ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’

ವೈದೇಹಿ ಅವರ ಸಣ್ಣಕತೆಗಳನ್ನು ಆಧರಿಸಿ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರ ಸಿದ್ಧವಾಗಿದೆ. ನಟಿ ಚಂಪಾ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವ ಸಿನಿಮಾದ ನಾಯಕಿ ವೈಜಯಂತಿ ಅಡಿಗ

ನಟಿ ಹಾಗೂ ಕಂಠದಾನ ಕಲಾವಿದೆಯಾಗಿ ಪರಿಚಿತರಾದವರು ಚಂಪಾ ಶೆಟ್ಟಿ. ರಂಗಭೂಮಿ ಹಿನ್ನೆಲೆಯ ಚಂಪಾ ಅವರಿಗೆ ನಿರ್ದೇಶನ ಬಹುದಿನಗಳ ಕನಸು. ಇದೀಗ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದೊಂದಿಗೆ ಅವರ ನಿರ್ದೇಶನದ ಆಸೆ ಕೈಗೂಡಿದೆ. ಈ ಮೊದಲು ಅವರು ವೈದೇಹಿಯವರ ‘ಅಕ್ಕು’, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಹಾಗೂ ‘ಅಮ್ಮಚ್ಚಿಯೆಂಬ ನೆನಪು’ ಕತೆಗಳ ಸನ್ನಿವೇಶಗಳನ್ನು ಒಟ್ಟುಗೂಡಿಸಿ ‘ಅಕ್ಕು’ ನಾಟಕ ರಚಿಸಿ ನಿರ್ದೇಶಿಸಿದ್ದರು. ಈ ನಾಟಕ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಿತ್ತು. ಇಂದಿಗೂ ಪ್ರಸ್ತುತವಾಗಬಹುದಾದ ಈ ಕತೆಯನ್ನು ಅವರೀಗ ಬೆಳ್ಳಿತೆರೆಗೆ ಅಳವಡಿಸಿದ್ದಾರೆ.

ಇದನ್ನೂ ಓದಿ : ವಿಷ್ಣು ನೆನಪು | ನಟ ವಿಷ್ಣುವರ್ಧನ್‌ ವೃತ್ತಿಬದುಕಿನ ಮಹತ್ವದ ಹತ್ತು ಸಿನಿಮಾ

“ಲೇಖಕರ ಹಾಗೂ ಕತೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಚಿತ್ರದ ನಿರೂಪಣೆ ಮಾಡುವುದು ನನ್ನ ಹೊಣೆಯಾಗಿತ್ತು. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಚಿತ್ರದ ಕತೆಯನ್ನು ಕಟ್ಟಿಕೊಟ್ಟಿದ್ದೇನೆ ಎನ್ನುವ ಸಮಾಧಾನ ನನ್ನಲ್ಲಿದೆ,” ಎನ್ನುತ್ತಾರೆ ಚಂಪಾ. ವೈದೇಹಿಯವರ ಆಶಯದಂತೆ ಚಿತ್ರದ ಸಂಭಾಷಣೆಗಳನ್ನು ಕುಂದಾಪುರ ಭಾಷೆಯಲ್ಲಿಯೇ ರೂಪಿಸಲಾಗಿದೆ. ಸ್ವತಃ ವೈದೇಹಿಯವರೇ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ದಕ್ಷಿಣ ಕನ್ನಡದ ಪಡುಬಿದ್ರೆಯ ಆಸುಪಾಸಿನ ಸುಂದರ ತಾಣಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿದೆ. ಸದ್ಯ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಗ್ರೀನ್ ಸಿಗ್ನಲ್ ಸಿಕ್ಕಿದೆ. ಏಪ್ರಾನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗಿರುವ ಸಿನಿಮಾದ ಬಿಡುಗಡೆ ತಯಾರಿಯಲ್ಲಿದೆ ಚಿತ್ರತಂಡ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More