ಟ್ರೈಲರ್‌ | ಗ್ರಾಫಿಕ್ಸ್‌ ಮತ್ತು ಆಕ್ಷನ್‌ನಿಂದ ಗಮನ ಸೆಳೆಯುವ ‘ಆಕ್ವಮ್ಯಾನ್’‌

ಜೇಸನ್‌ ಮೊಮೊವಾ ನಟನೆಯ ‘ಆಕ್ವಮ್ಯಾನ್‌’ ಹಾಲಿವುಡ್ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ. ಮೊಮೊವಾ ನಟಿಸಿರುವ ಸಿನಿಮಾ ಉತ್ಕೃಷ್ಟ ಕಂಪ್ಯೂಟರ್ ಗ್ರಾಫಿಕ್ಸ್‌, ಮೈನವಿರೇಳಿಸುವ ಆಕ್ಷನ್‌ ಸನ್ನಿವೇಶಗಳೊಂದಿಗೆ ಗಮನ ಸೆಳೆಯುತ್ತದೆ. ಈ ಸಿನಿಮಾ ಡಿ.21ಕ್ಕೆ ತೆರೆಕಾಣಲಿದೆ

ವಾರ್ನರ್‌ ಬ್ರದರ್ಸ್‌ ನಿರ್ಮಾಣದ ‘ಆಕ್ವಾಮ್ಯಾನ್‌’ ಹಾಲಿವುಡ್ ಚಿತ್ರದ ಮೊದಲ ಟ್ರೈಲರ್‌ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತ ಚಿತ್ರತಂಡ, ಮತ್ತೊಂದು ಸುದೀರ್ಘ ಟ್ರೈಲರ್ ಬಿಡುಗಡೆ ಮಾಡಿದೆ. ಜೇಸನ್‌ ಮೊಮೊವಾ ನಟಿಸಿರುವ ಸಿನಿಮಾ ಉತ್ಕೃಷ್ಟ ಕಂಪ್ಯೂಟರ್ ಗ್ರಾಫಿಕ್ಸ್‌, ಮೈನವಿರೇಳಿಸುವ ಆಕ್ಷನ್‌ ಸನ್ನಿವೇಶಗಳೊಂದಿಗೆ ಗಮನ ಸೆಳೆಯುತ್ತದೆ. ಮೊದಲ ಟ್ರೈಲರ್‌ಗೆ ಸಿಕ್ಕ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶಕ ಜೇಮ್ಸ್ ವ್ಯಾನ್ ಮತ್ತು ಅವರ ತಂಡ ಎರಡನೇ ಟ್ರೈಲರ್‌ನಲ್ಲಿ ತಪ್ಪು ತಿದ್ದಿಕೊಂಡಿದೆ.

ಲೈಟ್‌ಹೌಸ್‌ನ ಹಿನ್ನೆಲೆಯಲ್ಲಿ ಮೊಮೊವಾ ವಾಯ್ಸ್‌ಓವರ್‌ನೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಅಕ್ವಮ್ಯಾನ್/ಅರ್ಥುರ್‌ ಕರಿ‌ ಪಾತ್ರದಲ್ಲಿ ನಟಿಸುತ್ತಿರುವ ಜೇಸನ್‌ ಮೊಮೊವಾ ಸಬ್‌ಮೆರಿನ್‌ ಪ್ರವೇಶಿಸುವ ದೃಶ್ಯ, ಮೆರಾ (ಅಂಬರ್ ಹರ್ಡ್‌) ಮತ್ತು ಅರ್ಥುರ್‌ ವಿಶಾಲ ಮರುಭೂಮಿಯಲ್ಲಿ ನಡೆಯುವ ದೃಶ್ಯಗಳು ಆಕರ್ಷಕವಾಗಿವೆ. ಬಿಳಿ ಶಾರ್ಕ್‌ಗಳು ಮತ್ತು ಸೀಹಾರ್ಸ್‌ಗಳ ಗ್ರಾಫಿಕ್ಸ್‌ ಸನ್ನಿವೇಶಗಳು ಹೊಸ ಜಗತ್ತಿಗೆ ಕರೆದೊಯ್ಯುತ್ತವೆ.

ಯಾಹ್ಯಾ ಅಬ್ದುಲ್‌ ನಟಿಸಿರುವ ಬ್ಲ್ಯಾಕ್‌ ಮಾಂಟಾ ಪಾತ್ರ ಟ್ರೈಲರ್‌ನ ಹೈಲೈಟ್‌. ಭಯ ಹುಟ್ಟಿಸುವ ಈ ಖಳಪಾತ್ರದ ವಿನ್ಯಾಸ ವಿಶಿಷ್ಟವಾಗಿದೆ. ಮೆರಾ ಮತ್ತು ಅರ್ಥುರ್‌ ಅವರನ್ನು ಚೇಸ್ ಮಾಡುವ ಬ್ಲ್ಯಾಕ್‌ ಮಾಂಟಾ ಮೇಲೆ ಚಿತ್ರಿಸಿರುವ ದೃಶ್ಯಗಳು ತಾಂತ್ರಿಕವಾಗಿ ಉತ್ಕೃಷ್ಟವಾಗಿವೆ. ಉತ್ತಮ ಹಿನ್ನೆಲೆ ಸಂಗೀತ ದೃಶ್ಯಗಳನ್ನು ಮತ್ತಷ್ಟು ಅಂದಗೊಳಿಸಿದೆ. ಇದೇ ವರ್ಷ ಡಿಸೆಂಬರ್ 21ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More