ಸ್ಯಾಂಡಲ್‌ವುಡ್‌ನಲ್ಲಿ #MeToo; ಸಂಗೀತಾ ಭಟ್‌ಗೆ ಬೆಂಬಲ ಸೂಚಿಸಿದ ಶೃತಿ

ಬಾಲಿವುಡ್‌ನಲ್ಲಿ ನಡೆಯುತ್ತಿರುವ #MeToo ಅಭಿಯಾನ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದೆ. ನಟಿ ಸಂಗೀತಾ ಭಟ್‌ ನಿನ್ನೆ ತಮಗಾದ ಲೈಂಗಿಕ ಶೋಷಣೆ ಕುರಿತಂತೆ ಟ್ವಿಟರ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದರು. ನಟಿ ಶೃತಿ ಹರಿಹರನ್ ಅವರು ಸಂಗೀತಾಗೆ ಧೈರ್ಯ ತುಂಬಿದ್ದು, ಬೆಂಬಲ ಸೂಚಿಸಿದ್ದಾರೆ

ಬಾಲಿವುಡ್‌ನಲ್ಲಿ #MeToo ಅಭಿಯಾನ ದಿನಗಳೆದಂತೆ ಹಲವು ಆಯಾಮ ಪಡೆದುಕೊಳ್ಳುತ್ತಿದೆ. ಅಲ್ಲಿನ ದೊಡ್ಡ ನಟರು ಹಾಗೂ ತಂತ್ರಜ್ಞರ ಮೇಲೆ ಲೈಂಗಿಕ ಶೋಷಣೆ ಆರೋಪಗಳು ಕೇಳಿಬಂದಿವೆ. ಪರ-ವಿರೋಧದ ಚರ್ಚೆ ಶುರುವಾಗಿದ್ದು, ಆರೋಪಿತರಲ್ಲಿ ಕೆಲವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಪರೋಕ್ಷವಾಗಿ ಈ ಬೆಳವಣಿಗೆ ಉದ್ಯಮದ ಮೇಲೂ ಪರಿಣಾಮ ಬೀರಿರುವುದು ದಿಟ. ಇದೀಗ ಸ್ಯಾಂಡಲ್‌ವುಡ್‌ನಲ್ಲೂ #MeToo ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ನಟಿ ಸಂಗೀತಾ ಭಟ್‌ ಚಿತ್ರರಂಗದಲ್ಲಿನ ತಮ್ಮ ಕಹಿ ಅನುಭವಗಳನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ನಟಿ ಶೃತಿ ಹರಿಹರನ್‌ ಅವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಚಿತ್ರರಂಗ ಪ್ರವೇಶಿಸಿದಾಗ ನಟಿ ಸಂಗೀತಾ ಭಟ್‌ ಅವರಿಗೆ ಹದಿನೈದು ವರ್ಷ. ವಿದ್ಯಾಭ್ಯಾಸಕ್ಕೆ ಹಣದ ತೊಂದರೆಯಾದಾಗ ಅವರು ಪ್ರವೃತ್ತಿಯಾಗಿ ನಟನೆಯನ್ನು ಕೈಗೊಳ್ಳಲು ನಿರ್ಧರಿಸುತ್ತಾರೆ. ಆಗ ಅವರಿಗೆ ಕಾಸ್ಟಿಂಗ್ ನಿರ್ದೇಶಕ, ಚಿತ್ರದ ನಿರ್ದೇಶಕರಿಂದ ಲೈಂಗಿಕ ಶೋಷಣೆ ನಡೆಯುತ್ತದೆ. ಮುಂದೆ ಮೂರು ಬಾರಿ ಅವರು ಇಂಥದ್ದೇ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ತಮಿಳು ಚಿತ್ರವೊಂದರ ನಟಿಯಾಗಿ ಅಭಿನಯಿಸುತ್ತಿದ್ದಾಗ ಚಿತ್ರದ ಹೀರೋ ಅವರನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಾನೆ.

ಇದನ್ನೂ ಓದಿ : ವಿಡಿಯೋ | ಹತ್ತು ವರ್ಷದ ನಂತರವೂ ಸತ್ಯ ಸತ್ಯವಾಗಿಯೇ ಇರುತ್ತದೆ ಎಂದ ನಾನಾ

ಈ ಘಟನೆಗಳನ್ನು ಸಂಗೀತಾ ಭಟ್‌ ಟ್ವಿಟರ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಆದರೆ, ಅವರೆಲ್ಲೂ ನಿರ್ದಿಷ್ಟವಾಗಿ ನಟರು ಹಾಗೂ ನಿರ್ದೇಶಕರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಆದರೂ ಅವರುಗಳ ಬಗ್ಗೆ ಪರೋಕ್ಷ ಸೂಚನೆಗಳು ಸಿಗುತ್ತವೆ. ಇಂದು ನಟಿ ಹರಿಹರನ್ ಅವರು ನಟಿ ಸಂಗೀತಾ ಭಟ್‌ ಬೆಂಬಲಕ್ಕೆ ನಿಂತಿದ್ದಾರೆ. “ನೀವು ಧೈರ್ಯಶಾಲಿ. ನಿಮ್ಮ ಟ್ವೀಟ್‌ನಿಂದಾಗಿ ಈಗಾಗಲೇ ಕೆಲವರಿಗೆ ಭಯ ಶುರುವಾಗಿದೆ. ಅವರ ವಿರುದ್ಧ ನಿಂತು ಮಾತನಾಡುವ ಶಕ್ತಿ ನಿಮಗೆ ಬರಲಿ. ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ನಿಮ್ಮ ನಿಲುವಿಗೆ ನನ್ನ ಬೆಂಬಲವಿದೆ,” ಎಂದು ಶೃತಿ ಹರಿಹರನ್‌ ಟ್ವಿಟ್ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More