ವಿಡಿಯೋ | ‘8 ಎಂಎಂ’ ಹಾಡಿನೊಂದಿಗೆ ಮರಳಿದ ಗಾಯಕ ಆಂಟೋನಿ

‘ಟಗರು’ ಚಿತ್ರದ ಶೀರ್ಷಿಕೆ ಗೀತೆ ಹಾಡಿ ಜನಪ್ರಿಯರಾಗಿದ್ದ ಗಾಯಕ ಆಂಟೋನಿ ದಾಸ್‌ ಮತ್ತೆ ಸುದ್ದಿಯಾಗಿದ್ದಾರೆ. ಜಗ್ಗೇಶ್‌ ನಟನೆಯ ‘8 ಎಂಎಂ’ ಸಿನಿಮಾಗೆ ಅವರು ಹಾಡಿರುವ ಗೀತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿಶಿಷ್ಟ ಕಂಠದ ಆಂಟೋನಿ ಹಾಡು ಸಿನಿಪ್ರಿಯರಿಗೆ ಇಷ್ಟವಾಗಿದೆ.

ಜಗ್ಗೇಶ್ ಅಭಿನಯದ ‘8 ಎಂಎಂ’ ಚಿತ್ರ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಈ ಚಿತ್ರದಿಂದ ಜಗ್ಗೇಶ್ ಸಿನಿ ಜೀವನದಲ್ಲಿ ಹೊಸ ಇನ್ನಿಂಗ್ಸ್ ಶುರುವಾಗುವ ಸಾಧ್ಯತೆಗಳಿವೆ. ಪಾತ್ರದ ಆಯ್ಕೆಯಲ್ಲಿ ತೀರ ಕಾಳಜಿ ವಹಿಸಿದ್ದಾರೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಗಡ್ಡಧಾರಿಯಾಗಿ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ ಜಗ್ಗೇಶ್. ಇದೀಗ ಅವರ ಸಿನಿಮಾಗೆ ‘ಟಗರು’ ಖ್ಯಾತಿಯ ಆಂಟೋನಿ ದಾಸ್ ಹಾಡಿದ್ದಾರೆ. ಚಿತ್ರಕ್ಕೆ ಅವರು ದನಿಯಾಗಿರುವ ‘ದುನಿಯಾ ಹಾರಿ ಬಿಟ್ಟ ಗಾಳಿಪಟ’ ಹಾಡು ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಮುತ್ತಿನ ಹಾರ | ನೀವು ಕಂಡಿರದ ವಿಷ್ಣುವರ್ಧನ್‌ ಅವರ ಆಕರ್ಷಕ ಫೋಟೋಗಳು

ತಮಿಳಿನ ಜನಪದ ಹಾಡುಗಾರ ಆಂಟೋನಿ ದಾಸ್ ತಮ್ಮ ವಿಶಿಷ್ಠ ಧ್ವನಿಯಿಂದಲೇ ಕನ್ನಡಿಗರ ಮನ ಗೆದ್ದಿದ್ದರು. ಅವರು ಹಾಡಿದ್ದ ‘ಟಗರು’ ಶೀರ್ಷಿಕೆ ಗೀತೆ ಚಿತ್ರದ ಯಶಸ್ಸಿಗೆ ಪ್ರಮುಖ ಕಾಣ್ಕೆ ನೀಡಿತ್ತು. ಗೆಲುವಿನ ನಿರೀಕ್ಷೆಯಲ್ಲಿರುವ ಜಗ್ಗೇಶ್‌ ‘8 ಎಂಎಂ’ ಚಿತ್ರದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದಾರೆ. ಮೊದಲ ಬಾರಿಗೆ ಚಿತ್ರಕ್ಕೆ ಅವರು ಹಾಡೊಂದನ್ನು ಬರೆದಿದ್ದರು. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಈ ‘ಜಗವೇ ಘೋರ’ ಹಾಡಿಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ‘8 ಎಂಎಂ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಸಿಷ್ಠ ಸಿಂಹ ಮತ್ತು ಮಯೂರಿ ನಟಿಸುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More