‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಪೋಸ್ಟರ್‌ ರಿಲೀಸ್‌, ಸೆ.27ಕ್ಕೆ ಟ್ರೈಲರ್

ಬಹುನಿರೀಕ್ಷಿತ ಹಿಂದಿ ಸಿನಿಮಾ ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಪೋಸ್ಟರ್ ಬಿಡುಗಡೆಯಾಗಿದೆ. ಈಗಾಗಲೇ ಬಂದಿರುವ ಪ್ರಮುಖ ಪಾತ್ರಗಳ ಫಸ್ಟ್‌ ಲುಕ್ ಮೋಷನ್ ಪೋಸ್ಟರ್‌ಗಳು ಸಿನಿಪ್ರೇಮಿಗಳ ಮನಗೆದ್ದಿವೆ. ನಾಡಿದ್ದು (ಸೆ.27) ಟ್ರೈಲರ್ ಬರಲಿದ್ದು, ನವೆಂಬರ್ 8ರಂದು ಸಿನಿಮಾ ಬಿಡುಗಡೆಯಾಗಲಿದೆ

ಕಳೆದ ವಾರದಿಂದೀಚೆಗೆ ‘ಥಗ್ಸ್ ಆಫ್‌ ಹಿಂದೂಸ್ತಾನ್‌’ ಸಿನಿಮಾ ಪಾತ್ರಗಳ ಫಸ್ಟ್‌ಲುಕ್‌ ಮೋಷನ್ ಪೋಸ್ಟರ್‌ಗಳು ಒಂದೊಂದಾಗಿ ಬಿಡುಗಡೆಯಾಗಿದ್ದವು. ನಿನ್ನೆ ಅಮೀರ್ ಖಾನ್‌ ‘ಫಿರಂಗಿ’ ಫಸ್ಟ್‌ ಲುಕ್ ರಿವೀಲ್ ಆಗಿತ್ತು. ಈ ಪಾತ್ರ ‘ಪೈರೇಟ್ಸ್ ಆಫ್‌ ದಿ ಕೆರಬಿಯನ್‌’ ಹಾಲಿವುಡ್ ಚಿತ್ರದಲ್ಲಿನ ಜಾನಿ ಡೆಪ್‌ ನೆನಪು ಮಾಡುತ್ತದೆ. ದೊಡ್ಡ ಹಡಗಿನ ಹಿನ್ನೆಲೆಯಲ್ಲಿ ಕುದುರೆ ಮೇಲೆ ಕುಳಿತು ಸೆಲ್ಯೂಟ್‌ ಹೊಡೆಯುವ ಅಮೀರ್ ಲುಕ್‌ ಆಕರ್ಷಕವಾಗಿದೆ. “ಇವನನ್ನು ಗೆಲ್ಲಲು ನೀವು ದೊಡ್ಡ ತಯಾರಿಯೊಂದಿಗೆ ಬರಬೇಕು,” ಎನ್ನುವ ಕ್ಯಾಪ್ಶನ್‌ನೊಂದಿಗೆ ಯಶ್‌ರಾಜ್ ಫಿಲ್ಮ್ಸ್‌ ಈ ಮೋಷನ್ ಪೋಸ್ಟರ್‌ ಶೇರ್ ಮಾಡಿತ್ತು.

ಇಂದು ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಅಮೀರ್ ಖಾನ್‌, ಅಮಿತಾಭ್‌ ಬಚ್ಚನ್‌, ಫಾತಿಮಾ ಸನಾ ಶೇಕ್‌, ಕತ್ರಿಕಾ ಕೈಫ್‌ ಪೋಸ್ಟರ್‌ನಲ್ಲಿ ಕಾಣಿಸುತ್ತಾರೆ. ನಾಡಿದ್ದು (ಸೆ.27) ಟ್ರೈಲರ್ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಫಿಲಿಪ್ ಮೆಡೋಸ್ ಟೈಲರ್‌ ಕೃತಿ ‘ಕನ್ಫೆಷನ್ಸ್ ಆಫ್‌ ಎ ಥಗ್‌’ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು. ಫಾತಿಮಾ ಸನಾ ಶೇಕ್ ಮತ್ತು ಕತ್ರೀನಾ ಕೈಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಸಿನಿಮಾ ನವೆಂಬರ್ 8ರಂದು ತೆರೆಕಾಣಲಿದೆ.

ಇದನ್ನೂ ಓದಿ : ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More