ವಿಡಿಯೋ | ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರದ ‘ವಶಮಲ್ಲೆ’ ಹಾಡು ರಿಲೀಸ್‌

‘ಥಗ್ಸ್‌ ಆಫ್‌ ಹಿಂದೋಸ್ಥಾನ್’’ ಚಿತ್ರದ ಮೊದಲ ಹಾಡು ರೀಲಿಸ್‌ ಆಗಿದೆ. ‘ವಶಮಲ್ಲೆ’ ಹಾಡಿನಲ್ಲಿ ಕಾಣಿಸಿಕೊಂಡಿರುವ ಅಮಿತಾಬ್‌ ಬಚ್ಚನ್‌ ಮತ್ತು ಆಮಿರ್‌ ಖಾನ್‌ ಅವರ ನೃತ್ಯ ಶೈಲಿ ವಿಭಿನ್ನವಾಗಿ ಕಾಣಿಸುತ್ತದೆ. ಪ್ರಭುದೇವ ಅವರು ವಶಮಲ್ಲೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ

ಬಾಲಿವುಡ್‌ನ ಬಹುನಿರೀಕ್ಷಿತ ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರದ ಮೊದಲ ಹಾಡು ರೀಲಿಸ್‌ ಆಗಿದೆ. ‘ವಶಮಲ್ಲೆ’ ಹಾಡಿನಲ್ಲಿ ಕಾಣಿಸಿಕೊಂಡಿರುವ ಅಮಿತಾಬ್‌ ಬಚ್ಚನ್‌ ಮತ್ತು ಆಮಿರ್‌ ಖಾನ್‌ ಅವರ ನೃತ್ಯಶೈಲಿ ವಿಭಿನ್ನವಾಗಿ ಕಾಣಿಸುತ್ತದೆ. ‘ಸೈರಾಟ್‌’ ಚಿತ್ರ ಖ್ಯಾತಿಯ ಅಜಯ್‌-ಅಥುಲ್‌ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಸುಖವಿಂದರ್‌ ಸಿಂಗ್‌ ಹಾಗೂ ವಿಶಾಲ್‌ ದಲ್ದಾನಿ ಅವರು ಧ್ವನಿ ನೀಡಿದ್ದಾರೆ. ಪ್ರಭುದೇವ ಅವರು ನೃತ್ಯ ಸಂಯೋಜನೆ ಮಾಡಿರುವುದು ಈ ಹಾಡಿನ ಮತ್ತೊಂದು ವೈಶಿಷ್ಟ್ಯ.

ಯಶ್‌ ಛೋಪ್ರಾ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರಕ್ಕೆ 310 ಕೋಟಿ ರು.ಗಳನ್ನು ಹೂಡಲಾಗಿದ್ದು, ಇದು ಬಾಲಿವುಡ್‌ನ ಬಿಗ್‌ ಬಜೆಟ್‌ ಚಿತ್ರವಾಗಿದೆ. 17 ಶತಮಾನದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಸಿಡಿದೇಳುವ ವೀರರ ಸಾಹಸಗಾಥೆಯ ಕಥಾನಕ ಹೊಂದಿರುವ ಚಿತ್ರದ ಟ್ರೈಲರ್‌ ಕಳೆದ ತಿಂಗಳು ರೀಲಿಸ್‌ ಆಗಿತ್ತು. ಟ್ರೈಲರ್ ಮೂಲಕವೇ ತೀವ್ರ ಕುತೂಹಲ ಕೆರಳಿಸಿರುವ ಈ ಚಿತ್ರವು ನ.8ರಂದು ತೆರೆಕಾಣಲಿದೆ. ಹಿಂದಿ ಚಿತ್ರರಂಗದ ಸ್ಟಾರ್‌ ನಟರಾದ ಅಮಿತಾಭ್ ಬಚ್ಚನ್‌ ಹಾಗೂ ಆಮಿರ್‌ ಖಾನ್‌ ಅವರು ಮೊದಲ ಬಾರಿ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More