ಅತ್ತೆ, ನಟಿ ಡಿಂಪಲ್ ಕಪಾಡಿಯಾ ನೃತ್ಯದ ವಿಡಿಯೋ ಟ್ವೀಟ್ ಮಾಡಿದ ಅಕ್ಷಯ್

ಬಾಲಿವುಡ್‌ ಹೀರೋ ಅಕ್ಷಯ್ ಕುಮಾರ್ ತಮ್ಮ ಕುಟುಂಬದೊಂದಿಗೆ ಇಟಲಿ ಪ್ರವಾಸದಲ್ಲಿದ್ದಾರೆ. ಅಲ್ಲಿ ಸಂಗೀತಗಾರನೊಬ್ಬ ‘ಬಾಬ್ಬಿ’ ಹಿಂದಿ ಚಿತ್ರದ ಟ್ಯೂನ್ ನುಡಿಸಿದ್ದಾನೆ. ಈ ಟ್ಯೂನ್‌ಗೆ ನಟಿ ಡಿಂಪಲ್ ಕಪಾಡಿಯಾ ಮೈಮರೆತು ನರ್ತಿಸಿದ್ದು, ಅಕ್ಷಯ್‌, ಅತ್ತೆಯ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ

ಬಾಲಿವುಡ್‌ ತಾರಾ ದಂಪತಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದು ಇಟಲಿ ಪ್ರವಾಸದಲ್ಲಿದ್ದಾರೆ. ಪುತ್ರಿ ನಿತಾರಾ ಮತ್ತು ಟ್ವಿಂಕಲ್ ತಾಯಿ ಹಾಗೂ ನಟಿ ಡಿಂಪಲ್ ಕಪಾಡಿಯಾ ಕೂಡ ಅವರೊಂದಿಗಿದ್ದಾರೆ. ಪ್ರವಾಸದಲ್ಲಿರುವ ಅಕ್ಷಯ್, ಇಟಲಿಯ ಸುಂದರ ಪ್ರದೇಶಗಳಲ್ಲಿನ ತಮ್ಮ ಕುಟುಂಬದ ಫೋಟೋಗಳನ್ನು ಟ್ವೀಟ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇತ್ತೀಚೆಗೆ ಅವರು ಟ್ವೀಟ್ ಮಾಡಿರುವ ಚೆಂದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಇಟಲಿಯ ಪುಟ್ಟ ನಗರವೊಂದರಲ್ಲಿ ಡಿಂಪಲ್ ಕಪಾಡಿಯಾ ನರ್ತಿಸುವ ವಿಡಿಯೋ ಇದು. ರಸ್ತೆ ಬದಿಯಲ್ಲಿ ಸಂಗೀತಗಾರನೊಬ್ಬ ‘ಬಾಬ್ಬಿ’ ಹಿಂದಿ ಚಿತ್ರದ ಟ್ಯೂನ್ ನುಡಿಸಿದ್ದಾನೆ. ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಡಿಂಪಲ್‌ ಕಪಾಡಿಯಾ ಟ್ಯೂನ್‌ಗೆ ಮಾರುಹೋಗಿ ನೃತ್ಯ ಮಾಡಿದ್ದಾರೆ.

61ರ ಹರೆಯದ ಡಿಂಪಲ್ ನೃತ್ಯವನ್ನು ಅಕ್ಷಯ್ ಸೆರೆಹಿಡಿದು ಟ್ವೀಟ್ ಮಾಡಿ, “ಇಟಲಿಯ ಪಟ್ಟಣವೊಂದರಲ್ಲಿ ನಡೆದಾಡುತ್ತಿದ್ದೆವು. ಅಲ್ಲೊಬ್ಬ ಸಂಗೀತಗಾರ ಬಾಬ್ಬಿ ಸಿನಿಮಾದ ಟ್ಯೂನ್ ನುಡಿಸುತ್ತಿದ್ದ. ಬದುಕು ಒಂದು ರೀತಿ ಸುಂದರ ಅನಿರೀಕ್ಷಿತಗಳ ಸರಣಿ,” ಎಂದು ಟ್ವೀಟ್ ಮಾಡಿದ್ದಾರೆ. ಹದಿನಾರರ ಹರೆಯದಲ್ಲಿ ‘ಬಾಬ್ಬಿ’ ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಡಿಂಪಲ್‌, 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ರುಡಾಲಿ’ (1993) ಚಿತ್ರದ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More