ಆಸಿಡ್‌ ದಾಳಿಗೆ ತುತ್ತಾದ ಯುವತಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ

ಮೇಘನಾ ಗುಲ್ಜಾರ್‌ ನಿರ್ದೇಶನದ ನೂತನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಆಸಿಡ್‌ ದಾಳಿಗೆ ತುತ್ತಾಗಿ ಶಸ್ತ್ರಚಿಕಿತ್ಸೆ ನಂತರ ಬದುಕುಳಿದ ಲಕ್ಷ್ಮೀ ಅಗರ್‌ವಾಲ್‌, ನಂತರ ತಮ್ಮಂತೆ ಆಸಿಡ್‌ ದಾಳಿಗೆ ತುತ್ತಾದವರ ನೆರವಿಗೆ ನಿಲ್ಲುತ್ತಾರೆ. ಲಕ್ಷ್ಮೀ ಬದುಕನ್ನು ಮೇಘನಾ ತೆರೆಗೆ ಅಳವಡಿಸುತ್ತಿದ್ದಾರೆ

‘ರಾಝಿ’ ಹಿಂದಿ ಚಿತ್ರದ ಯಶಸ್ಸಿನ ನಂತರ ನಿರ್ದೇಶಕಿ ಮೇಘನಾ ಗುಲ್ಜಾರ್ ನೈಜ ಘಟನೆಯಾಧಾರಿತ ಚಿತ್ರ ಕೈಗೆತ್ತಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲಿ ಆಸಿಡ್‌ ದಾಳಿಗೆ ತುತ್ತಾಗಿದ್ದ ಲಕ್ಷ್ಮೀ ಅಗರ್‌ವಾಲ್‌ ಬದುಕಿನ ಕತೆಯನ್ನು ಅವರು ತೆರೆಗೆ ಅಳವಡಿಸುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ತೆರೆಯ ಮೇಲೆ ಲಕ್ಷ್ಮೀ ಅಗರ್‌ವಾಲ್‌ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ಹಣ ಹೂಡುವುದರೊಂದಿಗೆ ದೀಪಿಕಾ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಪದ್ಮಾವತ್’ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಾಕಷ್ಟು ವಿವಾದಗಳ ಹೊರತಾಗಿಯೂ ಸಿನಿಮಾ ಗೆದ್ದಿತ್ತು. ‘ಪದ್ಮಾವತ್’ ನಂತರ ದೀಪಿಕಾ ಈಗ ನೈಜ ಘಟನೆಯನ್ನಾಧರಿಸಿದ ಚಿತ್ರದತ್ತ ಮುಖ ಮಾಡಿದ್ದಾರೆ. 15ನೇ ವಯಸ್ಸಿನಲ್ಲಿ ಲಕ್ಷ್ಮೀ ಆಸಿಡ್ ದಾಳಿಗೆ ತುತ್ತಾಗುತ್ತಾರೆ. ಹಲವು ಶಸ್ತ್ರಚಿಕಿತ್ಸೆಗಳ ನಂತರ ಅವರ ದೇಹಸ್ಥಿತಿ ಸ್ಥಿಮಿತಕ್ಕೆ ಬರುತ್ತದೆ. ಮುಂದೆ ಅವರು ತಮ್ಮಂತೆ ದಾಳಿಗೊಳಗಾದ, ಶೋಷಿತ ಹೆಣ್ಣುಮಕ್ಕಳ ಧ್ವನಿಯಾಗಿ ಕೆಲಸ ಮಾಡತೊಡಗುತ್ತಾರೆ.

ಇದನ್ನೂ ಓದಿ : ತನುಶ್ರೀಗೆ ಲೀಗಲ್ ನೋಟಿಸ್‌; ನಟಿಯ ಬೆಂಬಲಕ್ಕೆ ನಿಂತ ಫ್ರೀಡಾ ಪಿಂಟೋ

“ಇದು ಅಮಾನವೀಯ ಕೃತ್ಯಕ್ಕೆ ಬಲಿಯಾದವಳ ಕತೆ ಮಾತ್ರವಲ್ಲ. ದಾಳಿಗೊಳಗಾದ ಆಕೆ, ತನ್ನೆಲ್ಲ ಸಂಕಟಗಳನ್ನು ಮರೆಮಾಚಿ, ತನ್ನಂತೆ ದಾಳಿಗೊಳಗಾದ ಹಲವರ ಬದುಕಿಗೆ ದಾರಿ ದೀಪವಾದ ಕರುಣಾಜನಕ ಕತೆ. ಹಲವರಿಗೆ ಮಾದರಿಯಾಗಬಲ್ಲ ಇಂತಹ ಪಾತ್ರಕ್ಕೆ ಜೀವ ತುಂಬುವುದು ನನಗೆ ಹೆಮ್ಮೆಯ ವಿಷಯ. ಈ ಕತೆಯೇ ನನ್ನನ್ನು ಚಿತ್ರಕ್ಕೆ ಹಣ ಹೂಡುವಂತೆ ಪ್ರೇರೇಪಿಸಿದೆ. ಈ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದೇನೆ ಎಂಬುದು ಖುಷಿಯ ಸಂಗತಿ,” ಎನ್ನುತ್ತಾರೆ ದಿಪಿಕಾ.

ತಮ್ಮ ಚಿತ್ರದ ಕುರಿತಾಗಿ ಮಾತನಾಡಿರುವ ನಿರ್ದೇಶಕಿ ಮೇಘನಾ ಗುಲ್ಜಾರ್, “ಈ ಕತೆ ಹಲವರಿಗೆ ಮಾದರಿಯಾಗಲಿದೆ. ಲಕ್ಷ್ಮಿಯಂತೆ ಆಸಿಡ್ ದಾಳಿಗೊಳಗಾದ ಅಮಾಯಕರಿಗೆ ಬದುಕಲು ಹೊಸ ಚೈತನ್ಯವಾಗಿ ನಮ್ಮ ಚಿತ್ರ ಮೂಡಿಬರಲಿದೆ,” ಎನ್ನುತ್ತಾರೆ. ಈ ಹಿಂದೆ ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ ಅಲಿಯಾ ಭಟ್ ನಟಿಸಿದ್ದ ‘ರಾಝಿ’ ಚಿತ್ರ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಗಿತ್ತು.

‘ಪದ್ಮಾವತ್‌’ ಚಿತ್ರದ ಹಾಡು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More