ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೇರಿ ಕ್ಯೂರಿಯವರ ಭಾಷಣದ ಹಿಂದಿನ ಸತ್ಯವೇನು?

ಮೇರಿ ಕ್ಯೂರಿ ರೇಡಿಯಮ್‌ಅನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ನೊಬೆಲ್ ಪ್ರಶಸ್ತಿ ಪುರಸ್ಕೃತ ಮೇರಿ ಕ್ಯೂರಿಯವರು ಮಾಡಿದ ಭಾಷಣದ ತುಣುಕು ಇದಾಗಿದೆ ಎಂಬ ಅಡಿಬರಹದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವ ವಿಡಿಯೋದ ಹಿಂದಿನ ಸತ್ಯವೇನು ?

ಎರಡು ನೊಬೆಲ್ ಗಳನ್ನು ಪಡೆದ ಏಕೈಕ ವಿಜ್ಞಾನಿ ಹಾಗೂ ನೊಬೆಲ್ ಪಡೆದ ನೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೇರಿ ಕ್ಯೂರಿಯವರು ಮಾಡಿದ ಭಾಷಣದ ತುಣುಕು ಇದಾಗಿದೆ ಎಂಬ ಅಡಿಬರಹದಲ್ಲಿ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಮೇರಿಕ್ಯೂರಿಯವರ ಜೀವನಕಥೆಯಾಧಾರಿತ ಚಿತ್ರದ ತುಣುಕಾಗಿದೆ.

ಮೇರಿ ಕ್ಯೂರಿಯವರ ಜೀವನಕತೆಯಾಧಾರಿತ , 'ಮೇಡಮ್ ಕ್ಯೂರಿ' ಚಿತ್ರ , ಮರ್ವಿನ್ ಲೆರಾಯ್ ನಿರ್ದೇಶನದಲ್ಲಿ1943ರಲ್ಲಿ ತೆರೆಕಂಡಿತು. ಚಿತ್ರದಲ್ಲಿ ಗ್ರೀರ್ ಗಾರ್ಸನ್, ವಾಲ್ಟರ್ ಪಿಡ್ಜೆನ್ , ಹೆನ್ನಿ ಟ್ರಾವರ್ಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗ್ರೀರ್ ಗಾರ್ಸನ್, ಮೇರಿ ಕ್ಯೂರಿಯ ಪಾತ್ರವನ್ನು ನಿರ್ವಹಿಸಿದ್ದರು. 1943ರ ಡಿಸೆಂಬರ್ 15ರಂದು ತೆರೆಕಂಡ ಈ ಚಿತ್ರದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೇರಿ ಕ್ಯೂರಿಯೇ ಸ್ವತಃ ಭಾಷಣ ಮಾಡಿದ ಚಿತ್ರದ ತುಣುಕು ಇದಾಗಿದೆ ಎಂದು ಬಿಂಬಿಸಲಾಗಿದೆ.

ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂಬ ರಾಹುಲ್ ಹೇಳಿಕೆ ಹಿಂದಿನ ಸತ್ಯಾಸತ್ಯತೆ ಏನು?
ಫಸಲ್ ಭೀಮಾ ಯೋಜನೆಯಿಂದ ರೈತರ ಲಾಭ ದುಪ್ಪಟ್ಟಾಗಿದ್ದು ನಿಜವೇ?
ಯಶ್ ಕೊಲೆಗೆ ಸಂಚು ನಡೆದದ್ದು ನಿಜವೇ? ಸಿಸಿಬಿ ನೀಡಿರುವ ಸ್ಪಷ್ಟನೆ ಏನು?
Editor’s Pick More