ಪುನೀತ್ ‘ರಾಜಕುಮಾರ’ಗೆ ಅತ್ಯುತ್ತಮ ನಟ ಸೇರಿದಂತೆ ಐದು ಸೈಮಾ ಪ್ರಶಸ್ತಿ

ಅತ್ಯುತ್ತಮ ಚಿತ್ರ ಸೇರಿದಂತೆ ಐದು ವಿಭಾಗಗಳಲ್ಲಿ ಸೈಮಾ ಪ್ರಶಸ್ತಿ ಗಳಿಸಿಕೊಂಡಿದೆ ‘ರಾಜಕುಮಾರ’ ಚಿತ್ರ. ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿರುವ 2018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತಂಡವು ವೀಕ್ಷಕರಿಗೆ ಧನ್ಯವಾದ ತಿಳಿಸಿದೆ

ಅತ್ಯುತ್ತಮ ಚಿತ್ರ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಕನ್ನಡದ ‘ರಾಜಕುಮಾರ’ ಚಿತ್ರ ಸೈಮಾದಲ್ಲಿ ಐದೂ ಪ್ರಶಸ್ತಿ ಬಾಚಿಕೊಂಡಿದೆ. ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿರುವ 2018ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.

‘ರಾಜಕುಮಾರ’ ಚಿತ್ರದಲ್ಲಿನ ಅಭಿನಯಕ್ಕೆ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿಕೊಂಡರೆ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಗೀತ ಸಾಹಿತ್ಯಕ್ಕೆ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಚಿತ್ರದಲ್ಲಿನ ‘ಬೊಂಬೆ ಹೇಳುತೈತೆ’ ಹಾಡಿನ ಸಂಗೀತ ಸಂಯೋಜನೆಗೆ ವಿ ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ : ಪುನೀತ್‌ರ ‘ರಾಜಕುಮಾರ’ನ ಇಮೇಜ್‌ ಕಾಪಾಡಲಿದೆಯೇ ಅಂಜನಿಪುತ್ರ?

ಉಳಿದಂತೆ, ನಟಿ ಸಾನ್ವಿ ಶ್ರೀವಾಸ್ತವ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದು, ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟಿಯಾಗಿ ಶ್ರುತಿ ಹರಿಹರನ್, ಅತ್ಯುತ್ತಮ ಛಾಯಾಗ್ರಾಹಕರಾಗಿ ಸಂತೋಷ್ ರೈ ಪತಾಜೆ, ಅತ್ಯುತ್ತಮ ಖಳನಟಿಯಾಗಿ ಅಪೇಕ್ಷಾ ಪುರೋಹಿತ್, ಅತ್ಯುತ್ತಮ ಪೋಷಕ ನಟರಾಗಿ ಕಾಶೀನಾಥ್, ಅತ್ಯುತ್ತಮ ಪೋಷಕ ನಟಿಯಾಗಿ ಭಾವನಾ ರಾವ್, ಅತ್ಯುತ್ತಮ ಉದಯೋನ್ಮುಖ ನಟನಾಗಿ ರಿಷಿ, ಅತ್ಯುತ್ತಮ ಉದಯೋನ್ಮುಖ ನಟಿಯಾಗಿ ಏಕ್ತಾ ರಾಥೋಡ್, ಅತ್ಯುತ್ತಮ ಉದಯೋನ್ಮುಖ ನಿರ್ದೇಶಕನಾಗಿ ತರುಣ್ ಸುಧೀರ್, ಅತ್ಯುತ್ತಮ ಬಾಲನಟಿಯಾಗಿ ಶಾಲ್ಘ ಸಾಲಿಗ್ರಾಮ, ಅತ್ಯುತ್ತಮ ಹಿನ್ನಲೆ ಗಾಯಕನಾಗಿ ರವಿ ಬಸ್ರೂರ್ ಸಮ್ಮಾನ ಪಡೆದಿದ್ದಾರೆ. ‘ಚೌಕ’ ಚಿತ್ರದ ‘ಅಪ್ಪ ಐ ಲವ್ ಯೂ’ ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕಿಯಾಗಿ ಅನುರಾಧಾ ಭಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಖ್ಯಾತ ನಟ, ನಟಿಯರು ಸೈಮಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More