ಗಂಗೂಲಿ ಹೆಸರಲ್ಲಿರುವ ಇನ್ಸ್ಟಾಗ್ರಾಮ್ ಖಾತೆ ನಿರ್ವಹಿಸುತ್ತಿರೋದು ಯಾರು?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿರುವ @sganguly99 ಹ್ಯಾಂಡಲ್‌ನ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ 51 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಆದರೆ, ಈ ಸಾಮಾಜಿಕ ಜಾಲತಾಣದ ಪುಟವನ್ನು ಗಂಗೂಲಿ ನಿರ್ವಹಿಸುತ್ತಿಲ್ಲವಂತೆ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿರುವ @sganguly99 ಹ್ಯಾಂಡಲ್‌ನ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ 51 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರೇ ಈ ಅಕೌಂಟ್ ನಿರ್ವಹಿಸುತ್ತಿದ್ದಾರೆ ಎಂಬ ನಂಬಿಕೆ ಮೇಲೆ 51 ಸಾವಿರ ಮಂದಿ ಈ ಅಕೌಂಟ್ ಅನ್ನು ಫಾಲೋ ಮಾಡುತ್ತಿದ್ದಾರೆ. ಈ ಅಕೌಂಟ್ ಗಂಗೂಲಿ ಅವರೇ ನಿರ್ವಹಿಸುತ್ತಿದ್ದಾರೆ ಎಂಬ ಜನರ ನಂಬಿಕೆಗೆ ಕಾರಣವಾಗಿರುವುದು ಗಂಗೂಲಿ ಅವರ ಟ್ವಿಟರ್ ಅಕೌಂಟ್ ಹ್ಯಾಂಡಲ್. @SGanguly99 ಹ್ಯಾಂಡಲ್‌ನ ಟ್ವಿಟರ್‌ನಲ್ಲಿ ಗಂಗೂಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಈ ನಂಬಿಕೆ ಬೆಳೆದಿದೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಇದೀಗ ಸೌರವ್ ಗಂಗೂಲಿ, ಟ್ವೀಟ್ ಮಾಡಿ, “ನಾನು ಇನ್ಸ್ಟಾಗ್ರಾಮ್ ಖಾತೆ ಬಳಸುತ್ತಿಲ್ಲ. ಸದ್ಯಕ್ಕೆ ಚಾಲ್ತಿಯಲ್ಲಿರುವ @sganguly99 ಹ್ಯಾಂಡಲ್‌ನ ಇನ್ಸ್ಟಾಗ್ರಾಮ್ ಖಾತೆ ನನ್ನದಲ್ಲ. ಇದೊಂದು ನಕಲಿ ಅಕೌಂಟ್,” ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ ನಾಲ್ಕರಂದು ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯೋ ಸೋಲನುಭವಿಸಿತ್ತು. ಈ ಕುರಿತಂತೆ ಗಂಗೂಲಿ ಅವರ ಹೆಸರಿನಲ್ಲಿರುವ ಇನ್ಟಾಗ್ರಾಮ್ ಅಕೌಂಟ್‌ನಲ್ಲಿ, ಟೀಂ ಇಂಡಿಯಾಗೆ ಎಚ್ಚರಿಕೆಯ ಸಂದೇಶವೊಂದನ್ನು ಸೌರವ್ ಗಂಗೂಲಿ ರವಾನಿಸಿರುವ ಪೋಸ್ಟ್ ಇದೆ. “ಮೊದಲ ಟೆಸ್ಟ್ ಪಂದ್ಯ ಸೋತ ಮಾತ್ರಕ್ಕೆ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದ ಆಟಗಾರರಲ್ಲಿ ಬದಲಾವಣೆ ಮಾಡಲು ಅಥವಾ ಪ್ರಯೋಗ ಮಾಡಲು ಹೋಗಬೇಡಿ,” ಎಂದು ನಾಯಕ ವಿರಾಟ್ ಕೊಹ್ಲಿಗೆ ಸಲಹೆ ನೀಡಲಾಗಿತ್ತು. “ಮುರುಳಿ ವಿಜಯ್, ಅಜಿಂಕ್ಯಾ ರಹಾನೆ ಇನ್ನಷ್ಟು ಏಕಾಗ್ರತೆಯಿಂದ ಬ್ಯಾಟಿಂಗ್ ನಡೆಸಬೇಕಿದೆ," ಎಂಬ ಮಾತೂ ಅಲ್ಲಿತ್ತು.

ಈ ಪೋಸ್ಟ್ ಹಿಂದಿನ ಸತ್ಯವನ್ನು ಬಹಿರಂಗಪಡಿಸಿರುವ ‘ಬೂಮ್ ಲೈವ್’ ತಂಡ, ಹಿಂದಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ ಗಂಗೂಲಿ ನೀಡಿದ್ದ ಹೇಳಿಕೆಯನ್ನೇ ಫೇಕ್ ಅಕೌಂಟ್ ನಡೆಸುತ್ತಿರುವ ಕೆಲವರು ಪೋಸ್ಟ್ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More