ವಿಡಿಯೋ | ಜನ್ಮದಿನದಂದು ಉತ್ತಮ ಪ್ರಜಾಕೀಯ ಪಕ್ಷ ಘೋಷಿಸಿದ ಉಪೇಂದ್ರ

ನಟ ಉಪೇಂದ್ರ ತಮ್ಮ ಹುಟ್ಟುಹಬ್ಬದ ದಿನವಾದ ಇಂದು (ಸೆಪ್ಟೆಂಬರ್‌ 18) ಉತ್ತಮ ಪ್ರಜಾಕೀಯ ಪಕ್ಷದ ಘೋಷಣೆ ಮಾಡಿದರು. ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಪಕ್ಷದ ಮುಂದಿನ ನಡೆಗಳನ್ನು ಕುರಿತೂ ಮಾತನಾಡಿದರು

ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆಗೆ ನಟ ಉಪೇಂದ್ರ ಇಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ನಂತರ ಸುದ್ದಿಗೋಷ್ಠಿಯಲ್ಲಿ ಹೊಸ ಪಕ್ಷ ‘ಯುಪಿಪಿ’ ಘೋಷಣೆ ಮಾಡುವುದರ ಜೊತೆಗೆ, ಪಕ್ಷದ ಪ್ರಣಾಳಿಕೆಯನ್ನೂ ಅನಾವರಣಗೊಳಿಸಿದರು. ತಮ್ಮ ಪಕ್ಷದ ಯೋಜನೆಗಳು ಹಾಗೂ ಕಾರ್ಯವ್ಯವಸ್ಥೆಯ ಕುರಿತು ಮುಕ್ತವಾಗಿ ಚರ್ಚಿಸಿದರು.

ಈ ಹಿಂದೆ ಪ್ರಜಾಕೀಯದ ಕನಸು ಹೊತ್ತು ಕೆಪಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಉಪೇಂದ್ರ, ಪಕ್ಷದಲ್ಲಾದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಕೆಪಿಜೆಪಿಗೆ ವಿದಾಯ ಹೇಳಿ, ಸ್ವಂತ ಪಕ್ಷ ಕಟ್ಟುವ ನಿರ್ಧಾರ ಕೈಗೊಂಡಿದ್ದರು. ಉಪೇಂದ್ರರ ಬಹುದಿನಗಳ ಪ್ರಜಾಕೀಯದ ಕನಸು ಇಂದು ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿದ್ದು, 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸಂಗತಿಯನ್ನು ಪ್ರಸ್ತಾಪಿಸಲಿಲ್ಲ.

ಇದನ್ನೂ ಓದಿ : ಮತ್ತೊಂದು ಹೊಸ ಪಕ್ಷಕ್ಕೆ ಸಾರಥಿಯಾಗಲು ಅಣಿಯಾದ ಉಪೇಂದ್ರ

ಇದೇ ವೇಳೆ, ಇತರ ಪಕ್ಷಗಳ ಬಗ್ಗೆ ಮಾತನಾಡಿದ ಅವರು, “ಚುನಾವಣೆಯ ಅವಧಿಗೆ ಆರು ತಿಂಗಳು ಮೊದಲೇ ಎಲ್ಲ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಬೇಕು. ಅದರಿಂದ ದೇಶದ ಜನತೆಗೆ ತಮ್ಮ ಪ್ರತಿನಿಧಿಯ ಆಯ್ಕೆ ಸರಳವಾಗುತ್ತದೆ,” ಎಂದರು. ಪಕ್ಷ, ಅಭ್ಯರ್ಥಿ, ಜಾತಿ ಇದ್ಯಾವುದರ ಮೊಹಕ್ಕೂ ಸಿಲುಕದೆ ಅಭ್ಯರ್ಥಿಯಲ್ಲಿನ ಜನಪರ ವಿಚಾರಗಳನ್ನು ಗಮನಿಸಿ ಮತ ಚಲಾಯಿಸಬೇಕೆಂದು ಹೇಳಿದರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More