ಟಿ ಈ ಮೊದಲು ‘ಝಲಕ್‌ ದಿಖ್ಲಾ ಜಾ’, ‘ನಾಚ್‌ ಬಲಿಯೇ’, ‘ಸೂಪರ್ ಡ್ಯಾನ್ಸರ್‌’ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More