ತಮ್ಮ ನೋವಿಗೆ ಮಿಡಿದವರಿಗೆ ಧನ್ಯವಾದ ಹೇಳಿದ ನಟಿ, ರೂಪದರ್ಶಿ ಪದ್ಮಾಲಕ್ಷ್ಮಿ

16ರ ಹರೆಯದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಅಮೆರಿಕ ನಟಿ, ನಿರೂಪಕಿ ಪದ್ಮಾಲಕ್ಷ್ಮಿ ಹೇಳಿಕೊಂಡಿದ್ದರು. ಈ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ #WhyIDidntReport ಹ್ಯಾಷ್‌ಟ್ಯಾಗ್‌ನೊಂದಿಗೆ ತಮಗೆ ಸ್ಪಂದಿಸಿದವರಿಗೆ ಧನ್ಯವಾದ ಹೇಳಿದ್ದಾರೆ

ಭಾರತೀಯ ಮೂಲದ ಅಮೆರಿಕದ ಜನಪ್ರಿಯ ನಿರೂಪಕಿ, ನಟಿ, ರೂಪದರ್ಶಿ ಪದ್ಮಾಲಕ್ಷ್ಮಿ ಅವರ ಅತ್ಯಾಚಾರ ಕುರಿತ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಈ ಹೊತ್ತಿಗೂ ಚರ್ಚೆಯಾಗುತ್ತಿದೆ. ಹದಿನಾರರ ಹರೆಯದಲ್ಲಿ ಪ್ರಿಯಕರನಿಂದ ತಾವು ಅತ್ಯಾಚಾರಕ್ಕೊಳಗಾಗಿದ್ದಾಗಿ ಅವರು ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 7ರ ಹರೆಯದಲ್ಲೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು, ಆಗಲೂ ಇದನ್ನು ಪೋಷಕರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದನ್ನು ಅವರು #WhyIDidntReport ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಿದ್ದರು.

ಪದ್ಮಾಲಕ್ಷ್ಮೀ ಅವರ ಹೇಳಿಕೆ, ಟ್ವೀಟ್‌ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಗತ್ತಿನಾದ್ಯಂತ ಸಾವಿರಾರು ಜನರು #WhyIDidntReport ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಸಂದರ್ಭಗಳು ಹಾಗೂ ತಮಗೇಕೆ ಇದನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಸಂಗತಿಗಳನ್ನು ಅವರು ಬರೆಯುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪದ್ಮಾಲಕ್ಷ್ಮೀ, “ನನ್ನ ಹೇಳಿಕೆಗೆ ಸ್ಪಂದಿಸಿದ, ನನ್ನ ಅನುಭವವನ್ನು ಇತರರಿಗೂ ಹಂಚಿದ, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ,” ಎಂದಿದ್ದಾರೆ.

ಇದನ್ನೂ ಓದಿ : ಈ ವರ್ಷ ಸಾಹಿತ್ಯದ ನೊಬೆಲ್‌ ಘೋಷಣೆ ಇಲ್ಲ; ಅಕಾಡೆಮಿಗೂ ತಾಕಿದ #MeToo ಬಿಸಿ

48ರ ಹರೆಯದ ಪದ್ಮಾಲಕ್ಷ್ಮೀ ಅವರಿಗೆ ಎಂಟು ವರ್ಷದ ಮಗಳಿದ್ದಾಳೆ. ತಮ್ಮ ಟೀನೇಜ್‌ನ ಕೆಟ್ಟ ಅನುಭವ ಹೇಳಿಕೊಂಡ ನಂತರ ತಾವು ತೀವ್ರ ವಿಷಾದ, ಸಂಕಟಪಟ್ಟಿದ್ದಾಗಿ ಅವರು ಬರೆದುಕೊಳ್ಳುತ್ತಾರೆ. “ಮೂವತ್ತು ವರ್ಷಗಳಷ್ಟು ಹಿಂದಿ ಘಟನೆಯನ್ನು ಹಂಚಿಕೊಂಡ ನಂತರದ ಮೂರು ದಿನಗಳಲ್ಲಿ ನಾನು ಖಿನ್ನತೆಯಿಂದ ನರಳಿದ್ದೆ. ಟೀನೇಜ್‌ನಲ್ಲಿ ತಾನು ಮಾಡಿದ ತಪ್ಪಿಗೆ ಪುರುಷ ಯಾವುದೇ ರೀತಿಯ ಪಶ್ಚಾತ್ತಾಪ ಪಡುವುದಿಲ್ಲ. ಆದರೆ, ಮಹಿಳೆ ಬದುಕಿನುದ್ದಕ್ಕೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ,” ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

View this post on Instagram

I want to thank each and every one of you that reached out, commented, tweeted, shared this piece with others, and more importantly shared YOUR OWN stories. ⠀⠀⠀⠀⠀⠀⠀⠀⠀ Because of the time sensitive nature, given what’s going on, I rushed to write this for the @nytimes without stopping to think of the toll it would take on my own emotional well-being. In the past three days I have been anxious, depressed, nauseous, sobbing and holding on to #littlehands so much and so tightly she is highly annoyed! (She has no idea why and thinks it’s mommy’s hormones.) ⠀⠀⠀⠀⠀⠀⠀⠀⠀ But the outpouring has been such a salve, a balm to my frayed nerves and feeling flayed. When you sublimate something for over thirty years, you get pretty good at it. Even very close members of my family have been utterly shocked and saddened. My mom has had to deal with her guilt. But she and I have made peace with our history. She, like most parents, has done the best she could. ⠀⠀⠀⠀⠀⠀⠀⠀⠀ Doing this very difficult thing has been for me a necessary step. I am no longer scared of ghosts. I hope that my story and those of literally millions of others can contribute to how we address this harrowing topic in our culture. So many of you have messaged me with your own experiences and I am truly sorry that we share this trauma. But the only antidote is taking our power back by being as open as possible, and sending young girls and women the message that there is no shame in speaking out. ⠀⠀⠀⠀⠀⠀⠀⠀⠀ What happens to a woman’s body should be HER choice at all times, and in all cases. We must exert dominion over our own bodies. That what’s at stake here. And that’s why I shared what I did. Thank you for your support. ⠀⠀⠀⠀⠀⠀⠀⠀⠀ Love, ⠀⠀⠀⠀⠀⠀⠀⠀⠀ Padma ⠀⠀⠀⠀⠀⠀⠀⠀⠀ #WhyIDidntReport #BelieveSurvivors #TimesUp #MeToo

A post shared by Padma Lakshmi (@padmalakshmi) on

ಪದ್ಮಾಲಕ್ಷ್ಮಿ ಹೇಳಿಕೆ ಹಿನ್ನೆಲೆಯಲ್ಲಿ #WhyIDidntReport, #MeToo ಹ್ಯಾಷ್‌ಟ್ಯಾಗ್‌ನೊಂದಿಗಿನ ಕೆಲವು ಪ್ರತಿಕ್ರಿಯೆ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More