ಮತ್ತೊಂದು ಹೊಸ ಪಕ್ಷಕ್ಕೆ ಸಾರಥಿಯಾಗಲು ಅಣಿಯಾದ ಉಪೇಂದ್ರ

ನಟ ಉಪೇಂದ್ರ ರಾಜಕೀಯಕ್ಕೆ ಧುಮುಕಿ, ಮತ್ತೆ ದೂರಾಗಿದ್ದು ಹಳೇ ಕತೆ. ಇದೀಗ ಹುಟ್ಟುಹಬ್ಬದ ದಿನದಂದು ತಮ್ಮ ನೂತನ ‘ಉತ್ತಮ ಪ್ರಜಾಕೀಯ ಪಾರ್ಟಿ’ ಲೋಕಾರ್ಪಣೆ ಮಾಡುತ್ತಿದ್ದು. ಪಾರದರ್ಶಕ ಆಡಳಿತ ಹಾಗೂ ಪ್ರಜಾಕೀಯ ವ್ಯವಸ್ಥೆಯೇ ಪಕ್ಷದ ಮೊದಲ ಆದ್ಯತೆ ಎಂದು ಹೇಳಿಕೊಂಡಿದ್ದಾರೆ

ನಟ ಉಪೇಂದ್ರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಇದೇ ತಿಂಗಳ 18ರಂದು 51ನೇ ವರ್ಷಕ್ಕೆ ಕಾಲಿಡುತ್ತಿರುವ ನಟ ಉಪೇಂದ್ರ, ಹುಟ್ಟುಹಬ್ಬದ ದಿನದಂದೇ ತಮ್ಮ ಹೊಸ ಪಕ್ಷ 'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನು ಲೋಕಾರ್ಪಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಹೊಸ ಪಕ್ಷದ ಸ್ಥಾಪನೆ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಉಪೇಂದ್ರ, “ಪ್ರಣಾಳಿಕೆಯಲ್ಲಿನ ವಿಷಯಗಳೇ ಪಕ್ಷದ ಕಾರ್ಯವ್ಯವಸ್ಥೆಯ ಕೇಂದ್ರಬಿಂದುವಾಗಿರುತ್ತವೆ. ಪಾರದರ್ಶಕ ಆಡಳಿತ ಹಾಗೂ ಪ್ರಜಾಕೀಯ ವ್ಯವಸ್ಥೆಯನ್ನು ತರಲು 'ಉತ್ತಮ ಪ್ರಜಾಕೀಯ ಪಕ್ಷ'ವನ್ನು ಮಂಗಳವಾರ ಸ್ವನಿವಾಸದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ವಿಡಿಯೋ | ಸುದೀರ್ಘ ಬಿಡುವಿನ ನಂತರ ‘ಐ ಲವ್‌ ಯೂ’ ಎನ್ನುತ್ತಿದ್ದಾರೆ ಉಪೇಂದ್ರ

ಹಲವು ವರ್ಷಗಳಿಂದ ‘ಪ್ರಜಾಕೀಯ’ದ ಕನಸು ಹೊತ್ತಿರುವ ಉಪೇಂದ್ರ, ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಮಯದಲ್ಲಿ ಕೆಪಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆದರೆ, ಪಕ್ಷದಲ್ಲಿ ಉಂಟಾದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಕೆಪಿಜೆಪಿ ತೊರೆದು ಸ್ವತಂತ್ರ ಪಕ್ಷ ಕಟ್ಟಲು ಮುಂದಾಗಿದ್ದ ಅವರು, ಕೊನೆಗೂ ತಮ್ಮ ಆಸೆಯಂತೆ 'ಯುಪಿಪಿ' ಪಕ್ಷಕ್ಕೆ ಸಾರಥಿಯಾಗಲಿದ್ದಾರೆ.

ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳೂ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, 2019ರ ಲೋಕಸಭಾ ಚುನಾವಣೆಯಿಂದ ಉಪೇಂದ್ರ ತಮ್ಮ ರಾಜಕೀಯ ನಡೆ ಪ್ರಾರಂಭಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More