ಅಮಿತಾಭ್ ಜನ್ಮದಿನಕ್ಕೆ ‘ಸೈರಾ ನರಸಿಂಹ ರೆಡ್ಡಿ’ ಮೋಷನ್ ಟೀಸರ್ ಉಡುಗೊರೆ

ಬಾಲಿವುಡ್ ಹಿರಿಯ ನಟ ಅಮಿತಾಭ್‌‌ ಬಚ್ಚನ್‌ 76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ‘ಸೈರಾ ನರಸಿಂಹ ರೆಡ್ಡಿ’ ತೆಲುಗು ಸಿನಿಮಾದ ತಂಡ ಉಡುಗೊರೆಯಾಗಿ ಫಸ್ಟ್ಸ್ಟ್‌ಲುಕ್‌ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಬಚ್ಚನ್‌ ಇಲ್ಲಿ ಗೋಸಾಯಿ ವೆಂಕಣ್ಣನ ಪಾತ್ರದಲ್ಲಿದ್ದಾರೆ

ಸ್ವಾತಂತ್ರ್ಯಪೂರ್ವದ ಕತೆಯ ‘ಸೈರಾ ನರಸಿಂಹ ರೆಡ್ಡಿ’ ತೆಲುಗು ಸಿನಿಮಾ ಮತ್ತೆ ಸುದ್ದಿಯಾಗಿದೆ. ಚಿತ್ರದಲ್ಲಿ ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರು ನರಸಿಂಹ ರೆಡ್ಡಿ ಗುರುಗಳಾದ ಗೋಸಾಯಿ ವೆಂಕಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಚಿತ್ರೀಕರಣದ ವೇಳೆಯ ತಮ್ಮ ಕೆಲವು ಫೋಟೊಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ನಟ ಅಭಿಮಾನಿಗಳಲ್ಲಿ ಕೂತುಹಲ ಸೃಷ್ಟಿಸಿದ್ದರು. ಇದೀಗ ಬಿಡುಗಡೆ ಆಗಿರುವ ಅಮಿತಾಭ್‌ರ ಮೋಷನ್ ಟೀಸರ್ ವಿಡಿಯೋ, ಅವರ ಪಾತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ.

ಗಾಂಭೀರ್ಯ, ಹಣೆಯ ಮೇಲೆ ತಿಲಕ, ಉದ್ದನೆಯ ಬಿಳಿ ತಲೆಗೂದಲು, ಗಡ್ಡಧಾರಿ ಬಚ್ಚನ್‌ ಋಷಿಮುನಿಯಂತೆ ಕಾಣುತ್ತಾರೆ. ಬಹುತಾರಾಬಳಗವಿರುವ ಈ ಚಿತ್ರದಲ್ಲಿ ತೆಲುಗು ಹಿರಿಯ ನಟ ಚಿರಂಜೀವಿ ಶೀರ್ಷಿಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಸುದೀಪ್ ಸೇರಿದಂತೆ ತಮಿಳಿನ ವಿಜಯ್ ಸೇತುಪತಿ ಹಾಗೂ ನಟಿ ನಯನತಾರಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಂದರ್‌ ರೆಡ್ಡಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ನಟ ರಾಮ್‌ಚರಣ್‌ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More