ವಿಡಿಯೋ | ಅನಿಮೇಷನ್‌ ವಿಡಿಯೋ ಮೂಲಕ ಚಿತ್ರನಿರ್ದೇಶಕ ರೇಗೆ ಗೌರವ

ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಅವರ ಸಿನಿಮಾಗಳನ್ನು ನೆನಪಿಸುವ ಅಪರೂಪದ ಅನಿಮೇಟೆಡ್ ವಿಡಿಯೋ ‘ರೇ ರಿವಿಸಿಟೆಡ್‌’ ಬಿಡುಗಡೆಯಾಗಿದೆ. ಕೊಲ್ಕೊತ್ತಾ ಮೂಲದ ಸಂಸ್ಥೆಯೊಂದು ರೂಪಿಸಿರುವ ವಿಡಿಯೋದಲ್ಲಿ ರೇ ಸಿನಿಮಾಗಳ ಐಕಾನಿಕ್‌ ದೃಶ್ಯಗಳು ಹಾಗೂ ಪಾತ್ರಗಳು ಮೈದಾಳಿವೆ

ಭಾರತದ ಖ್ಯಾತ ನಿರ್ದೇಶಕ ಸತ್ಯಜಿತ್‌ ರೇ ಅವರ ಗೌರವಾರ್ಥ ದಿ ರ‍್ಯಾಡಿಕಲ್ ಅರೇ ಸಂಸ್ಥೆ 6 ನಿಮಿಷಗಳ ಅನಿಮೇಷನ್‌ ವಿಡಿಯೋ ರೂಪಿಸಿದೆ. ಕೊಲ್ಕೊತ್ತಾ ಮೂಲದ ಸಂಸ್ಥೆ ಈ ಮೂಲಕ ರೇ ಅವರ ಸಿನಿಮಾ ಮತ್ತು ಸಂಗೀತವನ್ನು ಸ್ಮರಿಸಿದೆ. ಅನಿಮೇಟೆಡ್‌ ವಿಡಿಯೋದಲ್ಲಿ ಸತ್ಯಜಿತ್‌ ರೇ ಅವರ ‘ಪಥೇರ್‌ ಪಾಂಚಾಲಿ’ (1955), ‘ಗೋಪಿ ಗಿನೆ ಬಘಾ ಬಿನೆ’ (1969), ‘ಹಿರಾಕ್‌ ರಾಜಾರ್ ದೇಶೆ’ (1980), ‘ಸೋನಾರ್ ಕೆಲ್ಲಾ’ (1971), ‘ಜಾಯ್ ಬಾಬಾ ಫೆಲುನಾಥ್‌’ (1979), ‘ಘರೇ ಬೈರೆ’ (1984) ಚಿತ್ರಗಳ ಪ್ರಮುಖ ಸನ್ನಿವೇಶಗಳ ತುಣುಕುಗಳಿವೆ.

‘ಗೋಪಿ ಗಿನೆ ಬಘಾ ಬಿನೆ’ ಚಿತ್ರದ ‘ಆಹಾ ಕಿ ಆನಂದೋ’ ಮತ್ತು ಫೆಲುಡಾ ಥೀಮ್‌ ಬೆರೆಸಿದ ಇನ್‌ಸ್ಟ್ರುಮೆಂಟಲ್ ಸಾಂಗ್ ಗಮನ ಸೆಳೆಯುತ್ತದೆ. ಅರಿಜಿತ್‌ (ಹಾಡುಗಾರಿಕೆ), ಅನುಪಮ್ ಪಿನೆ (ಕೈಬೋರ್ಡ್‌), ಸ್ವಪ್ನಭಾ ರಾಯ್ (ಬ್ಯಾಸ್ ಗಿಟಾರ್‌), ಸೌಂಜಿತೊ ದತ್ತಾ (ಡ್ರಮ್‌ ಮತ್ತು ಪರ್ಕುಷನ್‌) ಮತ್ತು ಭಾಸ್ವರ್ ಸೇನ್‌ (ವಯಲಿನ್‌) ಈ ಅನಿಮೇಟೆಡ್ ವಿಡಿಯೋಗೆ ಕೆಲಸ ಮಾಡಿದ್ದಾರೆ.

ರೇ ಸಿನಿಮಾದ ಕೆಲವು ಐಕಾನಿಕ್ ಸೀನ್‌ಗಳು ವಿಡಿಯೋದಲ್ಲಿವೆ. ‘ಪಥೇರ್ ಪಾಂಚಾಲಿ’ ಚಿತ್ರದಲ್ಲಿನ ಹುಲ್ಲಿನ ವಿಶಾಲ ಹೊಲದಲ್ಲಿ ನಿಂತಿರುವ ಅಪ್ಪು ಮತ್ತು ದುರ್ಗಾ, ಅಲ್ಲಿ ಹಾದುಹೋಗುವ ರೈಲು, ‘ಗೋಪಿ ರಾಜಾರ್‌ ದೇಶೆ’ ಚಿತ್ರದ ದುಷ್ಟ ರಾಜನ ಪುತ್ಥಳಿ, ‘ಗೋಪಿ ಗಿನೆ ಬಾಘೆ ಬಿನೆ’ ಚಿತ್ರದಲ್ಲಿನ ಪ್ರೇತಗಳ ನೃತ್ಯದ ದೃಶ್ಯಗಳು ಅನಿಮೇಷನ್‌ನಲ್ಲಿ ಮೈದಾಳಿವೆ. ‘ಹಿರಾಕ್ ರಾಜಾರ್ ದೇಶೆ’ ಚಿತ್ರದಲ್ಲಿ ಸಾಮಾಜಿಕ ಚಳವಳಿಕಾರ ಉದಯನ್ ಪಂಡಿತ್‌ (ಸೌಮಿತ್ರ ಚಟರ್ಜಿ) ಪಾತ್ರವೂ ಇಲ್ಲಿದೆ. ಜಾಣ್ಮೆಯಿಂದ ರೂಪಿಸಿರುವ ವಿಡಿಯೋ ತುಣುಕು ರೇ ಸಿನಿಮಾಗಳನ್ನು ನೆನಪು ಮಾಡುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More