ಸ್ಮರಣೆ | ಗೀತರಚನೆಕಾರ ಹಸ್ರತ್‌ ಜೈಪುರಿ ಜನಪ್ರಿಯ ಹಾಡುಗಳ ವಿಡಿಯೋ

ಬಸ್‌ ಕಂಡಕ್ಟರ್ ಆಗಿದ್ದ ಹಸ್ರತ್ ಜೈಪುರಿ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಟ, ನಿರ್ದೇಶಕ ರಾಜ್‌ ಕಪೂರ್‌. ಹಿಂದಿ, ಉರ್ದು ಭಾಷೆಯಲ್ಲಿ ಬರೆಯುತ್ತಿದ್ದ ಅವರು ಶ್ರೇಷ್ಠ ಕವಿ ಕೂಡ ಹೌದು. ಇಂದು (ಸೆ.17) ಹಸ್ರತ್‌ ಇಲ್ಲವಾದ ದಿನ. ಈ ನೆಪದಲ್ಲಿ ಅವರ ರಚನೆಯ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ

ಆಗ ಹಸ್ರತ್ ಜೈಪುರಿ ಅವರಿಗೆ ಇಪ್ಪತ್ತು ವರ್ಷ. ಪಕ್ಕದ ಮನೆಯ ಹಿಂದೂ ಯುವತಿ ರಾಧಾ ಮೇಲೆ ಅವರಿಗೆ ಪ್ರೇಮಾಂಕುರವಾಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಅವರು, ರಾಧಾಗೆ ಪ್ರೇಮಪತ್ರ ಬರೆದ ಸಂಗತಿಯನ್ನೂ ಬಹಿರಂಗಪಡಿಸಿದ್ದರು. ‘ಯೆಹ್ ಮೇರಾ ಪ್ರೇಮಪತ್ರ ಪಡ್ ಕರ್‌, ಕೆ ತುಮ್ ನಾರಾಝ್‌ ನಾ ಹೋನಾ’ ಎಂದು ಶುರುವಾಗುವ ಪತ್ರ ಅದು. ಈ ಪತ್ರ ರಾಧಾಗೆ ತಲುಪಿದ ಬಗ್ಗೆ ಖಾತ್ರಿ ಇಲ್ಲ. ಆದರೆ, ರಾಜ್‌ ಕಪೂರ್ ಈ ಚಿತ್ರಸಾಹಿತ್ಯವನ್ನು ತಮ್ಮ ‘ಸಂಗಮ್‌’ ಚಿತ್ರದಲ್ಲಿ ಬಳಕೆ ಮಾಡಿಕೊಂಡರು. ಇದು ಜನಪ್ರಿಯ ಗೀತೆಯಾಯಿತು. ಮತ್ತೊಂದು ಸಂದರ್ಶನದಲ್ಲಿ ಹಸ್ರತ್‌ ಮಾತನಾಡುತ್ತ, “ಮುಸ್ಲಿಂ ಯುವಕನಿಗಷ್ಟೇ ಮುಸ್ಲಿಂ ಯುವತಿಯ ಮೇಲೆ ಪ್ರೇಮವಾಗಬೇಕು ಎನ್ನುವ ನಿಯಮವೇನಿಲ್ಲ. ನಾನು ಮೌನವಾಗಿಯೇ ರಾಧಾಳನ್ನು ಪ್ರೀತಿಸುತ್ತಿದ್ದೆ. ಪತ್ರವನ್ನೂ ಬರೆದಿದ್ದೆ,” ಎಂದಿದ್ದರು. ಪ್ರಗತಿಪರ ಆಲೋಚನೆಯ ಹಸ್ರತ್‌, ಅತ್ಯುತ್ತಮ ಉರ್ದು ಮತ್ತು ಹಿಂದಿ ಕವಿ ಕೂಡ ಹೌದು. ಜೈಪುರ ಮೂಲದ ಇಕ್ಬಾಲ್‌ ಹುಸೇನ್‌ ಹಿಂದಿ ಚಿತ್ರರಂಗದಲ್ಲಿ ಹಸ್ರತ್ ಜೈಪುರಿ ಎಂದೇ ಹೆಸರಾಗಿದ್ದರು. ‘ಬರ್ಸಾತ್‌’ (1949) ಚಿತ್ರದೊಂದಿಗೆ ಗೀತರಚನೆ ಆರಂಭಿಸಿದ ಹಸ್ರತ್‌, ಮುಂದೆ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಯಾಗಿ ಬೆಳೆದರು. ಹಸ್ರತ್‌ ರಚನೆಯ ಜನಪ್ರಿಯ ಗೀತೆಗಳ ಪೈಕಿ ಆಯ್ದ ಹತ್ತು ರಚನೆಗಳ ವಿಡಿಯೋಗಳು ಇಲ್ಲಿವೆ.

ಸಿನಿಮಾ: ಸಂಗಮ್‌ (1964) | ಗಾಯನ: ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್‌

ಸಿನಿಮಾ: ಬರ್ಸಾತ್‌ (1949) | ಗಾಯನ: ಲತಾ ಮಂಗೇಶ್ಕರ್‌

ಸಿನಿಮಾ: ಅಂದಾಜ್‌ (1971) | ಗಾಯನ: ಕಿಶೋರ್ ಕುಮಾರ್‌

ಸಿನಿಮಾ: ಸೂರಜ್‌ (1966) | ಗಾಯನ: ಮೊಹಮ್ಮದ್ ರಫಿ

ಇದನ್ನೂ ಓದಿ : ಸ್ಮರಣೆ | ಗಾಯಕ ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

ಸಿನಿಮಾ: ಗೀತ್ ಗಾಯಾ ಪತ್ಥರೋನೇ (1964) | ಗಾಯನ: ಮಹೇಂದ್ರ ಕಪೂರ್, ಆಶಾ ಬೋಸ್ಲೆ

ಸಿನಿಮಾ: ಜಂಗ್ಲೀ (1961) | ಗಾಯನ: ಲತಾ ಮಂಗೇಶ್ಕರ್‌

ಸಿನಿಮಾ: ಪಗ್ಲಾ ಕಹೀ ಕಾ (1970) | ಗಾಯನ: ಮೊಹಮ್ಮದ್ ರಫಿ

ಸಿನಿಮಾ: ತೀಸ್ರಿ ಕಸಮ್‌ (1966) | ಗಾಯನ: ಲತಾ ಮಂಗೇಶ್ಕರ್

ಸಿನಿಮಾ: ಲಾಲ್ ಪತ್ಥರ್‌ (1971) | ಗಾಯನ: ಮೊಹಮ್ಮದ್ ರಫಿ

ಸಿನಿಮಾ: ರಾಮ್‌ ತೇರಿ ಗಂಗಾ ಮೈಲಿ (1985) | ಗಾಯನ: ಲತಾ ಮಂಗೇಶ್ಕರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More