ಬಲಪಂಥ ಪ್ರಚಾರಕ್ಕೆಂದು ಇರುವ ಫೇಸ್‌ಬುಕ್ ಪುಟಗಳಲ್ಲಿ ನಿಜಕ್ಕೂ ಏನಿದೆ ಗೊತ್ತೇ?

ರಾಜಕೀಯ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ರಚನೆಯಾಗಿರುವ ಕೆಲವು ಬಲಪಂಥೀಯ ಹೆಸರಿನ ಫೇಸ್ಬುಕ್ ಪೇಜ್‌ಗಳು ತಮ್ಮ ಉದ್ದೇಶ ಮರೆತು, ಆಶ್ಲೀಲತೆ ಹಾಗೂ ಕೋಮುದ್ವೇಷಕ್ಕೆ ಜಾರಿವೆ. ಲಕ್ಷಾಂತರ ಮಂದಿ ಫಾಲೋಯರ್ಸ್‌ಗಳಿರುವ ಈ ಫೇಸ್ಬುಕ್ ಪೇಜ್‌ಗಳು ಸುಳ್ಳು ಸುದ್ದಿಗೂ ಹೆಸರುವಾಸಿ

ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಸುಳ್ಳುಸುದ್ದಿಯನ್ನು ಹಾಗೂ ಆಶ್ಲೀಲತೆಯನ್ನು ಹರಡುವ ತಾಣವಾಗುತ್ತಿವೆಯೇ ಎಂಬುದು ಇತ್ತೀಚಿನ ಕೆಲವು ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ, ರಾಜಕೀಯ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ರಚನೆಯಾಗಿರುವ ಕೆಲವೊಂದು ಬಲಪಂಥೀಯ ಹೆಸರಿನ ಫೇಸ್ಬುಕ್ ಪೇಜ್‌ಗಳು ತಮ್ಮ ಉದ್ದೇಶವನ್ನು ಮರೆತು, ಆಶ್ಲೀಲತೆ ಹಾಗೂ ಕೋಮುದ್ವೇಷವನ್ನು ಉಂಟುಮಾಡುವಂಥ ಪ್ರಯತ್ನಕ್ಕೆ ಕೈ ಹಾಕಿವೆ. ಲಕ್ಷಾಂತರ ಮಂದಿ ಫಾಲೋಯರ್ಸ್‌ಗಳಿರುವ, ರಾಜಕೀಯ ಉದ್ದೇಶಕ್ಕೆ ರಚನೆಯಾದ ಈ ಫೇಸ್ಬುಕ್ ಪೇಜ್‌ಗಳಲ್ಲಿ ಬಹುತೇಕ ಪೋಸ್ಟ್‌ಗಳು ಸತ್ಯಕ್ಕೆ ದೂರವಾದ, ತಿರುಚಿದ, ಲೈಂಗಿಕ ವಿಚಾರಗಳ ಅಶ್ಲೀಲ ಸುದ್ದಿಗಳನ್ನು ಬಿತ್ತರಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾದ 10 ಫೇಸ್ಬುಕ್ ಪೇಜ್‌ಗಳ ಕುರಿತಂತೆ ‘ಆಲ್ಟ್ ನ್ಯೂಸ್’ ತಂಡ ಸುದ್ದಿ ಮಾಡಿದೆ.

ನಮೋ (@isuportNamo)

ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಮಂಡ್ಸೂರ್ ಅತ್ಯಾಚಾರಿ ಆರೋಪಿ ಇರ್ಫಾನ್‌ಗೆ ಬೆಂಬಲ ನೀಡಿದ್ದಾರೆ ಎಂಬ ಸುಳ್ಳುಸುದ್ದಿಯನ್ನು 'ನಮೋ' ಫೇಸ್ಬುಕ್ ಪೇಜ್ ಪೋಸ್ಟ್ ಮಾಡಿತ್ತು. ಈ ಸುಳ್ಳುಸುದ್ದಿಯನ್ನು 5 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು. ಈ ಸುಳ್ಳುಸುದ್ದಿಯ ಪರಿಣಾಮ, ಪ್ರಿಯಾಂಕ ಹಾಗೂ ಅವರ ಪುತ್ರಿಗೆ ಅತ್ಯಾಚಾರದಂತಹ ಬೆದರಿಕೆಗಳು ಬಂದಿದ್ದವು.

2014ರಿಂದ ನಮೋ ಫೇಸ್ಬುಕ್ ಪೇಜಿನ ಫಾಲೋಯರ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದರಲ್ಲಿ ಶೇರ್ ಮಾಡಲಾಗುವ ಧಾರ್ಮಿಕ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ವಿಚಾರಗಳನ್ನು ಸಾವಿರಾರು ಮಂದಿ ಶೇರ್ ಮಾಡುತ್ತಿದ್ದಾರೆ. ನಮೋ ಫೇಸ್ಬುಕ್ ಪೇಜಿನಲ್ಲಿ ಇತ್ತೀಚೆಗೆ ಈ ಸ್ಟಾರ್ ಆಮಿರ್ ಖಾನ್ ಮಗಳ ಕುರಿತ ಪೋಸ್ಟ್ ಹಾಕಲಾಗಿತ್ತು. ಇದನ್ನು 4,500ರಷ್ಟು ಮಂದಿ ಲೈಕ್ ಮಾಡಿದ್ದರು. ಇಂತಹ ಕೆಟ್ಟ ಅಭಿರುಚಿಯ ಇನ್ನುಷ್ಟು ಸುದ್ದಿಗಳು ಕೂಡ ಈ ಪೇಜಿನಲ್ಲಿದೆ.

ವಿ ಸಪೋರ್ಟ್ ನರೇಂದ್ರ ಮೋದಿ

2016ರಲ್ಲಿ ರಚಿಸಲಾಗಿರುವ ‘We Support Narendra Modi’ ಫೇಸ್ಬುಕ್ ಪೇಜ್ ಕೇವಲ ಎರಡು ವರ್ಷಗಳಲ್ಲೇ 2 ಮಿಲಿಯನ್‌ನಷ್ಟು ಫಾಲೋವರ್ಸ್‌ಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಈ ಪೇಜಿನಲ್ಲಿ ಶೇರ್ ಮಾಡಲಾದ ಕೆಲವೊಂದು ಪೋಸ್ಟ್‌ಗಳು ಆಶ್ಲೀಲವಾಗಿದ್ದು, ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ.

ನಮೋ (@indiapmmodi)

ನಮೋ ಎಂದು ಹೆಸರಿರುವ ಮತ್ತೊಂದು ಫೇಸ್ಬುಕ್ ಪೇಜ್ 2016ರಲ್ಲಿ ಶಾಯರ್ ಇಷ್ಕ್ ಮತ್ತು ಆಯೇಷಾ ಸಿದ್ದಿಕಿಯ ತಮಾಷೆ ವಿಚಾರಗಳು ಎಂಬ ವಿಚಾರದಲ್ಲಿ ಕ್ರಿಯೇಟ್ ಆಗಿದ್ದು, ಈ ಪೇಜ್ ತುಂಬಾ ಆಶ್ಲೀಲ ಮತ್ತು ಅಸಹ್ಯಕರ ವಿಚಾರಗಳೇ ತುಂಬಿವೆ. ಜನಪ್ರಿಯ ಬಾಲಿವುಡ್ ನಟಿಯರ ಒಳಉಡುಪುಗಳು ಹಾಗೂ ಇನ್ನಿತರ ಆಶ್ಲೀಲ ಫೋಟೋಗಳನ್ನೇ ಇದರಲ್ಲಿ ಶೇರ್ ಮಾಡಲಾಗಿದ್ದು, ಈ ಪೇಜಿನಲ್ಲಿ 5 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

ಭಕ್ತ್ ಹು ಶ್ರೀ ರಾಮ್ ಕಾ (Bhakt hu Shri Ram ka)

ಹಿಂದೂ ಧಾರ್ಮಿಕ ವ್ಯಕ್ತಿಗೆ ಸಮರ್ಪಿತವಾಗಿರುವ 'ಭಕ್ತ್ ಹು ಶ್ರೀ ರಾಮ್ ಕಾ' ಎಂಬ ಪೇಜಿನಲ್ಲಿ, “ಮದುವೆಗೆ ಮುಂಚೆ ಗರ್ಭವತಿಯಾದ ಬಾಲಿವುಡ್ ನಟಿಯರಿವರು, ಇದರಲ್ಲಿ ಮೂರನೆಯವರ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾಗುವುದು,” ಎಂಬ ಶೀರ್ಷಿಕೆಯಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದೆ. ತಾಯಿಯೊಂದಿಗೆ ಈ ಹುಡುಗಿ ಕೆಟ್ಟ ಅಭಿರುಚಿಯ ನೃತ್ಯವನ್ನು ರೆಕಾರ್ಡ್ ಮಾಡುತ್ತಿದ್ದಳು ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಇದನ್ನು 7 ಲಕ್ಷ ಮಂದಿ ಲೈಕ್ ಮಾಡಿದ್ದರೆ, ಹಲವು ಮಂದಿ ಶೇರ್ ಮಾಡಿದ್ದಾರೆ.

ವಿ ಸಪೋರ್ಟ್ ಇಂಡಿಯಾ

2017ರಲ್ಲಿ ಕ್ರಿಯೆಟ್ ಆದ ಈ ಫೇಸ್ಬುಕ್ ಪೇಜಿನಲ್ಲಿ 6 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಈ ಪೇಜಿನಲ್ಲಿ , 36 ವರ್ಷದ ಈ ನಟಿಗೆ ರಾಹುಲ್ ದ್ರಾವಿಡ್ ಎಂದರೆ ಇಷ್ಟವಂತೆ ಎಂಬ ಅಡಿಬರಹದಲ್ಲಿ ಸುದ್ದಿಯೊಂದಿಗೆ ಪ್ರಕಟಿಸಲಾಗಿದ್ದು, ನಟಿಯ ಹೆಸರಿನಲ್ಲಿ ಬಳಸಲಾದ ಫೋಟೋ ಆಶ್ಲೀಲವಾಗಿದೆ. ಇನ್ನು, “ಹೆಂಡತಿಯ ರೂಮಿನಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಪತಿ ಕಂಡಿದ್ದೇನು?” ಎಂಬ ಶೀರ್ಷಿಕೆಯಡಿ ಇನ್ನೊಂದು ಸುದ್ದಿ ಪ್ರಕಟವಾಗಿದೆ.

ರಾಷ್ಟ್ರ ಭಕ್ತ ಸೇನಾ

ಸ್ಮೃತಿ ಇರಾನಿ ಅವರ ಅಭಿಮಾನಿಗಳ ಪೇಜ್ ರಾಷ್ಟ್ರ ಭಕ್ತ ಸೇನಾದಲ್ಲಿ ಹಲವು ಆಕ್ಷೇಪಾರ್ಹ ಸುದ್ದಿಗಳಿದ್ದು, ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸಲಾಗಿರುವ ಫೋಟೋಗಳು ಹಾಗೂ ಪೋಸ್ಟ್‌ಗಳು ಇದರಲ್ಲಿವೆ. 12 ಲಕ್ಷ ಫಾಲೋವರ್ಸ್ ಇದ್ದಾರೆ.

ಇನ್ಸಿಸ್ಟಾ

ಅಂಕಿತ್ ಕುಮಾರ್ ಎಂಬ ಹೆಸರಿನ ವ್ಯಕ್ತಿ ನಡೆಸುತ್ತಿರುವ InsistPost.com ಪೇಜಿನಲ್ಲಿ ಶೇರ್ ಮಾಡುವ ಸುದ್ದಿಗಳು ಆಶ್ಲೀಲವಾಗಿದ್ದು, ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಹೆಲವು ವಿಚಾರಗಳನ್ನು ಇಲ್ಲಿ ಹಂಚಲಾಗುತ್ತಿದೆ. ಮಹಿಳೆಯರ ಎದೆಭಾಗ, ಸೊಂಟ ಹಾಗೂ ಕಾಲನ್ನು ಹೆಚ್ಚು ಫೋಕಸ್ ಮಾಡಿದ ಫೋಟೋಗಳನ್ನು ಬಳಸಲಾಗಿದೆ. 15 ಲಕ್ಷ ಫೋಲೋಯರ್ಸ್ ಇದ್ದಾರೆ.

ಸೋಚ್ ಬೊಲ್ತಾ ಕಡ್ವಾ ತೊ ಲಗೇಗಾ ಹೈ

ಸೋಚ್ ಬೊಲ್ತಾ ಕಡ್ವಾ ತೊ ಲಗೇಗಾ ಹೈ ಹೆಸರಿನ ಫೇಸ್ಬುಕ್ ಪೇಜಿನಲ್ಲಿ ಹಾಸ್ಯಗಳು, ಶಾಯರಿಗಳು, ರಾಜಕೀಯ ವಿಚಾರಗಳು, ಧಾರ್ಮಿಕ ವಿಚಾರಗಳು, ತಾಯಿಯ ಪ್ರೀತಿ, ಸಿನಿಮಾ ವಿಚಾರಗಳು, ಸಂಜಯ್ ದತ್ ಅವರ ಪತ್ನಿಯ ಹಾಟ್ ಫೋಟೋಗಳು, ಮಡದಿಯ ರೂಮಿನಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತಿ ಕಂಡಿದ್ದೇನು ಎಂಬ ವಿಚಾರ, ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ವೈಯಕ್ತಿಕ ವಿಡಿಯೋಗಳನ್ನು ಶೇರ್ ಮಾಡಲಾಗಿದೆ. 3 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

ಅಟಲ್ ಮೋದಿ

ಎರಡು ವರ್ಷಗಳ ಹಿಂದೆಯೇ ಅಟಲ್ ಮೋದಿ ಫೇಸ್ಬುಕ್ ಪೇಜಿನಲ್ಲಿ 17 ಲಕ್ಷ ಫಾಲೋವರ್ಸ್ ಇದ್ದಾರೆ. ವಯಸ್ಸಾದ ಅಧ್ಯಾಪಕ ಹಾಗೂ ವಿದ್ಯಾರ್ಥಿನಿ ನಡುವಿನ ಸಂಬಂಧ, ಈ ಮಹಿಳೆ ಬಾಯ್ ಪ್ರೇಂಡ್ ಜೊತೆ ಮಾಡಿದ್ದೇನು? ವಿದ್ಯಾರ್ಥಿಗಳಿಗೆ ಆಶ್ಲೀಲ ಪಾಠ ಹೇಳಿಕೊಡುವ ವಿಶ್ವದ ಐದು ಶಾಲೆಗಳು ಮತ್ತಿತರ ಶೀರ್ಷಿಕೆಯ ಸುದ್ದಿಗಳು ಇದರ ವಿಶೇ‍ಷ.

ಬಾರ್ ಬಾರ್ ಮೋದಿ ಸರ್ಕಾರ್- ಮೋದಿ ಫಾರೆವರ್

ಈ ಪೇಜಿನಲ್ಲಿ ಮೂರು ಮಿಲಿಯನ್ ಫಾಲೋವರ್ಸ್ ಇದ್ದಾರೆ. ಪೇಜ್ ತುಂಬಾ ಸುಳ್ಳು ಸುದ್ದಿಗಳು ಹಾಗೂ ಕೋಮು ವಿಚಾರಗಳೇ ತುಂಬಿವೆ. ಬಾಲಿವುಡ್ ನಟಿಯರ ಕೆಲವೊಂದು ಆಶ್ಲೀಲ ಫೋಟೋಗಳನ್ನು ಕೂಡ ಇಲ್ಲಿ ಪೋಸ್ಟ್ ಮಾಡಲಾಗಿದೆ. ನಟಿಯರ ತೇಜೋವಧೆ ಮಾಡುವಂತಹ ಕೆಲವೊಂದು ಲೇಖನಗಳು ಕೂಡ ಇಲ್ಲಿವೆ.

ಇಂತಹ ಇನ್ನಷ್ಟು ಸುಳ್ಳು ಸುದ್ದಿಗಳು ಹಾಗೂ ಆಶ್ಲೀಲ ಸುದ್ದಿಗಳನ್ನು ಪ್ರಕಟಿಸುವ ಫೇಸ್ಬುಕ್ ಪೇಜ್‌ಗಳಿದ್ದು, ಇವುಗಳು ಬಲಪಂಥೀಯ ಹೆಸರಿನಲ್ಲಿ ಆರಂಭವಾಗಿವೆ. ಆದರೆ ಇವುಗಳ ಉದ್ದೇಶ ಮಾತ್ರ ಬೇರೆಯದ್ದೇ ಆಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More