ಟ್ರೈಲರ್‌ | ‘ರೀಮಾಸ್ಟರ್ಡ್‌’ ಸರಣಿಯಲ್ಲಿ ಬಾಬ್‌ ಮಾರ್ಲೇ ದುರಂತ ಬದುಕಿನ ಚಿತ್ರಣ

ನೆಟ್‌ಫ್ಲಿಕ್ಸ್‌ನಲ್ಲಿ ಜನಪ್ರಿಯ ಸಂಗೀತಗಾರರ ಕುರಿತ ‘ರೀಮಾಸ್ಟರ್ಡ್‌’ ವೆಬ್ ಸರಣಿ ಮೂಡಿಬರಲಿದೆ. ಜಮೈಕಾ ಮೂಲದ ರೆಗ್ಗೀ ಸಂಗೀತದ ತಾರೆ ಬಾಬ್ ಮಾರ್ಲೇ ದುರಂತ ಬದುಕು ಸರಣಿಯ ಮೊದಲ ಸಂಚಿಕೆಯಾಗಲಿದೆ. ಹಲವು ನಿರ್ದೇಶಕರು ಈ ಸರಣಿಗೆ ಕೆಲಸ ಮಾಡಲಿದ್ದು, ಅ.12ರಿಂದ ಸ್ಟ್ರೀಮ್‌ ಆಗಲಿದೆ.

ಜಗತ್ತಿನ ಎಂಟು ಜನಪ್ರಿಯ ಸಂಗೀತಗಾರರ ಕುರಿತ ‘ರೀಮಾಸ್ಟರ್ಡ್‌’ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಅಕ್ಟೋಬರ್‌ 12ರಿಂದ ಸ್ಟ್ರೀಮ್ ಆಗಲಿದೆ. ಜಮೈಕಾ ಮೂಲದ ಜನಪ್ರಿಯ ರೆಗ್ಗೀ ಗಾಯಕ ಬಾಬ್ ಮಾರ್ಲೇ ಕುರಿತ ಕಥನ ಮೊದಲ ಸಂಚಿಕೆಯಾಗಿ ಮೂಡಿಬರಲಿದೆ. ಬಾಬ್ ಮಾರ್ಲೇ 1981ರ ಮೇ 11ರಂದು ಸ್ಕಿನ್ ಕ್ಯಾನ್ಸರ್‌ನಿಂದ ಅಗಲಿದರು. ಆಗ ಅವರಿಗೆ ಮೂವತ್ತಾರು ವರ್ಷ. ಆದರೆ ಬಾಬ್‌ ರಾಜಕೀಯ ಪ್ರಭಾವ ಸಹಿಸದೆ ಸೆಂಟ್ರಲ್‌ ಇನ್ವೆಸ್ಟಿಗೇಷನ್‌ ಏಜನ್ಸೀ (CIA) ಅವರನ್ನು ಕೊಂದಿದೆ ಎನ್ನುವ ಊಹಾಪೋಹಗಳಿಗೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಇದನ್ನೂ ಓದಿ : ಟ್ರೈಲರ್‌ | ಹಿಂಸೆ, ಶಾಂತಿಯ ಮಾನಸಿಕ ತಾಕಲಾಟಗಳ ‘ಅರವಿಂದ ಸಮೇತಾ’

ನಿಧನರಾಗುವುದಕ್ಕೆ ಐದು ವರ್ಷಗಳ ಮುನ್ನ ಜಮೈಕಾದಲ್ಲಿ ಬಾಬ್‌ ಹತ್ಯೆ ಯತ್ನ ನಡೆದಿತ್ತು. ಇದು ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮ. ಈ ಘಟನೆಯೇ ವೆಬ್‌ ಸರಣಿಯ ಸಂಚಿಕೆಯಲ್ಲಿ ಹೈಲೈಟ್‌ ಆಗಲಿದೆ. ಝಿಂಬಾಲಿಸ್ಟ್‌ ಸಹೋದರರು ನಿರ್ಮಿಸಲಿರುವ ಸರಣಿಯಲ್ಲಿ ಬಾರ್ಬರಾ ಕಾಪ್ಲ್‌, ಬ್ರೈನ್‌ ಓಕ್ಸ್‌, ಸ್ಟುವರ್ಟ್‌ ಸೆಂಡರ್‌, ಬಿಜೆ ಪರ್ಲ್‌ಮಟ್‌, ಸ್ಯಾಮ್ ಕಲ್‌ಮ್ಯಾನ್‌ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಜಾನಿ ಕ್ಯಾಶ್‌, ಜಾಮ್ ಮಾಸ್ಟರ್‌ ಜೇ, ವಿಕ್ಟರ್ ಜಾರಾ, ಸ್ಯಾಮ್ ಕೂಕ್‌, ದಿ ಮಿಯಾಮಿ ಶೋಬ್ಯಾಂಡ್‌ ಸೇರಿದಂತೆ ಪ್ರತಿಷ್ಠಿತ ಮ್ಯೂಸಿಕ್ ಬ್ಯಾಂಡ್‌ಗಳು ಸರಣಿಯ ಸಂಗೀತ ವಿಭಾಗದಲ್ಲಿ ಕೆಲಸ ಮಾಡಲಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More