#MeToo ಆರೋಪ ಸಾಬೀತಾದವರ ಜೊತೆ ಸಿನಿಮಾ ಮಾಡುವುದಿಲ್ಲ ಎಂದ ನಿರ್ದೇಶಕಿಯರು

ಸಿನಿಮಾ ಉದ್ಯಮದಲ್ಲಿ ಸಹೊದ್ಯೋಗಿಗಳೊಂದಿಗೆ ಅನುಚಿವಾಗಿ ವರ್ತಿಸುವ ಅಥವಾ ಲೈಂಗಿಕ ಕಿರುಕುಳ ನೀಡುವ ಯಾವುದೇ ವ್ಯಕ್ತಿಗಳ ಮೇಲಿನ ಆರೋಪಗಳು ಸಾಬೀತಾದರೆ, ಅಂತಹ ವ್ಯಕ್ತಿಗಳೊಂದಿಗೆ ತಾವು ಸಿನಿಮಾ ಮಾಡುವುದಿಲ್ಲ ಎಂದು ಬಾಲಿವುಡ್ ನಿರ್ದೇಶಕಿಯರು ಹೇಳಿದ್ದಾರೆ

ದೇಶದಲ್ಲಿ ದಿನೇದಿನೇ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ #MeToo ಅಭಿಯಾನಕ್ಕೆಇದೀಗ ಬಾಲಿವುಡ್‌ನ ಖ್ಯಾತ ಮಹಿಳಾ ನಿರ್ದೇಶಕಿಯರು ಬೆಂಬಲ ಸೂಚಿಸಿದ್ದಾರೆ. “ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ಹೇಳಿಕೊಳ್ಳಲು ಸಂತ್ರಸ್ತ ಮಹಿಳೆಯರು ಪ್ರಾಮಾಣಿಕವಾಗಿ ಮುಂದೆ ಬಂದರೆ ಅಂಥವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಧೈರ್ಯದಿಂದಲೇ ಹೊಸ ಕ್ರಾಂತಿಯೊಂದರ ಆರಂಭಕ್ಕೆ ಮುಂದಾಗಿರುವ ಮಹಿಳೆಯರಿಗೆ ಗೌರವ ಹಾಗೂ ರಕ್ಷಣೆ ನೀಡಲಾಗುವುದು,” ಎಂದಿದ್ದಾರೆ.

ಉದ್ಯಮದಲ್ಲಿ ಸಹೋದ್ಯೋಗಿಗಳೊಂದಿಗೆ ಅನುಚಿವಾಗಿ ವರ್ತಿಸುವ ಅಥವಾ ಲೈಂಗಿಕ ಕಿರುಕುಳ ನೀಡುವ ಯಾವುದೇ ವ್ಯಕ್ತಿಗಳ ಮೇಲಿನ ಆರೋಪಗಳು ಸಾಬೀತಾದರೆ, ಅಂಥವರೊಂದಿಗೆ ತಾವು ಕೆಲಸ ಮಾಡುವುದಿಲ್ಲ ಎನ್ನುವ ಮೂಲಕ ಕೊಂಕಣಾ ಸೇನ್ ಶರ್ಮಾ, ನಂದಿತಾ ದಾಸ್, ಮೇಘನಾ ಗುಲ್ಜರ್ ಹಾಗೂ ರೀಮಾ ಕಾಗ್ಟಿ ಸೇರಿದಂತೆ 11 ಜನ ಖ್ಯಾತ ಮಹಿಳಾ ನಿರ್ದೇಶಕಿಯರು ಒಗ್ಗಟ್ಟು ಸಾರಿದ್ದಾರೆ. ಈ ಕುರಿತಾದ ಬರಹವೊಂದನ್ನು ನಟಿ, ನಿರ್ದೇಶಕಿ ಕೊಂಕಣಾ ಸೇನ್ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟಿ ತನುಶ್ರೀ ದತ್ತಾರ ಲೈಂಗಿಕ ಆರೋಪದ ಬಳಿಕ ಭಾರ್ತದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಿರುವ #MeToo ಅಭಿಯಾನ, ಈಗಾಗಲೇ ಚಿತ್ರರಂಗ, ಪತ್ರಿಕೋದ್ಯಮ, ರಾಜಕೀಯ ರಂಗದ ಖ್ಯಾತನಾಮರ ಮುಖವಾಡಗಳನ್ನೂ ಬಯಲಿಗೆಳೆದಿದೆ.

ಇದನ್ನೂ ಓದಿ : ವಿಡಿಯೋ | ಮಹಿಳೆಯರ ಬಗ್ಗೆ ನಾನಾಗೆ ಗೌರವವಿಲ್ಲ ಎಂದ ನಟಿ ತನುಶ್ರೀ ದತ್ತಾ
View this post on Instagram

#metooindia

A post shared by Konkona Sensharma (@konkona) on

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More