ಬಾಲಕೃಷ್ಣ ಅಭಿನಯದ ಎನ್‌ಟಿಆರ್ ಬಯೋಪಿಕ್‌ ಶೀರ್ಷಿಕೆ ‘ಕಥಾನಾಯಕುಡು’

ತೆಲುಗು ಚಿತ್ರರಂಗದ ದಂತಕತೆ ಎನ್‌ ಟಿ ರಾಮರಾವ್‌ ಬಯೋಪಿಕ್‌ಗೆ ಹೊಸ ಶೀರ್ಷಿಕೆ ಸಿಕ್ಕಿದೆ. ‘ಕಥಾನಾಯಕುಡು’ ಎಂದು ನಾಮಕರಣಗೊಂಡಿರುವ ಸಿನಿಮಾದ ಬಿಡುಗಡೆ ದಿನಾಂಕ 2019, ಜೂನ್‌ 9 ಎಂದು ನಿಗಧಿಯಾಗಿದೆ. ಶೀರ್ಷಿಕೆ ಪಾತ್ರಧಾರಿ ಬಾಲಕೃಷ್ಣ ನೂತನ ಪೋಸ್ಟರ್ ಟ್ವೀಟ್ ಮಾಡಿದ್ದಾರೆ.

ತೆಲುಗು ಚಿತ್ರರಂಗದ ಮೇರು ನಟ, ರಾಜಕಾರಣಿ ಎನ್ ಟಿ ರಾಮರಾವ್ ಬಯೋಪಿಕ್‌ ‘ಎನ್‌ಟಿಆರ್‌’ ಶೀರ್ಷಿಕೆಯಡಿ ಚಿತ್ರೀಕರಣಗೊಳ್ಳುತ್ತಿತ್ತು. ಇದೀಗ ಚಿತ್ರದ ಶೀರ್ಷಿಕೆ ‘ಕಥಾನಾಯಕುಡು’ ಎಂದು ಬದಲಾಗಿದೆ. ಚಿತ್ರದ ನಿರ್ಮಾಪಕರೂ ಆದ ಶೀರ್ಷಿಕೆ ಪಾತ್ರಧಾರಿ ಬಾಲಕೃಷ್ಣ ನೂತನ ಶೀರ್ಷಿಕೆ ಮತ್ತು ಹೊಸ ಪೋಸ್ಟರ್ ಟ್ವೀಟ್ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದ್ದು, 2019, ಜೂನ್‌ 9ರಂದು ಸಿನಿಮಾ ತೆರೆಕಾಣಲಿದೆ.

ಹೊಸ ಪೋಸ್ಟರ್‌ನಲ್ಲಿ ಎನ್‌ಟಿಆರ್‌ ಪಾತ್ರ ನಿರ್ವಹಿಸುತ್ತಿರುವ ಅವರ ಪುತ್ರ ನಂದಮೂರಿ ಬಾಲಕೃಷ್ಣ ಇದ್ದಾರೆ. ಚಿತ್ರದ ನಿರ್ಮಾಪಕರು ಎನ್‌ಟಿಆರ್ ಹಾಗೂ ಅವರ ಸಮಕಾಲೀನ ದೊಡ್ಡ ನಾಯಕನಟರ ಪಾತ್ರಗಳಲ್ಲಿ ನಟಿಸುತ್ತಿರುವ ನಟರ ಫೋಟೋ ಬಿಡುಗಡೆಗೊಳಿಸುತ್ತಾ ಬಂದಿದ್ದಾರೆ. ಬಾಲಿವುಡ್‌ ನಟಿ ವಿದ್ಯಾಬಾಲನ್ ಚಿತ್ರದಲ್ಲಿ ಎನ್‌ಟಿಆರ್ ಪತ್ನಿ ಬಸವತಾರಕಮ್‌ ಪಾತ್ರದಲ್ಲಿದ್ದು, ಬೆಂಗಾಲಿ ನಟ ಜಿಶು ಸೇನ್‌ಗುಪ್ತಾ ಅವರು ಎಲ್ ವಿ ಪ್ರಸಾದ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರಿಗೂ ಇದು ಮೊದಲ ತೆಲುಗು ಸಿನಿಮಾ.

ಇದನ್ನೂ ಓದಿ : ಟ್ರೆಂಡಿಂಗ್ ಆಯ್ತು ಆಂಧ್ರದ ದಂತಕಥೆ ಎನ್‌ಟಿಆರ್‌ ಬಯೋಪಿಕ್‌ ಫಸ್ಟ್ ಲುಕ್

ಎನ್‌ಟಿಆರ್ ಅಳಿಯ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ರಾಣಾ ದಗ್ಗುಬಾಟಿ ಇದ್ದಾರೆ. ಅವರ ಪಾತ್ರ ಚಿತ್ರೀಕರಣಗೊಳ್ಳುತ್ತಿದೆ. ತೆಲುಗು ಚಿತ್ರರಂಗದ ಮತ್ತೊಬ್ಬ ಜನಪ್ರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪಾತ್ರವನ್ನು ನಟ ಸುಮಂತ್ ನಿಭಾಯಿಸುತ್ತಿದ್ದಾರೆ. ಆರಂಭದಲ್ಲಿ ಚಿತ್ರವನ್ನು ತೇಜಾ ನಿರ್ದೇಶಿಸುವುದು ಎಂದಾಗಿತ್ತು. ಕ್ರಿಯಾಶೀಲ ವಿಭಾಗದಲ್ಲಿನ ಮನಸ್ತಾಪದಿಂದ ಅವರು ಹೊರನಡೆದರು. ಅವರ ಜಾಗಕ್ಕೆ ಬಂದ ರಾಧಾಕೃಷ್ಣ ಜಗರ್ಲಮುಡಿ ಸಾರಥ್ಯ ವಹಿಸಿಕೊಂಡು ಚಿತ್ರೀಕರಣ ನಡೆಸುತ್ತಿದ್ದಾರೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More