ಸಚಿವೆ ಸ್ಮೃತಿ ಇರಾನಿ ಹೇಳಿದಂತೆ ಶ್ರೀನಗರದಿಂದ ಲೇಹ್‌ಗೆ ೧೫ ನಿಮಿಷ ಪ್ರಯಾಣವೇ?

ಜೋಜಿಲ ಸುರಂಗ ಯೋಜನೆಯಿಂದಾಗಿ ೩.೫ ಗಂಟೆ ಪ್ರಯಾಣದ ಶ್ರೀನಗರ-ಲೇಹ್‌ ಹಾದಿಯನ್ನು ೧೫ ನಿಮಿಷದಲ್ಲಿ ಕ್ರಮಿಸಬಹುದು ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್‌ ಮಾಡಿದ್ದರು. ಆದರೆ, ಈ ಮಾರ್ಗ ನಿರ್ಮಾಣವಾದರೆ ೩.೫ ಗಂಟೆಯಲ್ಲಿ ಕೇವಲ ೧೫ ನಿಮಿಷ ಉಳಿತಾಯವಾಗಲಿದೆ ಅಷ್ಟೆ!

ಜಮ್ಮು-ಕಾಶ್ಮೀರದ ಜೋಜಿಲ ಸುರಂಗ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಶ್ರೀನಗರದಿಂದ ಲೇಹ್‌ಗೆ ಕೇವಲ ೧೫ ನಿಮಿಷದಲ್ಲಿ ಪ್ರಯಾಣಿಸಬಹುದು ಎಂದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಜ.೪ರಂದು ಟ್ವೀಟ್‌ ಮಾಡಿದ್ದರು. ಶ್ರೀನಗರದಿಂದ ೨೫೬ ಕಿಮೀ ದೂರದಲ್ಲಿರುವ ಲೇಹ್‌ಗೆ ಸುರಂಗಮಾರ್ಗ ನಿರ್ಮಿಸಿದರೆ, ಕೇವಲ ೧೫ ನಿಮಿಷದಲ್ಲಿ ಹೋಗಲು ಹೇಗೆ ಸಾಧ್ಯ ಎಂದು ಟ್ವೀಟಿಗರು ಕೇಂದ್ರ ಸಚಿವೆ ವಿರುದ್ಧ ಹರಿಹಾಯ್ದಿದಿದ್ದಾರೆ.

ಎಲ್ಲ ಕಾಲದಲ್ಲೂ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲದ ಹಾಗೆ ಶ್ರೀನಗರ, ಕಾರ್ಗಿಲ್‌ ಮತ್ತು ಲೇಹ್‌ ನಗರಕ್ಕೆ ಸಂಪರ್ಕ ಕಲ್ಪಿಸಲು ೬,೦೮೯ ಕೋಟಿ ರು. ವೆಚ್ಚದಲ್ಲಿ ಜೋಜಿಲ ಬಳಿ ಸುರಂಗಮಾರ್ಗ ನಿರ್ಮಿಸಲು ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ್ದ ಸಚಿವೆ ಸ್ಮೃತಿ ಇರಾನಿ ಅವರು, ಈ ಸುರಂಗಮಾರ್ಗ ನಿರ್ಮಾಣವಾದರೆ ೩.೫ ಗಂಟೆ ಪ್ರಯಾಣದ ಶ್ರೀನಗರ-ಲೇಹ್‌ ಹಾದಿಯನ್ನು ಕೇವಲ ೧೫ ನಿಮಿಷದಲ್ಲಿ ಕ್ರಮಿಸಬಹುದು ಎಂದು ಹೇಳಿದ್ದರು. ಆದರೆ, ಈ ಸುರಂಗಮಾರ್ಗ ನಿರ್ಮಾಣವಾದರೆ ೩.೫ ಗಂಟೆಯ ಪ್ರಯಾಣದಲ್ಲಿ ೧೫ ನಿಮಿಷ ಉಳಿತಾಯವಾಗಲಿದೆ ಅಷ್ಟೆ.

ಮಾಹಿತಿ ಖಾತೆ ಸಚಿವೆಯಾಗಿಯೂ ಸರಿಯಾಗಿ ಮಾಹಿತಿ ಅರ್ಥೈಸಿಕೊಳ್ಳದೆ ತಪ್ಪು ಟ್ವೀಟ್‌ ಮಾಡಿದ್ದರಿಂದ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ತಪ್ಪನ್ನು ಸಾಮಾನ್ಯ ಜನರು ಮಾಡಿದ್ದರೆ ಕ್ಷಮಿಸಬಹುದಿತ್ತು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಮಂತ್ರಿಗಳೇ ಹೀಗೆ ಮಾಡಿದರೆ ಹೇಗೆ? ನಿಮ್ಮ ತಪ್ಪನ್ನು ಬೇಗ ಸರಿಪಡಿಸಿಕೊಳ್ಳಿ,” ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ : ಮುಸ್ಲಿಂ ಮಹಿಳೆಯರ ಸ್ವತಂತ್ರ ಹಜ್‌ ಯಾತ್ರೆಯ ಕ್ರೆಡಿಟ್‌ ಯಾರಿಗೆ ಸೇರಬೇಕು?

ಟ್ವಿಟರ್‌ನಲ್ಲಿ ಜನರು ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಸ್ಮೃತಿ ಇರಾನಿ, ತಾವು ಮಾಡಿದ್ದ ಟ್ವೀಟ್‌ ಡಿಲಿಟ್‌ ಮಾಡಿದ್ದಾರೆ. ಇವರು ಟ್ವೀಟ್‌ ಮಾಡಿದ್ದನ್ನೇ ಸತ್ಯವೆಂದು ನಂಬಿ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆ ಕೂಡ ಇದೇ ತಲೆಬರಹದಡಿ ವರದಿ ಪ್ರಕಟಿಸಿತ್ತು!

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More