ಹರ್ಯಾಣದ ಗುರಗಾಂವ್‌ನಲ್ಲಿ ಶಾಲಾ ಬಸ್‌ ಮೇಲೆ ನಿಜಕ್ಕೂ ಕಲ್ಲು ತೂರಿದವರು ಯಾರು?

ಗುರಗಾಂವ್‌ನಲ್ಲಿ ಶಾಲೆಯ ಬಸ್‌ವೊಂದರ ಮೇಲೆ ಕಲ್ಲು ತೂರಿದ ಪ್ರಕರಣ ಸಂಬಂಧ ಸದ್ದಾಂ, ನದೀಮ್‌, ಫಿರೋಜ್‌, ಅಮೀರ್‌ ಹಾಗೂ ಆಶ್ರಫ್‌ ಎಂಬುವವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡಿತು. ಆದರೆ, ಈ ಸುದ್ದಿ ಸುಳ್ಳು ಎಂದು ಹರ್ಯಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ

ಹರ್ಯಾಣದ ಗುರಗಾಂವ್‌ನಲ್ಲಿ ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತ್’ ಚಿತ್ರ ಬಿಡುಗಡೆ ವಿರೋಧಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆ ವೇಳೆ, ಕೆಲವರು ಕಲ್ಲು ತೂರಿದ್ದರಿಂದ ಶಾಲಾ ಬಸ್‌ನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದವು. ಬಸ್‌ನೊಳಗಿದ್ದ ಕೆಲ ಮಕ್ಕಳಿಗೂ ಗಾಯಗಳಾಗಿದ್ದವು. ಈ ಘಟನೆಯ ನಂತರ ಕರ್ಣಿಸೇನಾ ಸಂಘಟನೆ, “ಈ ಘಟನೆ ಸಂಬಂಧ ಪೊಲೀಸರು ೧೮ ಮಂದಿಯನ್ನು ಬಂಧಿಸಿದ್ದು, ಅವರಲ್ಲಿ ಐದು ಮಂದಿ ಮುಸ್ಲಿಂ ಯುವಕರೂ ಇದ್ದಾರೆ. ಅವರ ಹೆಸರು, ಸದ್ದಾಂ, ನದೀಮ್‌, ಫಿರೋಜ್‌, ಅಮೀರ್‌ ಹಾಗೂ ಆಶ್ರಫ್‌,” ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟತು.

ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಗುರಗಾಂವ್‌ ಪೊಲೀಸ್‌ ಕಮಿಷನರ್ ಸಂದೀಪ್‌ ಕಿರ್ವಾರ್‌ ಅವರು, “ಗಲಭೆ ಸಂಬಂಧ ವಿಚಾರಣೆ ನಡೆಯುತ್ತಿದೆ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಮುಸ್ಲಿಂ ಯುವಕರನ್ನು ಬಂಧಿಸಿಲ್ಲ. ಅದು ಶುದ್ಧ ಸುಳ್ಳು,” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರ ಭಾಸ್ಕರ್‌ ಮಾತು ಸತ್ಯವೇ?

ಆದಾಗ್ಯೂ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಟ್ವಿಟರ್‌ನಲ್ಲಿ ಈ ಸಂದೇಶ ದೇಶಾದ್ಯಂತ ಹಬ್ಬಿಸಲಾಗಿದೆ. ಬಲಪಂಥೀಯ ವಿಚಾರಧಾರೆಯ ಖಾತೆಗಳಿಂದ ಈ ಸಂದೇಶವನ್ನು ವೈರಲ್‌ ಮಾಡಲಾಗಿದೆ.

ವಾಜಪೇಯಿ ನಿಧನದ ಸಂದರ್ಭದಲ್ಲಿ ಪ್ರಧಾನಿ ಮೋದಿ ನಗುತ್ತ ನಿಂತಿದ್ದು ನಿಜವೇ?
ಪ್ರವಾಹದಿಂದ ಕಂಗಲಾದ ರಾಜ್ಯಗಳಿಗೆ ತಲೆನೋವಾದ ಸುಳ್ಳು ಸುದ್ದಿಗಳ ಅವಾಂತರ
ವಾಜಪೇಯಿ ಅವರಿಗೆ ಏಮ್ಸ್ ವೈದ್ಯರ ಅಂತಿಮ ನಮನದ ಫೋಟೊ ಅಸಲಿ ಅಲ್ಲ!
Editor’s Pick More