ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳು

ಶಂಕರ್ ನಿರ್ದೇಶನದಲ್ಲಿ ರಜನೀಕಾಂತ್‌ ಅಭಿನಯಿಸಿರುವ ‘2.0’ ಚಿತ್ರದ ಬಜೆಟ್‌ 540 ಕೋಟಿ ರೂಪಾಯಿ. ‘ಬಾಹುಬಲಿ’ ನಂತರ ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ದುಬಾರಿ ಸಿನಿಮಾ ‘ಸಾಹೋ’ದಲ್ಲಿ ನಟಿಸುತ್ತಿದ್ದಾರೆ. ತೆರೆಗೆ ಸಿದ್ಧವಾಗುತ್ತಿರುವ ದುಬಾರಿ ಬಜೆಟ್‌ನ ಸಿನಿಮಾಗಳತ್ತ ಇಣುಕುನೋಟ ಇಲ್ಲಿದೆ

ಥಗ್ಸ್ ಆಫ್ ಹಿಂದುಸ್ಥಾನ್ | ಅಮೀರ್ ಖಾನ್, ಅಮಿತಾಭ್‌ ಬಚ್ಚನ್, ಕತ್ರಿನಾ ಕೈಫ್, ಫಾತಿಮಾ ಸನಾ ಶೇಕ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಸ್ವಾತಂತ್ರ್ಯ ಪೂರ್ವದ ಕಥಾನಕಗಳನ್ನು ಆಧರಿಸಿದ ಬಹುನಿರೀಕ್ಷಿತ ‘ಥಗ್ಸ್ ಆಫ್ ಹಿಂದುಸ್ಥಾನ್’ ಚಿತ್ರ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ವಿಜಯ್ ಕೃಷ್ಣ ಆಚಾರ್ಯ ಚಿತ್ರಕಥೆ ಜೊತೆಗೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ದೀಪಾವಳಿ ಹೊತ್ತಿಗೆ ಚಿತ್ರ ತೆರೆಕಾಣಲಿದೆ.

ಸಾಹೋ | ತೆಲಗು ನಟ ಪ್ರಭಾಸ್ ಹಾಗೂ ನಟಿ ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯ ‘ಸಾಹೋ’ ಚಿತ್ರ 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಮೂಲಕ ‘ಬಾಹುಬಲಿ’ ಖ್ಯಾತಿಯ ತೆಲುಗು ನಟ ಪ್ರಭಾಸ್ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ‘ಸಾಹೋ’ ಹಿಂದಿ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲೂ ತಯಾರಾಗುತ್ತಿದೆ. ಚಿತ್ರದ ಬಜೆಟ್‌ ಅಂದಾಜು 250 ಕೋಟಿ ರೂಪಾಯಿ.

ಝೀರೊ | ಆನಂದ್ ಎಲ್ ರಾಯ್ ನಿರ್ದೇಶನದಲ್ಲಿ ಶಾರುಖ್ ಖಾನ್, ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಅಭಿನಯದ ಬಹುತಾರಾಬಳಗದ ಚಿತ್ರ. 160 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಝೀರೊ ಹಲವು ಕಾರಣಗಳಿಂದ ಕುತೂಹಲ ಸೃಷ್ಟಿಸಿದೆ. ಅಗಲಿದ ಬಾಲಿವುಡ್‌ ನಟಿ ಶ್ರೀದೇವಿ ಅಭಿನಯದ ಕೊನೆಯ ಚಿತ್ರವಿದು. ಈ ಹಿಂದೆ ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಜೊತೆಯಾಗಿದ್ದ ಶಾರುಖ್, ಕತ್ರಿನಾ ಹಾಗೂ ಅನುಷ್ಕಾ ಜೋಡಿ ‘ಝೀರೊ’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. 2018 ವರ್ಷಾಂತ್ಯಕ್ಕೆ ಚಿತ್ರ ತೆರೆಕಾಣಲಿದೆ.

2.0 | ಶಂಕರ್ ನಿರ್ದೇಶನದಲ್ಲಿ ರಜನೀಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬಹು ನಿರೀಕ್ಷಿತ ‘ರೋಬೊ 2.0’ ಚಿತ್ರ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಭಾರತೀಯ ಸಿನಿಮಾದಲ್ಲೇ ಹಿಂದೆಂದೂ ಬಳಸಿರದ ವಿಎಫ್ಎಕ್ಸ್ ತಂತ್ರಜ್ಞಾನ ‘2.0’ನಲ್ಲಿ ಬಳಕೆಯಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ನಾಯಕಿಯಾಗಿ ಏಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಚಿತ್ರವಿಮರ್ಶೆ | ಹೊಸ ತಲೆಮಾರಿನ ಪ್ರೀತಿ, ಗೊಂದಲದ ‘ಮನ್‌ಮರ್ಝಿಯಾ’

ಮಹಾಭಾರತ | ಮಲಯಾಳಂ ನಟ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ‘ಮಹಾಭಾರತ’ ಕಳೆದ ವರ್ಷದಿಂದಲೂ ಸುದ್ದಿಯಲ್ಲಿದೆ. 1000 ಕೋಟಿ ಬಂಡವಾಳದಲ್ಲಿ ತಯಾರಾಗಲಿರುವ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ವಾಸುದೇವನ್ ನಾಯರ್ ಅವರ ‘ರಂದಾಮುಝಾಮ್’ ಕೃತಿಯನ್ನಾಧರಿಸಿದ ಈ ಚಿತ್ರದಲ್ಲಿ ಮೋಹನ್ ಲಾಲ್ ಭೀಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಕರ್ಣನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಸಿನಿಮಾ 2020ರ ವೇಳೆಗೆ ಸಿದ್ಧವಾಗಲಿದ್ದು, ಎರಡು ಭಾಗಗಳಾಗಿ ಚಿತ್ರ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More