ಜನುಮದಿನ | ಗಾಯಕ ಪಿ ಬಿ ಶ್ರೀನಿವಾಸ್ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ಅಮರ ಗಾಯಕ ಪಿ ಬಿ ಶ್ರೀನಿವಾಸ್ ಜನ್ಮದಿನವಿಂದು (ಸೆ.22). ಜನಪ್ರಿಯ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ಅವರು ಹಾಡಿರುವ ಬಹುತೇಕ ಹಾಡುಗಳು ಚಿರಸ್ಮರಣೀಯ, ಸದಾ ಗುನುಗುವಂಥವು. ಪಿಬಿಎಸ್‌ ಅವರ ಗಾಯನದ ಆಯ್ದ ಹತ್ತು ಸಿನಿಮಾ ವಿಡಿಯೋ ಹಾಡುಗಳ ಗುಚ್ಛ ಇಲ್ಲಿದೆ 

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕ ಪಿ ಬಿ ಶ್ರೀನಿವಾಸ್‌. ಹಿಂದಿ ಸೇರಿದಂತೆ ಎಂಟು ಭಾಷೆಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಅವರು ದನಿಯಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿರುವ ಚಿತ್ರಗೀತೆ, ಭಕ್ತಿಗೀತೆಗಳ ಸಂಖ್ಯೆ ಸಾವಿರ ದಾಟುತ್ತದೆ. ವರನಟ ರಾಜಕುಮಾರ್ ಅವರಿಗೆ ಅತಿ ಹೆಚ್ಚು ಗೀತೆಗಳನ್ನು ಹಾಡಿರುವ ಪಿಬಿಎಸ್‌ ಕಂಠಸಿರಿಯ ನೂರಾರು ಮಧುರ ಹಾಡುಗಳು ಚಿರಸ್ಮರಣೀಯ. ಕರ್ನಾಟಕ ಶಾಸ್ತ್ರೀಯ ಸಂಗೀತ, ಘಜಲ್ ಗಾಯನದಲ್ಲಿ ವಿಶೇಷ ಪರಿಣತಿ ಇದ್ದ ಪಿಬಿಎಸ್‌ ಕವಿ ಕೂಡ ಹೌದು. ಪಿಬಿಎಸ್‌ರ ನೂರಾರು ಜನಪ್ರಿಯ ಹಾಡುಗಳ ಪೈಕಿ ಆಯ್ದ ಹತ್ತು ವಿಡಿಯೋ ಹಾಡುಗಳು ಇಲ್ಲಿವೆ.

ಗೀತೆ: ಇಳಿದು ಬಾ ತಾಯಿ | ಸಿನಿಮಾ: ಅರಿಶಿಣ ಕುಂಕುಮ (1970) | ಸಾಹಿತ್ಯ: ದ ರಾ ಬೇಂದ್ರೆ | ಸಂಗೀತ: ವಿಜಯ ಭಾಸ್ಕರ್‌

ಗೀತೆ: ನೀ ಬಂದು ನಿಂತಾಗ | ಸಿನಿಮಾ: ಕಸ್ತೂರಿ ನಿವಾಸ (1971) | ಸಾಹಿತ್ಯ: ಆರ್‌ ಎನ್ ಜಯಗೋಪಾಲ್‌ | ಸಂಗೀತ: ಜಿ ಕೆ ವೆಂಕಟೇಶ್‌ | ಸಹಗಾಯನ: ಪಿ ಸುಶೀಲ

ಗೀತೆ: ಬಾಡಿಹೋದ ಬಳ್ಳಿಯಿಂದ | ಸಿನಿಮಾ: ಎರಡು ಕನಸು (1974) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್ - ನಾಗೇಂದ್ರ

ಗೀತೆ: ಆಕಾಶವೇ ಬೀಳಲಿ ಮೇಲೆ | ಸಿನಿಮಾ: ನ್ಯಾಯವೇ ದೇವರು (1971) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ರಾಜನ್ - ನಾಗೇಂದ್ರ

ಗೀತೆ: ಮಲೆನಾಡ ಹೆಣ್ಣ ಮೈಬಣ್ಣ | ಸಿನಿಮಾ: ಬೂತಯ್ಯನ ಮಗ ಅಯ್ಯು (1974) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ಜಿ ಕೆ ವೆಂಕಟೇಶ್

ಗೀತೆ: ರವಿವರ್ಮನ ಕುಂಚದ | ಸಿನಿಮಾ: ಸೊಸೆ ತಂದ ಸೌಭಾಗ್ಯ (1977) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಜಿ ಕೆ ವೆಂಕಟೇಶ್ | ಸಹಗಾಯನ: ಎಸ್ ಜಾನಕಿ

ಗೀತೆ: ಕನ್ನಡ ನಾಡಿನ ವೀರ ರಮಣಿಯ | ಸಿನಿಮಾ: ನಾಗರಹಾವು (1973) | ಸಾಹಿತ್ಯ: ಚಿ ಉದಯಶಂಕರ್‌ | ಸಂಗೀತ: ವಿಜಯ ಭಾಸ್ಕರ್‌

ಗೀತೆ: ಗಾಳಿಯ ಪಟದಂತೆ | ಸಿನಿಮಾ: ದೇವರ ದುಡ್ಡು (1977) | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಸಂಗೀತ: ರಾಜನ್-ನಾಗೇಂದ್ರ

ಗೀತೆ: ನಗುನಗುತಾ ನಲಿ ನಲಿ | ಸಿನಿಮಾ: ಬಂಗಾರದ ಮನುಷ್ಯ (1972) | ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ | ಸಂಗೀತ: ಜಿ ಕೆ ವೆಂಕಟೇಶ್‌

ಗೀತೆ: ನೀರಿನಲ್ಲಿ ಅಲೆಯ ಉಂಗುರ | ಸಿನಿಮಾ: ಬೇಡಿ ಬಂದವಳು (1968) | ಸಾಹಿತ್ಯ: ಆರ್ ಎನ್ ಜಯಗೋಪಾಲ್‌ | ಸಂಗೀತ: ಆರ್ ಸುದರ್ಶನಂ | ಸಹಗಾಯಕಿ: ಪಿ ಸುಶೀಲ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More