ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್

‘ಪಿಹೂ’ ಚಿತ್ರದ ಟ್ರೇಲರ್‌ ಭರ್ಜರಿ ಸುದ್ದಿ ಮಾಡಿದೆ. ಎರಡು ವರ್ಷದ ಮಗುವಿನ ಸುತ್ತ ಹೆಣೆದ ಈ ಸಿನಿಮಾದಲ್ಲಿ, ಪೋಷಕರು ಎದುರಿಸಬೇಕಾಗುವ ಸಂದರ್ಭವನ್ನು ಹಾರರ್‌ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ವಿನೋದ್‌ ಕಾಪ್ರಿ ನಿರ್ದೇಶನದ ಈ ಚಿತ್ರವನ್ನು ರೋನಿ ಸ್ಕ್ರ್ಯೂವಾಲಾ ನಿರ್ಮಿಸಿದ್ದಾರೆ

‘ಮಿಸ್‌ ತಾನಕ್‌ಪುರ್‌ ಹಾಝಿರ್‌ ಹೋ’ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ವಿನೋದ್ ಕಾಪ್ರಿ, ಮೂರು ವರ್ಷಗಳ ಬಳಿಕ ತಮ್ಮದೇ ಕತೆಯನ್ನು ತೆರೆಗೆ ತರುವುದಕ್ಕೆ ಸಿದ್ಧರಾಗಿದ್ದಾರೆ. ಸತ್ಯ ಘಟನೆಗಳನ್ನು ಆಧರಿಸಿ 'ಪಿಹೂ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಇನ್ನು ಎರಡು ವಾರಗಳಲ್ಲಿ ದೇಶಾದ್ಯಂತ ತೆರೆಕಾಣಲಿದೆ.

ಎರಡು ವರ್ಷದ ಮಗು ಮೈರಾ ತನ್ನ ಮನೆಯಲ್ಲಿ ಬಂಧಿತಳಾಗುತ್ತಾಳೆ. ಆಗ ಮಾಡುವ ಎಲ್ಲ ತುಂಟಾಟ, ತರಲೆಗಳನ್ನು ಚಿತ್ರ ಕಟ್ಟಿಕೊಡುತ್ತದೆ. ಮೂರು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಮೈನವಿರೇಳಿಸುವಂತಿದೆ.

ಪುಟ್ಟ ಮಗುವೊಂದನ್ನು ಮನೆಯಲ್ಲಿ ಒಬ್ಬಳೇ ಬಿಟ್ಟರೆ ಏನು ಮಾಡುತ್ತಾಳೆ ಎಂಬ ಕುತೂಹಲದೊಂದಿಗೆ ಆರಂಭವಾದ ಈ ಚಿತ್ರದ ಕತೆಯನ್ನು, ನಾಲ್ಕು ವರ್ಷಗಳ ಹಿಂದೆ ಓದಿದ ಸುದ್ದಿಯೊಂದನ್ನು ಅನುಸರಿಸಿ ಕಾಪ್ರಿ ಸಿದ್ಧಪಡಿಸಿದ್ದಾರೆ. ಹೆಚ್ಚು ಪಾತ್ರಗಳಿಲ್ಲ, ಹೆಚ್ಚು ಡೈಲಾಗ್‌ಗಳಿಲ್ಲ. ಆದರೆ, ಸಹಜ ಶಬ್ದ ಮತ್ತು ಮೌನಗಳೇ ನೋಡುಗರನ್ನು ಕುರ್ಚಿಯ ತುದಿಗೆ ತಂದು ಕೂರಿಸುವಂತಿದೆ ಎಂಬುದನ್ನು ಟ್ರೇಲರ್‌ ಹೇಳುತ್ತದೆ.

ಈ ಚಿತ್ರವು ಈಗಾಗಲೇ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು ಅತ್ಯುತ್ತಮ ಚಲನಚಿತ್ರ ಬಹುಮಾನಕ್ಕೂ ಪಾತ್ರವಾಗಿದೆ. ಚಿತ್ರದಲ್ಲಿ ಏನಿದೆ ಎಂಬುದರ ಝಲಕ್‌ ಈ ಟ್ರೇಲರ್‌ನಲ್ಲಿ ನೋಡಿ ತಿಳಿಯಬಹುದು.

#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
Editor’s Pick More