ಟೀಸರ್‌ | ಶಿವ ರಾಜಕುಮಾರ್‌, ಸುದೀಪ್‌ ‘ದಿ ವಿಲನ್‌’ ಸಾಂಗ್‌ ಮೇಕಿಂಗ್ ವಿಡಿಯೋ

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್‌’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮೇಕಿಂಗ್, ಆಡಿಯೋ, ವಿವಾದಗಳಿಂದ ಸಿನಿಮಾ ಮೊದಲಿನಿಂದಲೂ ಸುದ್ದಿಯಾಗುತ್ತಲೇ ಇದೆ. ಇದೀಗ ಪ್ರೇಮ್‌, ಚಿತ್ರದ ಹಾಡುಗಳ ಮೇಕಿಂಗ್ ರಿಲೀಸ್ ಮಾಡಿದ್ದು, ವಿಡಿಯೋ ಗಮನ ಸೆಳೆಯುತ್ತಿದೆ

ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ. ಪ್ರತಿ ಬಾರಿಯೂ ನಿರ್ದೇಶಕ ಪ್ರೇಮ್‌ ತಮ್ಮ ಚಿತ್ರದ ಬಗ್ಗೆ ಕ್ರೇಝ್ ಹುಟ್ಟುಹಾಕುತ್ತಾರೆ. ಈ ಬಾರಿಯೂ ‘ದಿ ವಿಲನ್’ ಚಿತ್ರದ ಪಾತ್ರಗಳ ಆಯ್ಕೆ, ಮೇಕಿಂಗ್, ಆಡಿಯೋ ಲಾಂಚ್ ಸೇರಿದಂತೆ ಹಲವು ವಿಷಯಗಳಲ್ಲಿ ತಮ್ಮ ಚಿತ್ರಕ್ಕೆ ಮೈಲೇಜ್ ಸೆಟ್ ಮಾಡಿದ್ದರು. ಇದೀಗ ‘ದಿ ವಿಲನ್‌’ ಬಿಡುಗಡೆ ಸಮೀಪವಾಗುತ್ತಿರುವಂತೆ ಚಿತ್ರದ ಎಲ್ಲ ಹಾಡುಗಳ ಮೇಕಿಂಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದ್ದಾರೆ.

‘ಐ ಆಮ್ ವಿಲನ್', ‘ಟಿಕ್ ಟಿಕ್ ಟಿಕ್’, ‘ನೋಡವಳಂದಾವ ಮುತ್ತಿನ ಮಾಲೆ ಚಂದಾವ’ ಸೇರಿದಂತೆ ಚಿತ್ರದ ಎಲ್ಲ ಹಾಡುಗಳ ಮೇಕಿಂಗ್ ಟೀಸರ್ ಬಿಡುಗಡೆಯಾಗಿದೆ. ನಟರಾದ ಶಿವ ರಾಜಕುಮಾರ್, ಸುದೀಪ್, ಎಮಿ ಜಾಕ್ಸನ್ ಹಾಗೂ ಸಹಕಲಾವಿದರೆಲ್ಲರೂ ಹಾಡುಗಳಿಗೆ ಹೆಜ್ಜೆ ಹಾಕಲು ನಡೆಸುತ್ತಿರುವ ತಾಲೀಮು, ಹಾಡಿನ ಚತ್ರೀಕರಣದ ವೇಳೆ ಕಲಾವಿದರ ತರಲೆ, ತುಂಟಾಟಗಳಿಂದ ಕೂಡಿರುವ ಟೀಸರ್ ರಂಜನೀಯವಾಗಿದೆ.

ಇದನ್ನೂ ಓದಿ : ಟೀಸರ್ | ಪ್ರೇಮ್‌- ಶಿವ ರಾಜಕುಮಾರ್‌‌‌‌- ಸುದೀಪ್‌ ಸಿನಿಮಾ ‘ದಿ ವಿಲನ್‌’‌

ಟೀಸರ್‌ನ ಕೊನೆಯ ಹಂತದಲ್ಲಿ ಶುರುವಾಗುವ ಚಿತ್ರದ ಥೀಮ್ ಸಾಂಗ್ ‘ರಾವಣ ರಾವಣ...’ ಹಾಡಿನ ಜೊತೆಜೊತೆಗೆ ಸಾಗುವ ನಾಟಕದ ದೃಶ್ಯಗಳು, ರಾವಣನ ಪಾತ್ರಧಾರಿ ಇವೆಲ್ಲವೂ ವೀಕ್ಷಕರ ಕುತೂಹಲವನ್ನು ಹೆಚ್ಚಿಸುವಂತಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಶಂಕರ್ ಮಹದೇವನ್, ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್ ದನಿಯಾಗಿರುವ ‘ದಿ ವಿಲನ್’ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು, ದಸರಾ ಹಬ್ಬಕ್ಕೆ ಸಿನಿಮಾ ತೆರೆಕಾಣುತ್ತಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More