ರೋಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದಾಗ ಪ್ರಿಯಾಂಕ ಚೋಪ್ರಾ ಬುರ್ಖಾ ಧರಿಸಿದ್ದರೆ?

ಬಾಂಗ್ಲಾ ರೋಹಿಂಗ್ಯ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕ ಚೋಪ್ರಾ ಬುರ್ಖಾ ಧರಿಸಿದ್ದರು ಎಂಬ ಅಡಿಬರಹದ ಫೋಟೋದ ಹಿಂದಿನ ಸತ್ಯವೇನು ಎಂಬುದನ್ನು ಆಲ್ಟ್ ನ್ಯೂಸ್ ಬಹಿರಂಗಪಡಿಸಿದೆ

ಮೇ 2018ರಲ್ಲಿ ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಯುನಿಸೆಫ್‌ ರಾಯಭಾರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಭೇಟಿ ನೀಡಿ ಅಲ್ಲಿರುವ ನಿರಾಶ್ರಿತರ ನೋವಿಗೆ ಕಿವಿಯಾಗಿದ್ದರು. ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಕ್ಕೆ ಹೋಗುವ ವೇಳೆ ನಟಿ ಪ್ರಿಯಾಂಕ ಚೋಪ್ರಾ ಬುರ್ಖಾ ಧರಿಸಿದ್ದರೇ? ಎಂಬ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಬುರ್ಖಾ ಧರಿಸಿರುವ ಪ್ರಿಯಾಂಕ ಚೋಪ್ರಾ ಫೋಟೋದ ಕೆಳಭಾಗದಲ್ಲಿ, ‘ಬಾಂಗ್ಲಾ ರೋಹಿಂಗ್ಯ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕ ಚೋಪ್ರಾ ಬುರ್ಖಾ ಧರಿಸಿದ್ದರು’ ಎಂಬ ಅರ್ಥದಲ್ಲಿ ಅಡಿಬರಹವನ್ನು ನೀಡಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಶೇರ್ ಮಾಡಲಾಗುತ್ತಿದೆ

ಯೋಗಿ ಆದಿತ್ಯಾನಾಥ್ ಕಿ ಸೇನಾ ಫೇಸ್ ಬುಕ್ ಪುಟದಿಂದ ಈ ಫೋಟೋವನ್ನು ಜುಲೈ 5ರಂದು ಪೋಸ್ಟ್ ಮಾಡಲಾಗಿದ್ದು, 11 ಸಾವಿರಕ್ಕೂ ಹೆಚ್ಟು ಶೇರ್ ಆಗಿದೆ. ನಟಿಯರು ಭಾರತದಲ್ಲಿ ಯಾವ ಬಟ್ಟೆಯನ್ನಾದರೂ ಧರಿಸಬಹುದು ಆದರೆ ರೋಹಿಂಗ್ಯಾನಿರಾಶ್ರಿತರನ್ನು ಭೇಟಿಯಾಗುವ ಸಂದರ್ಭದಲ್ಲಿ ಬುರ್ಖಾ ಧರಿಸುತ್ತಾರೆ ಎಂಬ ಅಡಿಬಹರವನ್ನು ಈ ಫೋಟೋಗೆ ಹಾಕಲಾಗಿತ್ತು. ಟ್ವಿಟ್ಟರ್ ನಲ್ಲೂ ಈ ಫೋಟೋವನ್ನು ಶೇರ್ ಮಾಡಲಾಗಿದೆ.

ಫೇಸ್ ಬುಕ್ ನಲ್ಲಿ ಶೇರ್ ಆಗುತ್ತಿರುವ ಈ ಪೋಟೋಗ್ರಾಫ್ ಮೂಲ ಯಾವುದು ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದ ಸತ್ಯಾಸತ್ಯತೆಯ ಬೆನ್ನುಹತ್ತಿರುವ ಆಲ್ಟ್ ನ್ಯೂಸ್ ತಂಡ, ಇದೀಗ ಫೋಟೋದ ಹಿಂದಿನ ಮೂಲವನ್ನು ಬಹಿರಂಗಪಡಿಸಿದೆ.

2011ರಲ್ಲಿ ವಿಶಾಲ್ ಭಾರದ್ವಾಜ್ ನಿರ್ದೇಶನದ 'ಸಾತ್ ಕೂನ್ ಮಾಫ್' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಬುರ್ಖಾ ಧರಿಸಿದ್ದರು. 2010ರಲ್ಲಿ ಈ ಪೋಟೋವನ್ನು ಜೌಟ್ ಲುಕ್ ತನ್ನ ವೆಬ್ ಸೈಟ್ ನಲ್ಲೂ ಪ್ರಕಟಿಸಿದೆ. ಯೂಟ್ಯೂಬ್ ನಲ್ಲಿ ಲಭ್ಯವಿರುವ ಚಿತ್ರದ ವಿಡಿಯೋದ ಕೆಲವೊಂದು ಭಾಗವನ್ನು, ಸೆರೆ ಹಿಡಿದಿರುವ ಕಿಡಿಗೇಡಿಗಳು, ತಿರುಚಿದ ಅಡಿಬರಹದಡಿ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದಾದ ಬಳಿಕ ಹಾಲಿವುಡ್ ನ ಕ್ವಾಂಟಿಕೋ ಧಾರವಾಹಿಯ ಪ್ರಚಾರಕ್ಕಾಗಿ ಬುರ್ಖಾ ಧರಿಸಿದ್ದ ನಟಿ ಪ್ರಿಯಾಂಕ ಚೋಪ್ರಾ, ಇದನ್ನು ಟ್ವೀಟ್ ಮಾಡಿ, ಕ್ವಾಂಟಿಕೋದ ಪ್ರಚಾರಕ್ಕಾಗಿ ಬಳಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಯೋಗಿ ಆದಿತ್ಯಾನಾಥ್ ಕಿ ಸೇನಾ ಫೇಸ್ಬುಕ್ ಫೇಜ್ ನಲ್ಲಿ ಇದೇ ಫೋಟೋವನ್ನು ಬಳಸಿ, ತಪ್ಪು ಸಂದೇಶಗಳೊಂದಿಗೆ ಹರಿಬಡಿಲಾಗುತ್ತಿದ್ದು, ಇದೊಂದು ಸುಳ್ಳುಸುದ್ದಿ ಎಂಬುದನ್ನು ಆಲ್ಟ್ ನ್ಯೂಸ್ ತಂಡ ಇದೀಗ ಬಹಿರಂಗಪಡಿಸಿದೆ.

ಕ್ವಾಂಟಿಕೋದಲ್ಲಿ ಪ್ರಿಯಾಂಕ ಚೋಪ್ರಾ, ಭಯೋತ್ಪಾದನಾ ನಿಗ್ರಹ ಅಧಿಕಾರಿ ಅಲೆಕ್ಸ್ ಪ್ಯಾರಿಶ್ ಪಾತ್ರ ನಿಭಾಯಿಸಿದ್ದು, ಈ ಕಾಲ್ಪನಿಕ ಸರಣಿಯ ಕತೆಯೊಂದರಲ್ಲಿ ಮ್ಯಾನ್ ಹಟನ್ ನಲ್ಲಿ ನಡೆದ ಬಾಂಬ್ ದಾಳಿ ಹಿಂದೆ ಭಾರತೀಯ ರಾಷ್ಟ್ರೀಯ ವಾದಿಯ ಕೈವಾಡ ಇದೆ ಎಂದು, ಪ್ರಸಾರ ಮಾಡಲಾಗಿತ್ತು. ಹಿಂದೂ ರಾಷ್ಟ್ರೀಯವಾದಿಗಳನ್ನು ಭಯೋತ್ಪಾದಕರಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗಳು ಕೂಡ ನಡೆದಿದ್ದವು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More