ರಾಜ್ಯ ಪಠ್ಯಕ್ರಮದಲ್ಲಿ ಮತಾಂತರಕ್ಕೆ ಪ್ರೋತ್ಸಾಹ ಎಂಬ ವರದಿ ಹಿಂದಿನ ಸತ್ಯಾಸತ್ಯತೆ

‌9 ನೇ ತರಗತಿಯ ಇತಿಹಾಸ ವಿಭಾಗದ ರಾಜ್ಯ ಪಠ್ಯಕ್ರಮದಲ್ಲಿ ‘ಕ್ರಿಶ್ಚಿಯನ್‌ ಹಾಗೂ ಇಸ್ಲಾಂ ಧರ್ಮ’ ಎಂಬ ಶೀರ್ಷಿಕೆಯ ಅಧ್ಯಾಯದ ಬಗ್ಗೆ ಪೋಸ್ಟ್‌‌ ಕಾರ್ಡ್‌ ಜಾಲತಾಣ ವರದಿಯೊಂದನ್ನು ಪ್ರಕಟಿಸಿದೆ. ಇದರ ಹಿಂದಿನ ಸತ್ಯವೇನು ಎಂಬುದನ್ನು ‘ಆಲ್ಟ್‌ ನ್ಯೂಸ್‌’ ಪರಿಶೀಲಿಸಿದೆ. 

ಮತಾಂತರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರ 9 ನೇ ತರಗತಿಯ ಪಠ್ಯಕ್ರಮದಲ್ಲಿ ಅಧ್ಯಾಯವೊಂದನ್ನು ಅಳವಡಿಸಿದೆ ಎಂಬ ‘ಪೋಸ್ಟ್‌‌ ಕಾರ್ಡ್‌‌ ವೆಬ್‌ಸೈಟ್‌’‌ ವರದಿ ಸತ್ಯಕ್ಕೆ ದೂರವೆಂದು ತಿಳಿದುಬಂದಿದೆ. ಈ ವರದಿಯ ಸತ್ಯಾಸತ್ಯತೆ ತಿಳಿಯಲು ‘ಆಲ್ಟ್‌‌‌‌‌ ನ್ಯೂಸ್‌’ ಪರಿಶೀಲನೆ ನಡೆಸಿದ್ದು, “ಪೋಸ್ಟ್‌‌ ಕಾರ್ಡ್‌‌ ವರದಿಯು ಪೂರ್ವಾಗ್ರಹದಿಂದ ಕೂಡಿದ್ದು, ಇದರ ಹಿಂದೆ ದುರುದ್ದೇಶವಿದೆ,” ಎಂದು ಹೇಳಿದೆ. ಇದರ ಸ್ಪಷ್ಟೀಕರಣಕ್ಕೆ ಸಾಕ್ಷ್ಯಗಳನ್ನು ಒಳಗೊಂಡಿರುವ ವರದಿ ಪ್ರಕಟಿಸಿದೆ. ಪೋಸ್ಟ್‌‌ ಕಾರ್ಡ್‌‌ ವೆಬ್‌ಸೈಟ್‌ ನಕಲಿ ಸುದ್ದಿಯನ್ನು ಪ್ರಕಟಿಸುವ ಮೂಲಕ ಅನ್ಯಧರ್ಮಗಳ ಬಗ್ಗೆ ದ್ವೇಷ ಹರಡುವ ಕಾರ್ಯ ಮುಂದುವರೆಸಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.

ರೋಮ್‌ ಮತ್ತು ವ್ಯಾಟಿಕನ್‌ಗಳ ಆಜ್ಞೆ ಪಾಲಿಸುವ ಕಾಂಗ್ರೆಸ್‌ ಹೈಕಮಾಂಡ್‌ ಆದೇಶದಂತೆ ಮತಾಂತರಕ್ಕೆ ಪ್ರಚೋದಿಸುವ ಅಧ್ಯಾಯವನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಪೋಸ್ಟ್‌ ಕಾರ್ಡ್‌ ಪ್ರಕಟಿಸುವ ಲೇಖನದಲ್ಲಿ ವಿವರಿಸಲಾಗಿದೆ. ಮುಂದುವರೆದು, “ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಭಾರತವನ್ನು ಕ್ರಿಶ್ಚಿಯನ್‌ ಪ್ರಾಬಲ್ಯದ ದೇಶವನ್ನಾಗಿ ಪರಿವರ್ತಿಸಲು ಮಿಷನರಿ ಹಾಗೂ ಚರ್ಚುಗಳಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೊಂದು ಕಡೆ, ತಮ್ಮ ಪಕ್ಷದ ಮತ ಬ್ಯಾಂಕ್‌ ಅನ್ನು ಭದ್ರವಾಗಿಟ್ಟುಕೊಳ್ಳಲು ಇಸ್ಲಾಮೀಕರಣಕ್ಕೆ ಬೆಂಬಲವಾಗಿ ನಿಂತಿದ್ದಾರೆ,” ಎಂದು ಹೇಳಲಾಗಿದೆ.

‌9 ನೇ ತರಗತಿಯ ಇತಿಹಾಸ ವಿಭಾಗದ ರಾಜ್ಯ ಪಠ್ಯಕ್ರಮದಲ್ಲಿ “ಕ್ರಿಶ್ಚಿಯನ್‌ ಹಾಗೂ ಇಸ್ಲಾಂ ಧರ್ಮ” ಎಂಬ ಶೀರ್ಷಿಕೆಯಡಿ ಇರುವ ಆರು ಪುಟಗಳ ಅಧ್ಯಾಯವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಮಾಡಲಾಗುತ್ತಿದೆ. ಆದರೆ, ಪೋಸ್ಟ್‌‌ ಕಾರ್ಡ್‌ನ ಈ ಲೇಖನದಲ್ಲಿರುವ ಅಂಶಗಳ ಹಿನ್ನೆಲೆಗಳನ್ನು ಪರಿಶೀಲಿಸಿದಾಗ ಸತ್ಯಾಸತ್ಯತೆ ಏನೆಂಬುದು ತಿಳಿಬರುತ್ತದೆ. 9 ನೇ ತರಗತಿಯ ಇತಿಹಾಸ ವಿಭಾಗದ ಅಧ್ಯಾಯಗಳನ್ನು ಕಾಲಕ್ಕೆ ಅನುಗುಣವಾಗಿ ಅಳವಡಿಸಲಾಗಿದ್ದು, 8 ನೇ ತರಗತಿಯಲ್ಲಿ ಪುರಾತನ, 9 ನೇ ತರಗತಿಯಲ್ಲಿ ಮಧ್ಯಕಾಲೀನ ಹಾಗೂ 10 ನೇ ತರಗತಿಯಲ್ಲಿ ಆಧುನಿಕ ಇತಿಹಾಸವಿರುವುದು ಕಂಡುಬಂದಿದೆ.

ಪುರಾತನ ಇತಿಹಾಸದಲ್ಲಿ ಭಾರತದ ಪೂರ್ವ ಚರಿತ್ರೆ, ಗ್ರೀಕ್, ರೋಮನ್ ಮತ್ತು ಅಮೆರಿಕನ್ ನಾಗರಿಕತೆಗಳು, ವೈದಿಕ ಅವಧಿ, ಬೌದ್ಧ ಮತ್ತು ಜೈನ ಧರ್ಮದ ಬೆಳವಣಿಗೆ, ಮೌರ್ಯ, ಪಲ್ಲವ ಮತ್ತು ಚೋಳ ಸಾಮ್ರಾಜ್ಯಗಳ ಬಗೆಗಿನ ಅಧ್ಯಾಯಗಳಿವೆ.

ಮಧ್ಯಕಾಲೀನ ಇತಿಹಾಸ 7 ನೇ ಶತಮಾನದಿಂದ 16 ನೇ ಶತಮಾನದವರೆಗಿನ ವಿವರಗಳನ್ನು ಹೊಂದಿದೆ. ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ, ಭಕ್ತಿ ಚಳುವಳಿ, ಗುರು ನಾನಕ್, ಕಬೀರ, ಶಂಕರಾಚಾರ್ಯ, ಮಾಧವಚಾರ್ಯ, ರಾಮಾನುಜಾಚಾರ್ಯ, ಬಸವೇಶ್ವರ, ಬಹುಮಣಿ ಮತ್ತು ವಿಜಯನಗರ ಸಾಮ್ರಾಜ್ಯಗಳ ಬಗೆಗಿನ ಅಧ್ಯಾಯಗಳಿವೆ.

ಆಧುನಿಕ ಇತಿಹಾಸವು 17 ನೇ ಶತಮಾನದಿಂದ ಆರಂಭವಾಗುತ್ತದೆ. ರಾಜಾ ರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಅಲಿಗಢ ಚಳವಳಿ, ರಾಮಕೃಷ್ಣ ಮಿಷನ್, ಪೆರಿಯಾರ್ ಬಗೆಗಿನ ವಿವರಗಳಿವೆ. 1857 ರ ದಂಗೆ, ರಾಷ್ಟ್ರೀಯತಾವಾದಿ ಚಳುವಳಿಯ ಬೆಳವಣಿಗೆ, ಸ್ವಾತಂತ್ರ್ಯದ ನಂತರದ ಘಟನೆಗಳ ಬಗೆಗಿನ ವಿವರಗಳನ್ನು ಹೊಂದಿರುವ ಅಧ್ಯಾಯಗಳನ್ನು ಆಧುನಿಕ ಇತಿಹಾಸದಲ್ಲಿ ಸೇರಿಸಲಾಗಿದೆ. ಕೇವಲ ಮಧ್ಯಕಾಲೀನ ಇತಿಹಾಸದ ಆರು ಪುಟಗಳ ಅಧ್ಯಾಯವೊಂದನ್ನು ಗುರಿಯಾಗಿಸಿ ಪ್ರಕಟಿಸಲಾಗಿರುವ ಲೇಖನವು ನಿಜ ವಿವರಗಳನ್ನು ಉದ್ದೇಶಪೂರಕವಾಗಿ ಮುಚ್ಚಿಡುವ ಪ್ರಯತ್ನ ಮಾಡಿದೆ ಎಂದು ತಿಳಿದುಬರುತ್ತದೆ.

ಇದನ್ನೂ ಓದಿ : ನೀಲಮಣಿ ರಾಜು ವರ್ಗಾವಣೆ ಕುರಿತ ಸುಳ್ಳು ಸುದ್ದಿ ಹರಡಿದ ಪೋಸ್ಟ್‌ ಕಾರ್ಡ್‌

ಈ ಹಿಂದೆ ರಾಜ್ಯ ಬಿಜೆಪಿ ಮುಖಂಡರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ, 2014 ರಲ್ಲಿ ರಾಜ್ಯ ಸರ್ಕಾರವು ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ 1 ರಿಂದ 10 ನೇ ತರಗತಿಗಳ ಪಠ್ಯಕ್ರಮವನ್ನು ಪರಿಶೀಲಿಸಲು ಸಮಿತಿಯನ್ನು ನೇಮಕ ಮಾಡಿತ್ತು. ಪಠ್ಯಕ್ರಮವನ್ನು ಪರಿಶೀಲಿಸಿ ಹಾಗೂ ಪುರಸ್ಕರಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿತ್ತು.

ಪಠ್ಯಕ್ರಮಕ್ಕೆ ಒಪ್ಪಿಗೆ ಸೂಚಿಸಿದ್ದ ಎನ್‌ಸಿಇಆರ್‌ಟಿ, “ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ಲಿಂಗ, ಜನಾಂಗ ಹಾಗೂ ಧಾರ್ಮಿಕತೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷಪಾತವಿಲ್ಲ,” ಎಂದು ತಿಳಿಸಿತ್ತು. 2005 ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿಯಲ್ಲಿ ರಾಜ್ಯದ ಪಠ್ಯವನ್ನು ರೂಪಿಸಲಾಗಿದ್ದನ್ನು ಇಲ್ಲಿ ಗಮನಿಸಬಹುದು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More