ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್

‘ಥಗ್ಸ್ ಆಫ್‌ ಹಿಂದೂಸ್ತಾನ್‌’ ಸಿನಿಮಾದಲ್ಲಿನ ಅಮಿತಾಭ್ ಬಚ್ಚನ್ ಪಾತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ. ಫಿಲಿಪ್ ಮೆಡೋಸ್ ಟೈಲರ್‌ ಕೃತಿ ‘ಕನ್ಫೆಷನ್ಸ್ ಆಫ್‌ ಎ ಥಗ್‌’ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾ ನವೆಂಬರ್ 8ರಂದು ತೆರೆಕಾಣಲಿದೆ

ವರ್ಷದ ಬಹುನಿರೀಕ್ಷಿತ ‘ಥಗ್ಸ್‌ ಆಫ್ ಹಿಂದೂಸ್ತಾನ್‌’ ಸಿನಿಮಾದಲ್ಲಿನ ಅಮಿತಾಭ್ ಬಚ್ಚನ್ ಲುಕ್ ಬಹಿರಂಗವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಮೀರ್ ಖಾನ್‌ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಬಚ್ಚನ್‌ ಅವರ ‘ಖುದಾಬಕ್ಷ್’ ಮೋಷನ್ ಟೀಸರ್ ಶೇರ್ ಮಾಡಿದ್ದಾರೆ. ಉಕ್ಕಿನ ಕವಚ, ಕೈಯಲ್ಲಿ ಖಡ್ಗ, ತಲೆಗೆ ಟರ್ಬನ್ ಸುತ್ತಿದ್ದು, ಚೂಪು ನೋಟದ ಬಚ್ಚನ್ ಇಲ್ಲಿ ಲಾರ್ಜರ್‌ದ್ಯಾನ್ ಲೈಫ್ ಲುಕ್‌ನಲ್ಲಿದ್ದಾರೆ. ಈ ಮೋಷನ್ ಪೋಸ್ಟರ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದೆ.

ಇದನ್ನೂ ಓದಿ : ಮುತ್ತಿನ ಹಾರ | ನೀವು ಕಂಡಿರದ ವಿಷ್ಣುವರ್ಧನ್‌ ಅವರ ಆಕರ್ಷಕ ಫೋಟೋಗಳು

ಸಮುದ್ರದ ಉಗ್ರ ಅಲೆಗಳ ಮೇಲೆ ಯುದ್ಧಗಳನ್ನು ಗೆದ್ದು ಬೀಗುತ್ತಿರುವ ತಂಡದ ನಾಯಕ ಖುದಾಬಕ್ಷ್ ಎನ್ನುವುದು ಪಾತ್ರದ ಕುರಿತಾದ ಅಧಿಕೃತ ಚಿತ್ರಣ. ದೊಡ್ಡ ಹಡಗಿನ ಕಮಾಂಡರ್‌ನಂತೆ ಕಾಣಿಸುವ ಖುದಾಬಕ್ಷ್ ಯುದ್ಧಕ್ಕೆ ಸನ್ನದ್ಧವಾಗಿರುವಂತಿದೆ. ನಾಟಕೀಯ ಹಿನ್ನೆಲೆ ಸಂಗೀತ ಮೋಷನ್ ಟೀಸರ್‌ ಅನ್ನು ಚಂದಗೊಳಿಸಿದೆ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಸಿನಿಮಾ, ಸಮುದ್ರದ ಹಿನ್ನೆಲೆಯಲ್ಲಿ ಕತೆ ನಿರೂಪಿಸುತ್ತಿರುವ ಮೊದಲ ಬಾಲಿವುಡ್ ಪ್ರಯೋಗ.

'ದಿ ಬಿಗ್ಗೆಸ್ಟ್‌ ಥಗ್ಸ್‌ ಆಫ್ ಆಲ್‌!' ಎನ್ನುವ ಒಕ್ಕಣಿಯೊಂದಿಗೆ ನಟ ಅಮೀರ್ ಖಾನ್‌ ಟ್ವಿಟರ್‌ನಲ್ಲಿ ಮೋಷನ್ ಪೋಸ್ಟರ್ ಶೇರ್ ಮಾಡಿದ್ದಾರೆ. ಅಮಿತಾಭ್‌ ಪಾತ್ರದ ನಂತರ ಇದೀಗ ಚಿತ್ರದಲ್ಲಿನ ಅಮೀರ್ ಲುಕ್ ಬಗ್ಗೆ ಕುತೂಹಲ ಮೂಡಿದೆ. ಫಿಲಿಪ್ ಮೆಡೋಸ್ ಟೈಲರ್‌ ಕೃತಿ ‘ಕನ್ಫೆಷನ್ಸ್ ಆಫ್‌ ಎ ಥಗ್‌’ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಫಾತೀಮಾ ಸನಾ ಶೇಕ್ ಮತ್ತು ಕತ್ರಿಕಾ ಕೈಪ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನವೆಂಬರ್ 8ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More