ಬಣ್ಣದ ಲೋಕಕ್ಕೆ ಬರಲಿದ್ದಾರೆಯೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ?

ಟ್ವಿಟರ್ ಖಾತೆಯಲ್ಲಿ ‘ಟ್ರೇಲರ್’ ಎಂಬ ಬರಹದ ಪೋಸ್ಟರ್‌ವೊಂದನ್ನು ಹಂಚಿಕೊಂಡಿರುವ ಕ್ರಿಕೆಟಿಗ ವಿರಾಟ್, ಹತ್ತು ವರ್ಷಗಳ ನಂತರ ಬೇರೊಂದು ಪ್ರಯತ್ನಕ್ಕೆ ಅಣಿಯಾಗಿದ್ದು, ಉತ್ಸುಕನಾಗಿರುವುದಾಗಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಣ್ಣದ ಮೊರೆಹೋಗಿದ್ದಾರೆ. ಕ್ರಿಕೆಟ್ ಜೊತೆಜೊತೆಯಲ್ಲೇ ಖಾಸಗಿ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿರಾಟ್, ತಾವು ನಟನೆಯತ್ತ ವಾಲಿರುವುದನ್ನು ಅಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ‘ಟ್ರೇಲರ್’ ಎಂಬ ಬರಹದ ಪೋಸ್ಟರ್‌ವೊಂದನ್ನು ಹಂಚಿಕೊಂಡಿರುವ ಅವರು, ಹತ್ತು ವರ್ಷಗಳ ನಂತರ ಬೇರೊಂದು ಪ್ರಯತ್ನಕ್ಕೆ ತಾವು ಅಣಿಯಾಗಿದ್ದು, ಬಹಳ ಉತ್ಸುಕನಾಗಿರುವುದಾಗಿ ಬರೆದುಕೊಂಡಿದ್ದಾರೆ.

ವಿರಾಟ್ ಅವರ ವ್ರಾಂಗ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಪೋಸ್ಟರ್ ಸಿದ್ಧಗೊಂಡಿದ್ದು, ಇಂಟ್ರುಡ್ಯೂಸಿಂಗ್ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ. ಪೋಸ್ಟರ್‌ನಲ್ಲಿ ವಿರಾಟ್ ಇಂಟೆನ್ಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಹೊಸ ಅವತಾರ ಚಿತ್ರಕ್ಕಾಗಿಯೋ, ಜಾಹಿರಾತಿಗಾಗಿಯೋ ಖಚಿತವಾಗಿಲ್ಲವಾದರೂ, ಕೊಹ್ಲಿ ಕಿರುಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಹರಿದಾಡುತ್ತಿವೆ. ಇದೇ ತಿಂಗಳ 28ರಂದು ಈ ಪೋಸ್ಟರ್ ಬಗೆಗಿನ ಗೊಂದಲಗಳು ದೂರವಾಗಲಿವೆ ಎನ್ನಲಾಗಿದೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಮತ್ತು ಮೀರಾಬಾಯಿ ಚಾನುಗೆ ಜಂಟಿ ಖೇಲ್‌ ರತ್ನಕ್ಕೆ ಶಿಫಾರಸು

ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದಲೇ ಕ್ರಿಕೆಟ್ ಜಗತ್ತಿನ ಉತ್ತುಂಗಕ್ಕೇರಿದ ಕೊಹ್ಲಿ, ಟೀಂ ಇಂಡಿಯಾ ನಾಯಕನಾಗಿಯೂ ಯಶಸ್ಸು ಕಂಡಿದ್ದಾರೆ. ಕಳೆದ ವರ್ಷವಷ್ಟೇ ಬಹುಕಾಲದ ಗೆಳತಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವರಿಸಿದ್ದ ಕೊಹ್ಲಿ, ಅನುಷ್ಕಾರ ದೆಸೆಯಿಂದ ಚಿತ್ರರಂಗಕ್ಕೂ ಕಾಲಿಡುತ್ತಾರೆಯೇ ಎಂಬ ಕುತೂಹಲಗಳು ಜನಗಳಲ್ಲಿ ಹೆಚ್ಚಾಗಿದೆ.

ಭಾರತ ತಂಡದ ವೇಗದ ಬೌಲರ್ ಆಗಿದ್ದ ಶ್ರಿಶಾಂತ್ ಕೂಡ ಈ ಹಿಂದೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ವಿದೇಶಿ ಆಟಗಾರರಾದ ಬ್ರೆಟ್ ಲೀ, ಬ್ರಾವೋ ಸೇರಿದಂತೆ ಕ್ರಿಕೆಟ್ ಜಗತ್ತಿನ ಹಲವರು ಆಲ್ಬಮ್ ಸಾಂಗ್ ಹಾಗೂ ಚಿತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಸುದ್ದಿಯಾಗಿದ್ದರು. ಇದೀಗ ವಿರಾಟ್ ಕೂಡ ಈ ಸಾಲಿಗೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಕುತೂಹಲ ಮನೆಮಾಡಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More