ಬದುಕಿನ ಮೂರು ಹಂತಗಳ ಭಿನ್ನ ಲುಕ್‌; ಇದು ಧ್ರುವ ಸರ್ಜಾ ‘ಪೊಗರು’ ಸಿನಿಮಾ

ಸಾಲಾಗಿ ಮೂರು ಸಿನಿಮಾಗಳಲ್ಲಿ ಗೆಲುವು ಕಂಡ ಧ್ರುವ ಸರ್ಜಾ ಇದೀಗ ಭಿನ್ನ ಹಾದಿ ತುಳಿದಿದ್ದಾರೆ. ನೂತನ ‘ಪೊಗರು’ ಚಿತ್ರದಲ್ಲಿ ಅವರು ಮೂರು ಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು, ನಂದಿಕಿಶೋರ್ ನಿರ್ದೇಶನದ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಕನ್ನಡ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾಗೆ ಚಿತ್ರತಂಡದಿಂದ ಸಿಕ್ಕಿರುವ ಉಡುಗೊರೆ ಇದು. ಪೋಸ್ಟರ್‌ನಲ್ಲಿ ಉದ್ದ ಕೂದಲಿನ ಜೊತೆ ಗಡ್ಡಧಾರಿಯಾಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅವರ ಹೊಸ ಲುಕ್, ಅಭಿಮಾನಿಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದೆ.

‘ಅದ್ಧೂರಿ’, ‘ಬಹದ್ದೂರ್’, ‘ಭರ್ಜರಿ’ ಚಿತ್ರಗಳ ಹ್ಯಾಟ್ರಿಕ್‌ ಯಶಸ್ಸಿನ ನಂತರ ಧ್ರುವ ಸರ್ಜಾ ನಟಿಸುತ್ತಿರುವ ನಾಲ್ಕನೇ ಚಿತ್ರ ‘ಪೊಗರು.’ ಕಳೆದ ಮೂರು ಚಿತ್ರಗಳಲ್ಲಿ ಬಹುಪಾಲು ಒಂದೇ ಲುಕ್‌ನಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದರು. ಅದೇ ಕಾರಣಕ್ಕೇ ಎಂಬಂತೆ ಈ ಚಿತ್ರದಲ್ಲಿ ಧ್ರುವ ತಮ್ಮ ಲುಕ್ ಬದಲಿಸಿದ್ದು, ‘ಪೊಗರು’ ಚಿತ್ರಕ್ಕಾಗಿ ಬಹಳ ಕಸರತ್ತು ಮಾಡಿದ್ದಾರಂತೆ. ವ್ಯಕ್ತಿಯೊಬ್ಬನ ಬದುಕಿನ ಮೂರು ಪ್ರಮುಖ ಹಂತಗಳನ್ನು ಕೇಂದ್ರವನ್ನಾಗಿಸಿಕೊಂಡು ತಯಾರಾಗುತ್ತಿರುವ ಈ ಕತೆಯ ಮೊದಲ ಹಂತದ ಶೂಟಿಂಗ್‌ನಲ್ಲಿ ಶಾಲಾ ದಿನಗಳ ಹುಡುಗನಂತೆ ಕಾಣಲು ಧ್ರುವ ತೂಕ ಇಳಿಸಿಕೊಂಡಿದ್ದರು. ನಂತರ ಹರೆಯದ ಯುವಕನ ಗೆಟಪ್‌ಗಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ.

‘ಭರ್ಜರಿ’ ಚಿತ್ರದ ಹಾಡು

‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’ ಯಶಸ್ವಿ ಸಿನಿಮಾಗಳ ನಿರ್ದೇಶಕ ನಂದಕಿಶೋರ್, ‘ಪೊಗರು’ ಚಿತ್ರದ ಸಾರಥ್ಯ ವಹಿಸಿದ್ದಾರೆ. ಭಿನ್ನ ಕತೆಯೊಂದನ್ನು ತೆರೆಗೆ ಅಳವಡಿಸುವ ಪ್ರಯತ್ನದಲ್ಲಿದ್ದಾರವರು. ನಾಳೆ (ಅ.6) ಧ್ರುವ ಸರ್ಜಾ ಜನ್ಮದಿನವಿದ್ದು, ಚಿತ್ರತಂಡ ಹುಟ್ಟಹಬ್ಬದ ಅಂಗವಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ನಿರ್ದೇಶಕ ನಂದ ಕಿಶೋರ್ ವಿಶೇಷವಾಗಿ 10 ಲಕ್ಷ ರು. ವೆಚ್ಚದಲ್ಲಿ ಟೀಸರ್ ಸಿದ್ಧಗೊಳಿಸಿದ್ದು, ಚಿತ್ರದ ಥೀಮ್ ಸಾಂಗ್ ಅನ್ನು ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ. 150 ಸಹಕಲಾವಿದರು, ಐವತ್ತು ಫೈಟರ್ಸ್‌ಗಳು ಟೀಸರ್‌ಗಾಗಿ ಕೆಲಸ ಮಾಡಿದ್ದಾರೆ. ನಟ, ನಿರ್ದೇಶಕ ಅರ್ಜುನ್ ಸರ್ಜಾ ತಮ್ಮ ಅಳಿಯನಿಗಾಗಿ ‘ಪೊಗರು’ ಚಿತ್ರಕತೆ ರಚಿಸಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣವಿದ್ದು, ಗಂಗಾಧರ್ ಹಣ ಹೂಡಿದ್ದಾರೆ.

‘ಬಹದ್ದೂರ್‌’ ಸಿನಿಮಾ ಹಾಡು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More