ಟೀಸರ್ | ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರ

ನಟ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಧ್ರುವ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಸಂಯೋಜಿಸಿರುವ ‘ನಟೋರಿಯಸ್’ ಎಂಬ ಥೀಮ್ ಸಾಂಗ್ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ

ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಧ್ರುವ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಂಯೋಜಿಸಿರುವ ‘ನಟೋರಿಯಸ್’ ಎಂಬ ಥೀಮ್ ಸಾಂಗ್ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದ್ದು, ರಂಗುರಂಗಿನಿಂದ ಕೂಡಿರುವ ‘ಪೊಗರು’ ಟೀಸರ್ ಹೋಳಿ ಹಬ್ಬದ ನೆನಪನ್ನು ಮರುಕಳಿಸುವಂತಿದೆ.

ಗಿಜುಗುಡುವ ಗುಂಪಿನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಲೇ ಎಂಟ್ರಿ ಕೊಡುವ ಧ್ರುವ ಸರ್ಜಾ, ಎಂದಿನಂತೆ ಕೆಲವು ಆಕ್ಷನ್ ಫೈಟ್‌ಗಳಲ್ಲೂ ಮಿಂಚಿದ್ದು, ಉದ್ದ ಕೂದಲು ಬಿಟ್ಟು ಗಡ್ಡಧಾರಿಯಾಗಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ (ಅ.6) ಧ್ರುವ ಸರ್ಜಾರ ಹುಟ್ಟು ಹಬ್ಬದ ಅಂಗವಾಗಿ ‘ಪೊಗರು’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಧ್ರುವ ಸರ್ಜಾಗೆ ಶುಭಾಶಯ ಕೋರಿದೆ.

ಇದನ್ನೂ ಓದಿ : ಬದುಕಿನ ಮೂರು ಹಂತಗಳ ಭಿನ್ನ ಲುಕ್‌; ಇದು ಧ್ರುವ ಸರ್ಜಾ ‘ಪೊಗರು’ ಸಿನಿಮಾ

ಈ ವಿಶೇಷ ಟೀಸರ್‌ಗಾಗಿ 2 ಪೊಗರು ಚಿತ್ರತಂಡ 2 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಚಿತ್ರೀಕರಣದಲ್ಲಿ 150ಕ್ಕೂ ಹೆಚ್ಚು ಸಹಕಲಾವಿದರು ಹಾಗೂ 50 ಜನ ಫೈಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಈ ಟೀಸರ್ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿದ್ಧಗೊಂಡಿದೆ.

ವಿಕ್ಟರಿ, ಅಧ್ಯಕ್ಷ, ರನ್ನ ಹೀಗೆ ಯಶಸ್ವಿ ಚಿತ್ರಗಳ ನಿರ್ದೇಶಕ ಎನ್ನಿಸಿಕೊಂಡಿರುವ ನಂದಕಿಶೋರ್ ಚಿತ್ರದ ಸಾರಥ್ಯ ವಹಿಸಿದ್ದು, ನಟ, ನಿರ್ದೇಶಕ ಅರ್ಜುನ್ ಸರ್ಜಾ ತಮ್ಮ ಸೋದರಳಿಯನ ಸಿನಿಮಾಗೆ ಚಿತ್ರಕತೆ ರಚಿಸಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ಗಂಗಾಧರ್ ಹಣ ಹೂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More