ನೃತ್ಯ ಮಾಡುತ್ತಿದ್ದ ಮಕ್ಕಳ ಮೇಲೆ ಕಬ್ಬಿಣದ ಕಂಬ ಬಿದ್ದ ಘಟನೆ ನಡೆದದ್ದು ಯಾವಾಗ?

‘ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ ಮಕ್ಕಳ ಮೇಲೆ ಕಬ್ಬಿಣದ ಕಂಬ ಬಿತ್ತು,’ ಎಂದು ವಿಡಿಯೋ ಸಹಿತ ಸುದ್ದಿಯೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.  ಆದರೆ, ಈ ಘಟನೆಯ ಅಸಲಿಯತ್ತೇ ಬೇರೆ ಇದೆ. ಏನದು?

ಕನ್ನಡ ಚಿತ್ರ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದ ಶಾಲಾ ಮಕ್ಕಳ ಮೇಲೆ ವೇದಿಕೆಯ ಹಿಂಬದಿ ಇದ್ದ ಕಬ್ಬಿಣದ ಬೃಹತ್‌ ಕಂಬ ಏಕಾಏಕಿ ಕುಸಿದು ಬೀಳುವ ಆಘಾತಕಾರಿ ವಿಡಿಯೋವೊಂದು ಕಳೆದ ವಾರದಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, "ಘಟನೆಯಲ್ಲಿ ೯ ಮಕ್ಕಳು ಅಸುನೀಗಿದ್ದು, ಮೂರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎಲ್ಲ ಪೋಷಕರಿಗೂ ತಲುಪವವರೆಗೂ ಈ ವಿಡಿಯೋ ಶೇರ್‌ ಮಾಡಿ,” ಎಂಬ ಒಕ್ಕಣೆಯೂ ಅದರಲ್ಲಿದೆ.

ಈ ಘಟನೆ ನಡೆದಿದ್ದು ನಿಜಕ್ಕೂ ದುರಾದೃ‍ಷ್ಟಕರ. ಆದರೆ, ವಾಟ್ಸಾಪ್‌ನಲ್ಲಿ ತಿಳಿಸಿದಂತೆ ಈ ಅವಘಡ ನಡೆದಿದ್ದು ಇತ್ತೀಚೆಗಲ್ಲ. ಎರಡು ವರ್ಷದ ಹಿಂದೆ. ಬೆಂಗಳೂರಿನ ಬಸವೇಶ್ವರ ನಗರದ ಮ್ಯಾಕ್ಸ್‌ ಮುಲ್ಲರ್‌ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿತ್ತು. ಅವಘಡದಲ್ಲಿ ಯಾವುದೇ ಪ್ರಾಣಾಪಾಯವೂ ಸಂಭವಿಸಿರಲಿಲ್ಲ. ಇಬ್ಬರು ಶಿಕ್ಷಕರು ಸೇರಿದಂತೆ ೯ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವಷ್ಟೇ. ಘಟನೆ ಸಂಬಂಧ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದನ್ನೂ ಓದಿ : ಜಿಗ್ನೇಶ್‌ ಮೇವಾನಿಯ ಸುದ್ದಿಗೋಷ್ಠಿಯನ್ನು ಕಾಂಗ್ರೆಸ್‌ ಆಯೋಜಿಸಿದ್ದು ಸತ್ಯವೇ?

೨೦೧೬ರ ಫೆಬ್ರವರಿಯಲ್ಲಿ ಮ್ಯಾಕ್ಸ್‌ಮುಲ್ಲರ್‌ ಶಾಲೆ ಡಾ. ಬಿ ಆರ್‌ ಅಂಬೇಡ್ಕರ್‌ ಮೈದಾನದಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿತ್ತು. ವೇದಿಕೆ ಮೇಲೆ ಅಲಂಕಾರ ಮತ್ತು ಬೆಳಕಿಗಾಗಿ ದೊಡ್ಡದಾದ ಕಬ್ಬಿಣದ ಕಂಬವನ್ನು ಕಮಾನಿನ ರೀತಿ ನಿರ್ಮಿಸಲಾಗಿತ್ತು. ಆದರೆ, ಕಾರ್ಯಕ್ರಮ ನಡೆಯುತ್ತಿರುವಾಗಲೇ ಆ ಕಂಬ, ಮಕ್ಕಳ ಮೇಲೆಯೇ ಬಿದ್ದಿತ್ತು. ಆ ವಿಡಿಯೋ ಈಗಲೂ ಯೂಟ್ಯೂಬ್‌ನಲ್ಲಿ ಇದೆ.

ವಾಜಪೇಯಿ ನಿಧನದ ಸಂದರ್ಭದಲ್ಲಿ ಪ್ರಧಾನಿ ಮೋದಿ ನಗುತ್ತ ನಿಂತಿದ್ದು ನಿಜವೇ?
ಪ್ರವಾಹದಿಂದ ಕಂಗಲಾದ ರಾಜ್ಯಗಳಿಗೆ ತಲೆನೋವಾದ ಸುಳ್ಳು ಸುದ್ದಿಗಳ ಅವಾಂತರ
ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!
Editor’s Pick More