ಟ್ರೈಲರ್‌ | ಅಮೆರಿಕದ ಪ್ರಭಾವಿ ಮಾಜಿ ಉಪಾಧ್ಯಕ್ಷರ ‌ಕುರಿತ ಸಿನಿಮಾ ‘ವೈಸ್‌’

ಆ್ಯಡಮ್ ಮ್ಯಾಕ್‌ಕೇ ನಿರ್ದೇಶನದ ‘ವೈಸ್‌’ ಹಾಲಿವುಡ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಬುಷ್‌ ಪಾತ್ರದಲ್ಲಿ ಸ್ಯಾಮ್‌ ರಾಕ್‌ವೆಲ್‌, ಮಾಜಿ ಉಪಾಧ್ಯಕ್ಷ ಡಿಕ್‌ ಚೆನಿಯಾಗಿ ಕ್ರಿಸ್ಚಿಯನ್ ಬೇಲ್‌ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್‌ 25ರಂದು ಸಿನಿಮಾ ತೆರೆಕಾಣಲಿದೆ

ಕ್ರಿಸ್ಚಿಯನ್‌ ಬೇಲ್‌, ಅಮಿ ಆ್ಯಡಮ್ಸ್‌, ಸ್ಯಾಮ್‌ ರಾಕ್‌ವೆಲ್‌, ಸ್ವೀವ್ ಕೆರೆಲ್‌ ಅಭಿನಯದ ‘ವೈಸ್‌’ ಹಾಲಿವುಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸ್ಯಾಮ್‌ ರಾಕ್‌ವೆಲ್‌ ಪಾತ್ರದೊಂದಿಗೆ ಟ್ರೈಲರ್ ಶುರುವಾಗುತ್ತದೆ. “ನೀವು ನನ್ನ ಉಪಾಧ್ಯಕ್ಷರಾಬೇಕೆಂದು ನಾನು ಇಚ್ಛಿಸುತ್ತೇನೆ. ನನಗೆ ನೀವು ಬೇಕು,” ಎನ್ನುತ್ತಾರೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ‌ ಬುಷ್‌ ಪಾತ್ರ ನಿರ್ವಹಿಸುತ್ತಿರುವ ರಾಕ್‌ವೆಲ್‌. ಮುಂದಿರುವ ವ್ಯಕ್ತಿಯತ್ತ ಕ್ಯಾಮೆರಾ ಹೊರಳುತ್ತದೆ. ಅಲ್ಲಿ ಅರವತ್ತರ ಆಸುಪಾಸಿನಲ್ಲಿರುವ ದಪ್ಪನೆಯ, ಬೋಳು ತಲೆಯ ವ್ಯಕ್ತಿ ಕಾಣಿಸುತ್ತಾರೆ.

“ನಾನು ದೊಡ್ಡ ಕಂಪನಿಯ ಸಿಇಒ. ಡಿಫೆನ್ಸ್‌ನ ಸೆಕ್ರೆಟರಿ. ಉಪಾಧ್ಯಕ್ಷನ ಸ್ಥಾನ ಅಲಂಕಾರಿಕವಷ್ಟೆ,” ಎನ್ನುತ್ತಾರೆ ಆ ದಪ್ಪಗಿನ ವ್ಯಕ್ತಿ (ಕ್ರಿಸ್ಚಿಯನ್ ಬೇಲ್‌). ಅಧಿಕಾರ ಬೇಕೆನ್ನುವುದು ಆ ವ್ಯಕ್ತಿಯ ಮಾತಿನಲ್ಲಿ ಸ್ಪಷ್ಟವಾಗುತ್ತದೆ. ಅಮಿ ಆ್ಯಡಮ್ಸ್‌ ಪಾತ್ರದ ಪರಿಚಯವೂ ಸಿಗುತ್ತದೆ. ನೈಜ ಘಟನೆಗಳನ್ನು ಆಧರಿಸಿದ ಬಯೋಗ್ರಾಫಿಕಲ್ ಸಿನಿಮಾ ‘ವೈಸ್‌’ನಲ್ಲಿ ಕ್ರಿಸ್ಚಿಯನ್ ಬೇಲ್‌ ಅಮೆರಿಕದ ಮಾಜಿ ಉಪಾಧ್ಯಕ್ಷ ಡಿಕ್‌ ಚೆನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಅಮಿ ಆ್ಯಡಮ್ಸ್‌ ಉಪಾಧ್ಯಕ್ಷ ಡಿಕ್ ಚೆನಿ ಪತ್ನಿ ಲಿನ್ನೆ ಚೆನಿ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ : ಟ್ರೈಲರ್‌ | ‘ರೀಮಾಸ್ಟರ್ಡ್‌’ ಸರಣಿಯಲ್ಲಿ ಬಾಬ್‌ ಮಾರ್ಲೇ ದುರಂತ ಬದುಕಿನ ಚಿತ್ರಣ

ಸಿನಿಮಾದ ಅಧಿಕೃತ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ: “ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಉಪಾಧ್ಯಕ್ಷ ಹೇಗೆ ಪ್ರಭಾವಶಾಲಿ ವ್ಯಕ್ತಿಯಾಗಿ ಬೆಳೆಯುತ್ತಾನೆ, ದೇಶದ ಅಭಿವೃದ್ಧಿಯಲ್ಲಿ ಆತನ ಅಪಾರ ಕೊಡುಗೆ ಏನೆನ್ನುವುದನ್ನು ವೈಸ್‌ ಸಿನಿಮಾ ಹೇಳುತ್ತದೆ.” ಆ್ಯಡಮ್ಸ್‌ ಮ್ಯಾಕ್‌ಕೇ ಚಿತ್ರಕತೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ‘ದಿ ಆಂಕರ್‌ಮ್ಯಾನ್‌’ ಕಾಮಿಡಿ ಸರಣಿ ಮತ್ತು ‘ಸ್ಟೆಪ್‌ ಬ್ರದರ್ಸ್‌’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಬ್ರಾಡ್‌ ಪಿಟ್‌, ಡೇಡ್‌ ಗಾರ್ಡ್ನರ್‌ ಮತ್ಗತು ವಿಲ್‌ ಫೆರಿಲ್‌ ನಿರ್ಮಿಸಿರುವ ಈ ಸಿನಿಮಾ, 2018ರ ಡಿ.25ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More