ವಿಡಿಯೋ | ಉಪೇಂದ್ರರ ಫಸ್ಟ್‌ ಲುಕ್‌ನಲ್ಲೇ ‘ಐ ಲವ್‌ ಯೂ’ ಒನ್‌ಲೈನ್ ಸ್ಟೋರಿ

ಈ ಹಿಂದೆ ‘ಬ್ರಹ್ಮ’ ಸಿನಿಮಾ ಮಾಡಿದ್ದ ನಿರ್ದೇಶಕ ಅರ್ ಚಂದ್ರು ಮತ್ತು ನಟ ಉಪೇಂದ್ರ ‘ಐ ಲವ್‌ ಯೂ’ನಲ್ಲಿ ಮತ್ತೆ ಜೊತೆಯಾಗಿದ್ದಾರೆ. ರಾಜಕೀಯದ ಮಧ್ಯೆ ಸಿನಿಮಾದಲ್ಲೂ ತೊಡಗಿಸಿಕೊಂಡಿದ್ದಾರೆ ಉಪೇಂದ್ರ. ‘ಐ ಲವ್ ಯೂ’ ಚಿತ್ರದ ಫಸ್ಟ್‌ ಲುಕ್ ರಿವೀಲ್ ಆಗಿದ್ದು, ಡಿಸೆಂಬರ್‌ನಲ್ಲಿ ಚಿತ್ರ ತೆರೆಕಾಣಲಿದೆ

ಆರ್ ಚಂದ್ರು ನಿರ್ದೇಶನದಲ್ಲಿ ಉಪೇಂದ್ರ, ರಚಿತಾ ರಾಮ್ ಹಾಗೂ ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಐ ಲವ್ ಯೂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಿರ್ದೇಶಕ ಆರ್ ಚಂದ್ರು ಫಸ್ಟ್ ಲುಕ್‌ನೊಂದಿಗೆ ಚಿತ್ರದ ಒನ್ ಲೈನ್ ಸ್ಟೋರಿ ಹೇಳುವ ಪ್ರಯತ್ನ ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆ. ಫಸ್ಟ್ ಲುಕ್‌ ಫೋಟೋದಲ್ಲಿ ತುಟಿಯಂಚಿನಲ್ಲೊಂದು ಗುಲಾಬಿ ಕಚ್ಚಿ ಅರೆನಗ್ನವಾಗಿ ಕಾಣಿಸಿಕೊಂಡಿರುವ ಉಪೇಂದ್ರರ ಭಾವಭಂಗಿಗಳಿವೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಈ ಚಿತ್ರ ಪ್ರೇಮ-ಕಾಮಗಳ ಸುತ್ತ ಗಿರಕಿ ಹೊಡೆಯುತ್ತದೆಂದು ಅಂದಾಜಿಸಬಹುದು.

ಈಗಾಗಲೇ ಐವತ್ತು ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಹಾಡಿನ ಚಿತ್ರೀಕರಣ ಸೇರಿದಂತೆ 20 ದಿನಗಳಷ್ಟು ಶೂಟಿಂಗ್ ಬಾಕಿ ಉಳಿದಿದೆ. ಇತ್ತೀಚೆಗೆ ಯುಪಿಪಿ ಪಕ್ಷ ಘೋಷಿಸುವ ಮೂಲಕ ರಾಜಕೀಯ ಮರುಪ್ರವೇಶ ಮಾಡಿರುವ ಉಪೇಂದ್ರ, ಪ್ರಜಾಕೀಯದ ನಡುವೆಯೇ ತಮ್ಮ ಸಿನಿ ಬದುಕಿನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಬ್ರಹ್ಮ’ ಚಿತ್ರದಲ್ಲಿ ಒಂದಾಗಿದ್ದ ಆರ್ ಚಂದ್ರು ಮತ್ತು ಉಪೇಂದ್ರ ಜೋಡಿ ‘ಐ ಲವ್ ಯೂ’ ಚಿತ್ರದ ಮೂಲಕ ಮತ್ತೊಂದು ಕತೆ ಹೇಳಲು ಹೊರಟಿದೆ. ಈ ಚಿತ್ರ ಡಿಸೆಂಬರ್ ವೇಳೆಗೆ ತೆರೆಕಾಣುವ ಸಾಧ್ಯತೆಗಳಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More