ಭಾಕ್ರಾ ಡ್ಯಾಂ ಬಗ್ಗೆ ಅಶೋಕ್ ಗೆಹ್ಲೋಟ್ ಮಾತಾಡಿದ್ದರ ಹಿಂದಿನ ಸತ್ಯವೇನು?

ಜನಸಂಘದ ಅಸಂಬದ್ಧ ಟೀಕೆಗಳನ್ನು ಪ್ರಸ್ತಾಪಿಸಿದ್ದ ಗೆಹ್ಲೋಟ್ ಅವರ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಈ ಬಗ್ಗೆ ಸ್ವತಃ ಅಶೋಕ್ ಗೆಹ್ಲೋಟ್ ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ಫ್ಯಾಕ್ಟ್ ಚೆಕ್ ಇಲ್ಲಿದೆ

“ನೀರಿನಿಂದ ವಿದ್ಯುತ್ ತೆಗೆದ ಮೇಲೆ ನೀರು ಹೊಲ ಗದ್ದೆಗಳಿಗೆ ಹರಿಸಲಾಗುತ್ತದೆ. ಆದರೆ ಆ ನೀರಿನಲ್ಲಿ ಶಕ್ತಿಯೇ(ವಿದ್ಯುತ್) ಇರುವುದಿಲ್ಲ. ಆ ನೀರು ಕೃಷಿ ಭೂಮಿಗೆ ಹೋದರೆ ಉಪಯೋಗವಿಲ್ಲ” ಹೀಗೆಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಹೇಳಿದ್ದರೆನ್ನಲಾದ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಗೆಹ್ಲೋಟ್ ಮಾತಾಡಿದ ಆ ೧೬ ಸೆಕೆಂಡುಗಳ ವಿಡಿಯೋವನ್ನು ರಾಷ್ಟ್ರೀಯ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರೀಟ್ವೀಟ್ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಮಾತನಾಡಿದ್ದೇನು ಹಾಗೂ ತಿರುಚಲಾದ ಅಂಶಗಳೇನು ಎಂಬುದನ್ನು ಆಲ್ಟ್ ನ್ಯೂಸ್ ಬಹಿರಂಗ ಪಡಿಸಿದೆ.

ಮೈ ಗವರ್ನಮೆಂಟ್‌ ಮಾಜಿ ನಿರ್ದೇಶಕ ಅಖಿಲೇಶ್ ಮಿಶ್ರಾ ಕೂಡ ತಿರುಚಲಾದ ವಿಡಿಯೋವನ್ನು ರೀಟ್ವೀಟ್ ಮಾಡಿಕೊಂಡಿದ್ದು ಅದು ಸುಳ್ಳು ಎಂದು ಎಂದು ತಿಳಿದ ಮೇಲೆ ಡಿಲೀಟ್ ಮಾಡಿದ್ದಾರೆ. ಆ ವಿಡಿಯೋ ಟ್ವೀಟ್‌ ನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿರುವ ಇತರರು ರೀಟ್ವೀಟ್ ಮಾಡಿದ್ದಾರೆ.

ಬಿಜೆಪಿ ಬೆಂಬಲಿಗರು ಹಾಗೂ ಪ್ರಧಾನಿ ಮೋದಿ ಅನುಯಾಯಿಗಳು ಗೆಹ್ಲೋಟ್ ಅವರೇ ಮಾತಾಡಿದ್ದಾರೆಂದು ಆ ವಿಡಿಯೋ ಕ್ಲಿಪ್ ಟ್ವಿಟ್ಟರ್‌ನಲ್ಲಿ #ScientistGehlot ಹ್ಯಾಷ್‌ಟ್ಯಾಗ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ. ಅಲ್ಲದೇ ಫೇಸ್‌ಬುಕ್‌ನಲ್ಲಿ ಶೇರ್ ಮಾಡಲಾಯಿತು. ಗೆಹ್ಲೋಟ್ ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಆ ವಿಡಿಯೋ ಮುಂದಿಟ್ಟುಕೊಂಡು ವ್ಯಂಗ್ಯ ಮಾಡಲಾಯಿತು.

ಆದರೆ ೧೬ ಸೆಕೆಂಡುಗಳಿಗೂ ಅಧಿಕ ಸಮಯ ಮಾತಾಡಿದ ಅಶೋಕ್ ಗೆಹ್ಲೋಟ್ ಅವರ ಮೂಲ ವಿಡಿಯೋವನ್ನು ಆಲ್ಟ್ ನ್ಯೂಸ್ ಪ್ರಕಟಿಸಿ ಸತ್ಯಾಂಶವನ್ನು ಬಹಿರಂಗ ಮಾಡಿದೆ. ಮೇ ೨೬ ರಂದು ಕಾಂಗ್ರೆಸ್ ಪಕ್ಷ ಕರೆದಿದ್ದ ಪ್ರೆಸ್ ಮೀಟ್‌ನಲ್ಲಿ ಅಶೋಕ್ ಗೆಹ್ಲೋಟ್ ಮಾತಾಡಿದ್ದರು. ಆಗಿನ ಜನ ಹರಡುತ್ತಿದ್ದ ವದಂತಿಗಳನ್ನು ಪ್ರಸ್ತಾಪಿಸಿದ್ದರು. ಭಾಕ್ರಾ ಡ್ಯಾಂ ಅನ್ನು ಅಂದಿನ ಪ್ರಧಾನಿ ಜವಾಹರ್‌ ಲಾಲ್ ನೆಹರು ಅವರು ಉದ್ಘಾಟಿಸಿ ಆ ಸಮಯದಲ್ಲಿ ಜನಸಂಘ್ ಹೇಗೆ ಸುಳ್ಳುಸುದ್ದಿ ಹರಡುತ್ತಿತ್ತು ಎಂದು ಹೇಳುತ್ತಾ, “ ಭಾಕ್ರಾ ಡ್ಯಾಂ ಅನ್ನು ಕಟ್ಟಲಾಗಿದೆ. ಈ ಅಣೆಕಟ್ಟಿಗೆ ಹೈಡ್ರೋ ವಿದ್ಯುತ್ ಪ್ಲಾಂಟ್ ಸ್ಥಾಪಿಸಲಾಗುತ್ತಿದೆ. ಯೋಜನೆಯನ್ನು ತಂದಿದ್ದರು. ಇದರ ಕುರಿತಾಗಿ ಜನಸಂಘದ ಸದಸ್ಯರು ನೆಹರು ಅವರಿಗೆ ಬುದ್ಧಿ ಇಲ್ಲ, ನೀರಿನಿಂದ ವಿದ್ಯುತ್ ತೆಗೆದರೆ ನೀರಿನಲ್ಲಿ ಏನೂ ಉಳಿಯುವುದಿಲ್ಲ ಅದೇ ನೀರನ್ನು ಕೃಷಿಗೆ ಹರಿಯಬಿಡಲಾಗುತ್ತದೆ” ಎಂದು ವದಂತಿ ಹರಡುವ ಪ್ರಯತ್ನ ಮಾಡುತ್ತಿದ್ದರು " ಎಂದು ವಿವರಿಸಿದ್ದರು.

देश में करीब 6 लाख गांव हैं, यदि 18 हजार गांवों में मोदी जी ने बिजली पहुंचाई तो फिर 5 लाख 82 हजार गांवों में बिजली किसने पहुंचाई? मोदी जी झूठ बोलने की हदें पार कर चुके हैं।

Posted by Ashok Gehlot on Saturday, May 26, 2018

ಆದರೆ ಗೆಹ್ಲೋಟ್‌ ಅವರು ವಿದ್ಯುತ್‌ ಬಗ್ಗೆ ಅಸಂಬದ್ಧವಾಗಿ ಮಾತನಾಡಿದಂತೆ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಈ ಬಗ್ಗೆ ಸ್ವತಃ ಅಶೋಕ್ ಗೆಹ್ಲೋಟ್ ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More