-೫೦ ಡಿಗ್ರಿ ಸೆಲ್ಷಿಯಸ್‌ನಲ್ಲಿ ಗಡಿ ಕಾಯುತ್ತಿರುವ ಸೈನಿಕರು ಭಾರತದವರಾ?

ಇಬ್ಬರು ಸೈನಿಕರು ರಾತ್ರಿ ವೇಳೆ ಹಿಮದ ಮೇಲೆಯೇ ಮಲಗಿರುವ ಫೋಟೋವೊಂದನ್ನು ಬಿಜೆಪಿ ಸಂಸದೆ ಕಿರನ್‌ ಖೇರ್‌ ಅವರು ಟ್ವೀಟ್‌ ಮಾಡಿದ್ದರು. “ಭಾರತೀಯ ಸೈನಿಕರು -೫೦ ಡಿಗ್ರಿ ಸೆಲ್ಷಿಯಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು,” ಎಂದು ಬರೆದಿದ್ದರು. ಆದರೆ ಆ ಚಿತ್ರ ಭಾರತದ್ದಲ್ಲ!

ಚಂಡೀಗಢದ ಬಿಜೆಪಿ ಸಂಸದೆ, ಬಾಲಿವುಡ್‌ ಪೋಷಕ ನಟಿ ಕಿರನ್‌ ಖೇರ್‌ ಅವರು ಇಬ್ಬರು ಸೈನಿಕರು ರಾತ್ರಿ ವೇಳೆ ಬಂದೂಕು ಹಿಡಿದು ಹಿಮದ ಮೇಲೆ ಮಲಗಿರುವ ಫೋಟೋವೊಂದನ್ನು ಟ್ವೀಟ್‌ ಮಾಡಿ, "ಸಿಯಾಚಿನ್ ಪ್ರದೇಶದಲ್ಲಿ ಭಾರತೀಯ ಸೈನಿಕರು -೫೦ ಡಿಗ್ರಿ ಸೆಲ್ಸಿಯಸ್‌ ಹವಾಮಾನದಲ್ಲಿ ರಾತ್ರಿ ತಂಗಿರುವುದು. ನಾವೆಲ್ಲರೂ ನಮ್ಮ ಸೈನಿಕರಿಗೆ ಗೌರವ ಸಲ್ಲಿಸಲೇಬೇಕು. ಈ ಚಿತ್ರವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ಶೇರ್‌ ಮಾಡಬೇಕು," ಎಂದು ಕ್ಯಾಷ್ಶನ್‌ ಬರೆದಿದ್ದರು.

ಕಿರನ್‌ ಖೇರ್‌ ಅವರು ಈ ಚಿತ್ರವನ್ನು ಪೋಸ್ಟ್‌ ಮಾಡುತ್ತಿದ್ದಂತೆ ಸಾವಿರಾರು ಮಂದಿ ಲೈಕ್‌ ಒತ್ತಿದರು, ಶೇರ್‌ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್‌ ಆಯಿತು. ಫೇಸ್‌ಬುಕ್‌ನ ಪ್ರಮುಖ ಪೇಜ್‌ಗಳಲ್ಲಿ ಈ ಫೋಟೋ ಕಾಣಿಸಿಕೊಂಡಿತು. ಕಿರನ್‌ ಖೇರ್‌ ಅವರು ಹೇಳಿದಂತೆ ಈ ಫೋಟೋ ವಾಸ್ತವವನ್ನು ‘ಆಲ್ಟ್‌ ನ್ಯೂಸ್‌’ ಪರಿಶೀಲಿಸಿದಾಗ ತಿಳಿದುಬಂದ ಸತ್ಯ ಏನೆಂದರೆ, ಈ ಫೋಟೋ ಭಾರತದ್ದೇ ಅಲ್ಲ ಎಂಬುದು! ಅಸಲಿಗೆ, ಈ ಚಿತ್ರ ರಷ್ಯಾ ಸೈನಿಕರದ್ದು. ೨೦೧೩ರಲ್ಲಿ ಈ ಫೋಟೋ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಚಿತ್ರದ ಹಿನ್ನೆಲೆ ಅರಿತೋ, ಅರಿಯದೆಯೋ ಕಿರನ್‌ ಖೇರ್‌ ಅವರು ಅದನ್ನು ಟ್ವೀಟ್‌ ಮಾಡಿ, ಸುಳ್ಳು ಸುದ್ದಿ ಹಬ್ಬಿಸಿದರು.

ಇದನ್ನೂ ಓದಿ : ಗೋಮೂತ್ರ ಸೇವಿಸಿದರೆ ವಿಷಯುಕ್ತ ದೇಹ ಪರಿಶುದ್ಧ ಆಗಲಿದೆಯಂತೆ!

ಆಡಳಿತಾರೂಢ ಬಿಜೆಪಿ ಜನಪ್ರತಿನಿಧಿಗಳು ರಾಷ್ಟ್ರೀಯವಾದದ ಹೆಸರಲ್ಲಿ ಸೈನಿಕರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜುಜು ಅವರೂ ಸೈನಿಕರ ಚಿತ್ರಗಳನ್ನು ಟ್ವೀಟ್‌ ಮಾಡಿ, ಸೈನಿಕರು ನೋಟು ಅಪನಗದೀಕರಣ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದ್ದರು.

ಜಗತ್ತಿನ ಅತಿ ಕ್ಲಿಷ್ಟ ಗಡಿಭೂಮಿ ಎಂದರೆ ಸಿಯಾಚಿನ್‌ ಪ್ರದೇಶ. ಇಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಭಾರತೀಯರೆಲ್ಲರೂ ಕೃತಜ್ಞರು. ಆದರೆ, ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡು, ರಾಜಕೀಯವಾಗಿ ಬೆಳೆಯಲು ಯತ್ನಿಸುತ್ತಿರುವುದು ಮಾತ್ರ ಅಪಾಯಕಾರಿ ಬೆಳವಣಿಗೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More