ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ ನಿನ್ನೆ (ಸೆ.19) ಅಗಲಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ಮೂರು ತಲೆಮಾರಿನ ನಾಯಕನಟರೊಂದಿಗೆ ಕಾಣಿಸಿಕೊಂಡಿದ್ದಾರೆ. ಸದಾಶಿವ ಬ್ರಹ್ಮಾವರ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ

ಅಸಹಾಯಕ ತಂದೆ, ವ್ಯವಸ್ಥೆಯ ವಂಚನೆಗೆ ಬಲಿಯಾದ ಅಮಾಯಕ, ಗಂಭೀರ ಸ್ವಭಾವದ ವ್ಯಕ್ತಿ... ಕನ್ನಡ ಸಿನಿಮಾಗಳ ಇಂತಹ ಪಾತ್ರಗಳಲ್ಲಿ ನಟ ಸದಾಶಿವ ಬ್ರಹ್ಮಾವರ ನೆನಪಾಗುತ್ತಾರೆ. ನೂರೈವತ್ತಕ್ಕೂ ಹೆಚ್ಚು ಚಿತ್ರಗಳ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಸದಾಶಿವ ಬ್ರಹ್ಮಾವರ ನಿನ್ನೆ (ಸೆ.19) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ತೊಂಬತ್ತು ವರ್ಷವಾಗಿತ್ತು. ತಮ್ಮ ಸಾವಿನ ಸುದ್ದಿ ಕುಟುಂಬದವರ ಹೊರತಾಗಿ ಮತ್ತಾರಿಗೂ ಗೊತ್ತಾಗಕೂಡದು ಎಂದು ಅವರು ಮಕ್ಕಳಿಗೆ ತಿಳಿಸಿದ್ದರಂತೆ. ಇದರಿಂದಾಗಿ ಅವರ ಸಾವಿನ ಸುದ್ದಿ ತಡವಾಗಿ ತಿಳಿದುಬಂದಿದೆ.

ಸದಾಶಿವ ಅವರು ಕಂಪನಿ ನಾಟಕಗಳಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದವರು. ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ‘ಜಯ ಕರ್ನಾಟಕ ನಾಟಕ ಸಂಘ’ ಕಂಪನಿ ಮೂಲಕ ರಂಗಭೂಮಿಗೆ ಪರಿಚಯವಾಗಿದ್ದರು. ‘ಕರಾವಳಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಅವರು, ಪೋಷಕ ಪಾತ್ರಗಳಿಗೆ ಜೀವ ತುಂಬಿದರು. ‘ಜ್ವಾಲಾಮುಖಿ’, ‘ಧ್ರುವತಾರೆ’, ‘ದೇವತೆ’, ‘ಪ್ರೇಮಪರ್ವ’, ‘ಆವೇಶ’, ‘ಶ್ರುತಿ ಸೇರಿದಾಗ’, ‘ಹೃದಯ ಪಲ್ಲವಿ’ ಅವರು ಅಭಿನಯಿಸಿದ ಕೆಲವು ಪ್ರಮುಖ ಸಿನಿಮಾಗಳು. ‘ಬೂದಿ ಮುಚ್ಚಿದ ಕೆಂಡ’ ಚಿತ್ರದಲ್ಲಿ ಅವರು ಖಳನಾಗಿ ಗಮನ ಸೆಳೆದಿದ್ದರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಮೃದುಮಾತಿನ ನಟ ಸದಾಶಿವ ಬ್ರಹ್ಮಾವರ ಇನ್ನು ನೆನಪು ಮಾತ್ರ.

ಕನಸೆಂಬೋ ಕುದುರೆಯನೇರಿ

ಬೆಟ್ಟದ ಹೂ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More