ಟೀಸರ್‌ | ಸರ್ಜಿಕಲ್ ಸ್ಟ್ರೈಕ್‌ ಆಧರಿಸಿದ ವಿಕ್ಕಿ ಮಿಲಿಟರಿ ಡ್ರಾಮಾ ‘ಉರಿ’

ಭಾರತೀಯ ಸೇನೆ 2016ರ ಸೆಪ್ಟೆಂಬರ್‌ನಲ್ಲಿ ಕೈಗೊಂಡಿದ್ದ ಸರ್ಜಿಕಲ್ ಸ್ಟೈಕ್ ಘಟನೆಗಳನ್ನು ಆಧರಿಸಿ ತಯಾರಾಗಿರುವ ಸಿನಿಮಾ ‘ಉರಿ.’ ಆದಿತ್ಯ ಧಾರ್ ನಿರ್ದೇಶನದ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ. 2019ರ ಜನವರಿ 19ರಂದು ಸಿನಿಮಾ ತೆರೆಕಾಣಲಿದೆ

ಆದಿತ್ಯ ಧಾರ್‌ ನಿರ್ದೇಶನದ ವಿಕ್ಕಿ ಕೌಶಲ್ ನಟನೆಯ ‘ಉರಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಿಂಚುತ್ತಿರುವ ಪ್ರತಿಭಾವಂತ ನಟ ವಿಕ್ಕಿ ಕೌಶಲ್ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರ ಬಾಂಬ್ ದಾಳಿಯಿಂದ ಹುತಾತ್ಮರಾಗುವ ಭಾರತೀಯ ಯೋಧರು, ಯೋಧನೊಬ್ಬನ ಅಂತ್ಯ ಸಂಸ್ಕಾರದ ವೇಳೆ ಭಾವುಕಳಾಗುವ ಆತನ ಮಡದಿ, ತಂದೆಯ ಪಾರ್ಥೀವ ಶರೀರಕ್ಕೆ ಪುಷ್ಪಾರ್ಪಣೆ ಮಾಡುತ್ತ ‘ಸೇಡು ತೀರಿಸಿಕೊಳ್ಳಲೇಬೇಕೆಂದು’ ಘೋಷಣೆ ಕೂಗುವ ಪುಟಾಣಿ ಮಗಳು, ಆಕೆಯೊಂದಿಗೆ ದನಿಗೂಡಿಸುವ ಸೇನೆ, ನಂತರ ಪಾಕ್ ಆಕ್ರಮಿತ ಕಾಶ್ಮಿರದೊಳಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸುವ ಸೇನೆ ಹೀಗೆ ಸಾಗುವ ಒಂದೂವರೆ ನಿಮಿಷಗಳ ಟೀಸರ್‌ 2016ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಸೇನೆ ಕೈಗೊಂಡಿದ್ದ ಸರ್ಜಿಕಲ್ ಸ್ಟೈಕ್ ನೆನಪಿಸುತ್ತದೆ.

ಇದನ್ನೂ ಓದಿ : ಟ್ರೈಲರ್‌ | ಅಮಿತಾಭ್‌, ಅಮೀರ್‌ ಆಕ್ಷನ್-ಡ್ರಾಮಾ ‘ಥಗ್ಸ್‌ ಆಫ್ ಹಿಂದೂಸ್ತಾನ್‌’

ಸರ್ಜಿಕಲ್ ಸ್ಟ್ರೈಕ್ ನಡೆದು ಈ ಸೆಪ್ಟೆಂಬರ್‌ 27ಕ್ಕೆ ಎರಡು ವರ್ಷ. ‘ಉರಿ’ ಸರ್ಜಿಕಲ್ ಸ್ಟ್ರೈಕ್‌ನ ಪ್ರಮುಖ ಘಟಾನಾವಳಿಗಳ ಸುತ್ತ ಹೆಣೆದಿರುವ ಕತೆಯಿದು. ಸರ್ಜಿಕಲ್ ಸ್ಟ್ರೈಕ್‌ನ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಟೀಸರ್ ಬಿಡುಗಡೆಯಾಗಿದೆ. ಅನಿರೀಕ್ಷತವಾಗಿ ಭಯೋತ್ಪಾದಕರ ದಾಳಿಗೆ ತುತ್ತಾಗುವ ಯೋಧರು, ಅವರ ಕುಟುಂಬಗಳ ಆಕ್ರಂದನ, ಸೇಡು ತೀರಿಸಿಕೊಳ್ಳಲು ಜೀವದ ಹಂಗು ತೊರೆದು ಗಡಿದಾಟಿ ಭಯೋತ್ಪಾದಕರ ತಾಣಗಳನ್ನು ಧ್ವಂಸಗೊಳಿಸುವ ಸೈನಿಕರು ಕಳೆದೆರೆಡು ವರ್ಷಗಳ ಹಿಂದೆ ನಡೆದಿದ್ದ ಆಘಾತಕಾರಿ ಘಟನೆಯನ್ನು ಭಾವನಾತ್ಮಕವಾಗಿ ನಿರೂಪಿಸಿದಂತಿದೆ ನಿರ್ದೇಶಕ ಆಧಿತ್ಯ ಧಾರ್‌. ಪರೇಶ್ ರಾವಲ್, ಯಾಮಿ ಗೌತಮ್, ಕೀರ್ತಿ ಕುಲ್ಹರಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ರೋನಿ ಸ್ಕ್ರ್ಯೂವಾಲಾ ನಿರ್ಮಾಣದ ಸಿನಿಮಾ 2019ರ ಜನವರಿ 19ರಂದು ತೆರೆಕಾಣಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More