ಟ್ರೈಲರ್‌ | ಹಿಂಸೆ, ಶಾಂತಿಯ ಮಾನಸಿಕ ತಾಕಲಾಟಗಳ ‘ಅರವಿಂದ ಸಮೇತಾ’

ಜ್ಯೂನಿಯರ್ ಎನ್‌ಟಿಆರ್ ಅಭಿನಯದ ‘ಅರವಿಂದ ಸಮೇತಾ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಲವ್‌, ಆಕ್ಷನ್‌ ಸನ್ನಿವೇಶಗಳಿಂದ ಗಮನ ಸೆಳೆಯುತ್ತದೆ. ಕನ್ನಡ ಮೂಲದ ಪೂಜಾ ಹೆಗ್ಡೆ ಚಿತ್ರದ ಹಿರೋಯಿನ್‌.

ತ್ರಿವಿಕ್ರಮ್‌ ಶ್ರೀನಿವಾಸ್ ನಿರ್ದೇಶನದಲ್ಲಿ ಎನ್‌ಟಿಆರ್ ಜ್ಯೂನಿಯರ್ ನಟಿಸಿರುವ ‘ಅರವಿಂದ ಸಮೇತಾ’ ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್‌ ಗಮನಿಸಿದಾಗ, ನಾಯಕನಟ ವೀರರಾಘವ ರೆಡ್ಡಿ (ಎನ್‌ಟಿಆರ್‌) ಹಿಂಸೆ ಮತ್ತು ಸಹನೆ ಮಧ್ಯೆಯ ಮಾನಸಿಕ ತಾಕಲಾಟದಲ್ಲಿರುವಂತೆ ತೋರುತ್ತದೆ. ಆರಂಭದಲ್ಲಿ ನಾಯಕನಟಿ ಅರವಿಂದಳನ್ನು (ಪೂಜಾ ಹೆಗ್ಡೆ) ಓಲೈಸುವ ಮುಗ್ಧ ಪ್ರೇಮಿಯಂತೆ ಗೋಚರಿಸುವ ಹೀರೋಗೆ ಮುಂದೆ ರಕ್ತಪಾತದ ದೃಶ್ಯಗಳಿವೆ.

ತನ್ನನ್ನು ತಾನು ಕಂಡುಕೊಳ್ಳುವ ಹಾದಿಯಲ್ಲಿರುವ ನಾಯಕ ವೀರ ಕೊನೆಗೆ ರಕ್ತಪಾತದತ್ತಲೇ ಹೊರಳುತ್ತಾನೆ. ಇಲ್ಲಿ ನಾಯಕನ ತಲೆಮಾರುಗಳ ಕತೆಯೂ ಇದೆ. ಕನ್ನಡ ಮೂಲದ ನಟಿ ಪೂಜಾ ಹೆಗ್ಡೆ ಟ್ರೈಲರ್‌ನಲ್ಲಿ ಆಕರ್ಷಕವಾಗಿ ಕಾಣಿಸುತ್ತಾರೆ. ಜ್ಯೂನಿಯರ್ ಎನ್‌ಟಿಆರ್ ಸ್ಕ್ರೀನ್‌ ಪ್ರಸೆನ್ಸ್‌, ತಮನ್ ಸಂಗೀತ, ತ್ರಿವಿಕ್ರಮ್ ಶ್ರೀನಿವಾಸ್‌ ಸಂಭಾಷಣೆ ಗಮನ ಸೆಳೆಯುತ್ತದೆ. ನಟ ಜ್ಯೂನಿಯರ್ ಎನ್‌ಟಿಆರ್ ಅವರೊಂದಿಗೆ ತ್ರಿವಿಕ್ರಮ್ ಶ್ರೀನಿವಾಸ್ ಅವರಿಗೆ ಇದು ಮೊದಲ ಸಿನಿಮಾ. ‌

ಇದನ್ನೂ ಓದಿ : ಟ್ರೈಲರ್‌ | ‘ನೋಟಾ’ದಲ್ಲಿ ರಾಜಕಾರಣಿಯಾದ ವಿಜಯ್‌ ದೇವರಕೊಂಡ

ಟ್ರೈಲರ್‌ನಲ್ಲಿ ನಟ ಜ್ಯೂನಿಯರ್ ಎನ್‌ಟಿಆರ್‌ ತಮ್ಮ ಸ್ಕ್ರೀನ್‌ಪ್ರಸೆನ್ಸ್‌ನಿಂದ ಗಮನ ಸೆಳೆಯುತ್ತಾರೆ. ಸೆಲೆಬ್ರಿಟಿ ಫಿಟ್‌ನೆಸ್‌ ಟ್ರೈನರ್‌ ಲಾಯ್ಡ್‌ ಸ್ಟೀವನ್ಸ್‌ ಅವರಿಂದ ತರಬೇತಿ ಪಡೆದಿರುವ ಎನ್‌ಟಿಅರ್‌ ಆಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಚಿತ್ರದ ಫಸ್ಟ್‌ಲುಕ್‌ನಲ್ಲೇ ಎನ್‌ಟಿಆರ್ ಫಿಟ್‌ನೆಸ್‌ ಸಾಬೀತಾಗಿತ್ತು. ‌ಇಶಾ ರೆಬ್ಬಾ, ಸುನೀಲ್‌, ಜಗಪತಿ ಬಾಬು, ನಾಗಬಾಬು, ರಾವ್ ರಮೇಶ್‌, ಸುಪ್ರಿಯಾ ಪಾಠಕ್‌, ಸಿತಾರಾ, ಬ್ರಹ್ಮಾನಂದಂ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಕ್ಟೋಬರ್ 12ರಂದು ಸಿನಿಮಾ ತೆರೆಕಾಣಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More