ವಿಡಿಯೋ | ಹತ್ತು ವರ್ಷದ ನಂತರವೂ ಸತ್ಯ ಸತ್ಯವಾಗಿಯೇ ಇರುತ್ತದೆ ಎಂದ ನಾನಾ

ನಟಿ ತನುಶ್ರೀ ಅವರ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ನಟ ನಾನಾ ಪಾಟೇಕರ್ ಮೌನ ಮುರಿದಿದ್ದಾರೆ. ಆದರೆ, ಅವರು ವಿವರವಾಗಿ ಏನೂ ಹೇಳದೆ ಒಂದೆರೆಡು ಮಾತುಗಳನ್ನಾಡಿ ಸುಮ್ಮನಾಗಿರುವುದು ಅಚ್ಚರಿ ತಂದಿದೆ. ಹತ್ತು ವರ್ಷದ ಹಿಂದಿ ಸತ್ಯ ಈಗಲೂ ಹಾಗೆಯೇ ಇರುತ್ತದೆ ಎಂದಿದ್ದಾರೆ

‘ಹಾರ್ನ್ ಓಕೆ ಪ್ಲೀಸ್‌’ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಆರೋಪಿಸಿದ್ದರು. ತನುಶ್ರೀ ಹೇಳಿಕೆ ಹಿಂದಿ ಚಿತ್ರರಂಗದಲ್ಲಿ ‌ತಲ್ಲಣ ಉಂಟುಮಾಡಿತ್ತು. ಪರ-ವಿರೋಧದ ಚರ್ಚೆಯ ಮಧ್ಯೆ ಇದೀಗ #MeToo ಅಭಿಯಾನ ಶುರುವಾಗಿದೆ. ಹಲವರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಲೈಂಗಿಕ ಶೋಷಣೆ ನಡೆಸಿದ ಆರೋಪಗಳಿಗೆ ನಟರು ಕ್ಷಮೆ ಕೇಳುವ ಸಂದರ್ಭಗಳೂ ಸೃಷ್ಟಿಯಾಗುತ್ತಿವೆ.

ಈ ಮಧ್ಯೆ ನಟ ನಾನಾ ಪಾಟೇಕರ್‌ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ, ಅವರು ಹೆಚ್ಚೇನೂ ಹೇಳದಿರುವುದು ಚರ್ಚೆಗೆ ಕಾರಣವಾಗಿದೆ. ಸುದ್ದಿಗೋಷ್ಠಿಯಲ್ಲಿ ನಾನಾ, “ಪ್ರಕರಣದ ಬಗ್ಗೆ ನನ್ನ ವಕೀಲರು ಏನೊಂದೂ ಮಾತನಾಡದಂತೆ ಹೇಳಿದ್ದಾರೆ. ಹಾಗಾಗಿ ನಾನು ಮಾತನಾಡಿರಲಿಲ್ಲ. ಇಲ್ಲದಿದ್ದರೆ ಈ ವೇಳೆಗಾಗಲೇ ನಾನು ವಿವರವಾಗಿ ಎಲ್ಲವನ್ನೂ ಹೇಳಿರುತ್ತಿದ್ದೆ,” ಎಂದಿದ್ದಾರೆ. ಮಾಧ್ಯಮಗಳು ಮತ್ತೆ-ಮತ್ತೆ ಪ್ರಶ್ನಿಸಿದಾಗ, “ನಾನೇನು ಹೇಳಲಿ? ಹತ್ತು ವರ್ಷದ ಹಿಂದೆಯೇ ನಾನು ಹೇಳಿದ್ದೆ. ಆಗ ಹೇಳಿದ್ದ ಸತ್ಯ ಈಗಲೂ ಹಾಗೆಯೇ ಇರುತ್ತದೆ. ಇಂದೂ, ಮುಂದೂ ಕೂಡ ಸತ್ಯ ಬದಲಾಗುವುದಿಲ್ಲ,” ಎಂದಿದ್ದಾರೆ.

ನಾನಾ ಪಾಟೇಕರ್ ಅವರ ವಕೀಲರು ನಟಿ ತನುಶ್ರೀಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆರೋಪದಿಂದ ತಮ್ಮ ಪ್ರತಿಷ್ಠೆ, ವ್ಯಕ್ತಿತ್ವಕ್ಕೆ ಹಾನಿಯಾಗಿದ್ದು ಕ್ಷಮೆಗೆ ಆಗ್ರಹಿಸಿ ನಟಿಗೆ ನೋಟಿಸ್ ಕಳುಹಿಸಲಾಗಿತ್ತು. ಈ ಬಗ್ಗೆ ನಿನ್ನೆ (ಅ.7) ನಟ ನಾನಾ ಪಾಟೇಕರ್‌ ಅವರನ್ನು ಪ್ರಶ್ನಿಸಲಾಗಿತ್ತು. ಆಗ ನಾನಾ, “ಹತ್ತು ವರ್ಷದ ಹಿಂದೆ ಏನು ಹೇಳಿದ್ದೆನೋ ಈಗಲೂ ಅದನ್ನೇ ಹೇಳುತ್ತೇನೆ. ಸದ್ಯದಲ್ಲೇ ಸುದ್ದಿಗೋಷ್ಠಿ ಕರೆಯುತ್ತೇನೆ,” ಎಂದಿದ್ದರು. ಇಂದು ಸುದ್ದಿಗೋಷ್ಠಿಯಲ್ಲೂ ಅವರು ವಿವರವಾಗಿ ಮಾತನಾಡಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More